ಬ್ರೇಕಿಂಗ್ ನ್ಯೂಸ್
20-03-25 01:07 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 20: ನನ್ನ ಮುಟ್ಟಬೇಡ, ಬ್ಯೂಟಿ ಹಾಳಾಗುತ್ತೆ ಅಂತ ಗಂಡನಿಗೆ ಹೆಂಡತಿಯೊಬ್ಬಳು ಡಿಮ್ಯಾಂಡ್ ಮೇಲೆ ಡಿಮ್ಯಾಂಡ್ ಮಾಡಿರೋ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು, ಹೆಂಡತಿ ಪ್ರತಿದಿನ ಕೊಡುವ ಕಾಟಕ್ಕೆ ಬೆಸತ್ತು ಆಕೆಯ ವಿರುದ್ಧವೇ ಗಂಡ ಶ್ರೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಬೆಂಗಳೂರಿನಲ್ಲಿ ಹೆಂಡತಿಯ ದೌರ್ಜನ್ಯಕ್ಕೆ ಅತುಲ್ ಸಂತೋಷ್ ಸಾವಿಗೀಡಾದ ಪ್ರಕರಣ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲಿಯೇ ಮತ್ತೊಂದು ಘಟನೆಯಲ್ಲಿ ಮಹಿಳೆಯೊಬ್ಬರು ತನ್ನ ಗಂಡನೊಂದಿಗೆ ಮಕ್ಕಳು ಮಾಡಿಕೊಳ್ಳುವುದು ಬೇಡವೆಂದು ಕಿರುಕುಳ ನೀಡಿದ ಘಟನೆ ನಡೆದಿದೆ. ನನಗೆ ಮದುವೆ ಬೇಕು, ಆದರೆ ಸಂಸಾರ ಬೇಡ. ಸಂಸಾರ ಆರಂಭಿಸಿ ಮಕ್ಕಳನ್ನು ಮಾಡಿಕೊಂಡರೆ ನನ್ನ ಸೌಂದರ್ಯ ಹಾಳಾಗುತ್ತದೆ. ನನ್ನನ್ನು ಮುಟ್ಟಬೇಡ ನನ್ನ ಬ್ಯೂಟಿ ಹಾಳಾಗತ್ತದೆ. ನಮಗೆ ಮಕ್ಕಳು ಬೇಡ ದತ್ತು ಮಕ್ಕಳನ್ನು ಸಾಕೋಣ ಎಂದು ಹೇಳಿದ್ದಾಳೆ. ಬೇಕಿದ್ರೆ 60 ವರ್ಷದ ನಂತರ ಮಕ್ಕಳನ್ನ ಮಾಡಿಕೊಳ್ಳೋಣ ಅಂತಿದ್ದಳಂತೆ ಪತ್ನಿ.
ಅಲ್ಲದೇ ಡಿವೋರ್ಸ್ ಕೊಡು ಇಲ್ಲ ಅಂದ್ರೆ 45 ಲಕ್ಷ ರೂ. ಕೊಟ್ಟು ನನ್ನ ಬಿಟ್ಟುಬಿಡು ಅಂತಳಂತೆ ಬ್ಯೂಟಿ . ಬಲವಂತವಾಗಿ ಮುಟ್ಟಿದ್ರೆ ಡೆತ್ ನೋಟ್ ಬರೆದಿಟ್ಟು ಸಾಯ್ತೀನಿ ಅಂತ ಹೆದರಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳಂತೆ. ಈಗಾಗಲೇ ಮದುವೆಗೆ ಲಕ್ಷಾಂತರ ಖರ್ಚು ಮಾಡಿ ಒಡವೆ ಮಾಡಿಸಿ ಕೊಟ್ಟಿದ್ದರಂತೆ. ಆದ್ರೆ ತಾಳಿ, ಕಾಲುಂಗುರ ಹಾಕಲ್ಲ ಅಂತ ಹೇಳುತ್ತಾಳೆ ಸರ್ ಅಂತ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಶ್ರೀಕಾಂತ ಮತ್ತು ಬಿಂದುಶ್ರೀಗೆ ಕಳೆದ ಎರಡು ವರ್ಷಗಳ ಹಿಂದೆ ಮದಿವೆಯಾಗಿದೆ. ಹನಿಮೂನ್‌ಗೆಂದು ಭಾರತದ ವಿವಿಧ ಪ್ರದೇಶಗಳಿಗೆ ಹೋಗಿ ಬಂದಿದ್ದಾರೆ. ಕಾಶ್ಮೀರಕ್ಕೂ ಹೋಗಿ ಬಂದಿರುವ ಜೋಡಿಯ ನಡುವೆ ಇನ್ನೂ ಮಕ್ಕಳು ಮಾಡಿಕೊಳ್ಳುವ ಸಂಸಾರವೇ ನಡೆದಿಲ್ಲವಂತೆ. ಗಂಡನೇ ಬಲವಂತವಾಗಿ ಮುಟ್ಟಿದರೆ ಡೆಟ್ ನೋಟ್ ಬರೆದಿಟ್ಟು ಸಾಯುತ್ತೀನಿ ಎಂದು ಹೆಂಡತಿ ಬ್ಲಾಕ್‌ಮೇಲ್ ಮಾಡಿದ್ದಾಳಂತೆ. ಮನೆಯವರು ಮದುವೆಯಾಗಿ 2 ವರ್ಷ ಆಯ್ತು, ಮಕ್ಕಳು ಯಾವಾಗ ಮಾಡಿಕೊಳ್ತೀರಿ ಎಂದು ಕೇಳುವ ಹಿರಿಯರಿಗೆ ಉತ್ತರ ಕೊಡಲಾಗದೇ ಶ್ರೀಕಾಂತ ಪರದಾಡುತ್ತಿದ್ದಾನೆ.
ಗಂಡ-ಹೆಂಡತಿ ಆಗಿದ್ದೀವಿ ಸಂಸಾರಕ್ಕಾದರೂ ಒಪ್ಪಿಕೊಳ್ಳುವಂತೆ ಕೇಳಿದರೆ, ನೀನು ಯಾರ ಪಕ್ಕನಾದರೂ ಹೋಗಿ ಮಲಗಿಕೋ.. ಆದರೆ, ನನ್ನ ಬಳಿ ಮಾತ್ರ ಬರಬೇಡಾ ಎನ್ನುತ್ತಿದ್ದಾಳಂತೆ. ಇದರಿಂದ ತೀವ್ರ ಬೇಸತ್ತ ಗಂಡ ಶ್ರೀಕಾಂತ ಸದ್ಯ ಹೆಂಡತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಮಲ್ಲೇಶ್ವರಂ ಬಳಿಯ ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲು ಮಾಡಿದ್ದಾರೆ..
ಮಕ್ಕಳು ಮಾಡೋಕೆ ಬಿಡ್ತಿಲ್ಲವೆಂದು ದೂರು ಕೊಟ್ಟ ಗಂಡನ ನೀಚ ಬುದ್ಧಿ ಬಿಚ್ಚಿಟ್ಟ ಹೆಂಡತಿ ;
ನಾವಿಬ್ಬರೂ ಮದುವೆಯಾಗಿ ಎರಡು ವರ್ಷ ಕಳೆದಿದೆ. ಆದರೆ, ಈಗ ನನ್ನ ಹೆಂಡತಿ ಸಂಸಾರ ಮಾಡಲು ಒಪ್ಪುತ್ತಿಲ್ಲವೆಂದು ಸುಳ್ಳು ಹೇಳಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಆಡಿಯೋ ವಿಡಿಯೋ ಎಡಿಟ್ ಮಾಡಿ ಮಾಧ್ಯಮಗಳ ಮುಂದೆ ಕೊಟ್ಟಿದ್ದಾರೆ ಎಂದು ಗಂಡ ಶ್ರೀಕಾಂತ್ ವಿರುದ್ಧ ಹೆಂಡತಿ ಬಿಂದುಶ್ರೀ ಆರೋಪ ಮಾಡಿದ್ದಾರೆ. ನನ್ನ ಹೆಂಡತಿ ತನ್ನ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಒಪ್ಪುತ್ತಿಲ್ಲ ಎಂದು ಹೇಳಿದ್ದ ಗಂಡನ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.
ನಮ್ಮ ತಂದೆ ತಾಯಿ 40 ಲಕ್ಷ ರೂ. ಕೊಟ್ಟು ಮದುವೆ ಮಾಡಿದ್ದಾರೆ. ಆದರೆ, ಗಂಡನ ಮನೆಗೆ ಹೋದ ನಂತರ ನನ್ನನ್ನು ಸರಿಯಾಗಿ ನೋಡಿಕೊಂಡಿಲ್ಲ. ದಿನಕ್ಕೆ ಮೂರು ಹೊತ್ತು ಸರಿಯಾಗಿ ಊಟ ಕೊಡೋದಿಲ್ಲ. ಹೀಗಾಗಿ ನಾನು ನನ್ನ ತಾಯಿ ಮನೆಗೆ ಹೋಗಿ ಬರುತ್ತಿದ್ದೆ. ನಾನು ಗಂಡನಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ನೀನು ಸರಿಯಾದರೆ ನಾನು ನಿನ್ನ ಜೊತೆ ಸಂಸಾರ ಮಾಡುತ್ತೇನೆ ಎಂದು ಅವರ ಬಳಿ ಹೇಳಿದ್ದೇನೆ. ನನಗೆ ಹೊಡೆದು, ಬಡಿದು ಮಾಡುತ್ತಿದ್ದರು. ಒಮ್ಮೆ ನಾನು ತಲೆ ಸುತ್ತಿ ಬಿದ್ದಿದ್ದೆ. ಇದೀಗ ದೂರು ಕೊಟ್ಟ ವೈಯಾಲಿಕಾವಲ್ ಪೊಲೀಸರು ಕರೆದರು ಬರುತ್ತಿಲ್ಲ ಎಂದು ಬಿಂದುಶ್ರೀ ಹೇಳಿದರು.
ಈಗ ದೂರು ಕೊಟ್ಟ ಗಂಡನೇ ಪೊಲೀಸ್ ಠಾಣೆಗೆ ಬರದೇ ಮಿಡಿಯಾಗಳ ಮುಂದೆ ಈ ರೀತಿ ಮಾತನಾಡುತ್ತಿದ್ದಾರೆ. ನಮ್ಮ ಅತ್ತೆ ತುಂಬಾ ಕಾಟ ಕೊಡುತ್ತಿದ್ದರು. ನಾನು ಸಂಸಾರ ಮಾಡಲು ಹಣ ಡಿಮ್ಯಾಂಡ್ ಮಾಡಿಲ್ಲ. ನಾನು ಮ್ಯೂಚುವಲ್ ತಗೊಳೋಕೆ ರೆಡಿ ಇದ್ದೀನಿ. ಆದರೆ, ಈಗ ಅವರೇ ಪೊಲೀಸ್ ಠಾಣೆ ಬನ್ನಿ ಎಂದರೂ ಬರುತ್ತಿಲ್ಲ. ಇದಕ್ಕೆ ನಾನು ದಾಖಲೆಗಳನ್ನು ಕೂಡ ಕೊಡುತ್ತೇನೆ. ಅವರಿಗೆ ಬೇಕಾಗಿರುವ ಆಡಿಯೋ ಹಾಗೂ ವಿಡಿಯೋ ಎಡಿಟ್ ಮಾಡಿ ಕಳಿಸಿದ್ದಾರೆ. ಪ್ರತಿಯೊಂದನ್ನ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ಮನೆಯನ್ನು ನಡೆಸಿಕೊಂಡು ಹೋಗುವುದಕ್ಕೆ ಇಡಿ ಮನೆಗೆ ಕೇವಲ ಅರ್ಧ ಲೀಟರ್ ಹಾಲು ಖರ್ಚು ಮಾಡಬೇಕು. ಮನೆಯವರಿಗೆ ಇಂತಿಷ್ಟು ಮಾತ್ರ ಅಕ್ಕಿ ಕೊಡುತ್ತಾರೆ. ಅವರು ಹೇಳಿದ್ದಕ್ಕಿಂತ ಸ್ವಲ್ಪ ಅಕ್ಕಿ ಜಾಸ್ತಿ ಹಾಕಿ ಅಡಿಗೆ ಮಾಡಿದರೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರು. ಹೀಗೆ ಮಾಡಿದರೆ ನಾನು ಹೇಗೆ ಇರೋದು. ತರಕಾರಿ ಇಲ್ಲದೆ ಅಡುಗೆ ಮಾಡಬೇಕಿತ್ತು. ಎರೆಡು ಟಮೋಟ ಹಾಕಿ ಸಾರು ಮಾಡಬೇಕು ಅಂತಾರೆ. ಇಲ್ಲಿದೆ ನೋಡಿ ಎಂದು ತರಕಾರಿ ಇಲ್ಲದ ಅನ್ನ ಸಾಂಬರ್ ಫೋಟೋವನ್ನು ಕೂಡ ತೋರಿಸಿದ್ದಾರೆ ಎಂದು ಗಂಡನ ಕುಟುಂಬದ ವಿರುದ್ಧ ಆರೋಪ ಮಾಡಿದ್ದಾರೆ.
In a unique and contentious divorce case from Bengaluru, Srikanth has filed a complaint against his wife Bindushree, alleging that her reluctance to have children is causing him emotional distress and "ruining" her beauty. Srikanth claims that Bindushree insists they should wait until they are 60 years old to start a family, a decision he argues is detrimental to their relationship.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm