ಬ್ರೇಕಿಂಗ್ ನ್ಯೂಸ್
23-02-25 06:38 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.23 : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎನ್ನುವ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಯತ್ನಾಳ್ ಬಣದ ನಾಯಕರು ಪಟ್ಟು ಹಿಡಿದಿದ್ದಾರೆ. ಶನಿವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಲ್ಲಿ ನಮ್ಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆಂದು ಹೇಳಿದರು.
ನಾವು ನಮ್ಮ ಹೋರಾಟದಿಂದ ಹಿಂದೆ ಸರಿದಿದ್ದೇವೆ ಎಂಬ ರೀತಿ ಸುದ್ದಿ ಹರಡಲಾಗುತ್ತಿದೆ. ಆದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ನಮ್ಮಲ್ಲಿಯೇ ಯಾರಾದರೊಬ್ಬರು ನಾಮಪತ್ರ ಸಲ್ಲಿಸುತ್ತೇವೆ. ನಮ್ಮ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಮುಂದಿನ ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಈಗಿನಿಂದಲೇ ಸಂಘಟನಾ ಕೆಲಸ ಮಾಡಿದರಷ್ಟೇ ಚುನಾವಣೆಗೆ ಪಕ್ಷವನ್ನು ಸನ್ನದ್ಧವಾಗಿಸಬಹುದು. ಆದರೆ, ಈಗಿನ ನಾಯಕತ್ವದಿಂದ ಪಕ್ಷವನ್ನು ಅಧಿಕಾರಕ್ಕೆ ತರುವುದು ಸಾಧ್ಯವಿಲ್ಲ. ಹೀಗಾಗಿಯೇ ರಾಜ್ಯಾಧ್ಯಕ್ಷರನ್ನು ಬದಲಿಸಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ಬಿಜೆಪಿ ಜಿಲ್ಲಾ ಘಟಕಗಳ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಕೆಜೆಪಿ ನಾಯಕರೇ ಹೆಚ್ಚಿದ್ದಾರೆ. ಈ ಬಗ್ಗೆ ಜಿಲ್ಲಾ ಕೇಂದ್ರಗಳಲ್ಲಿ ಅಸಮಾಧಾನ ಹೆಚ್ಚಿದೆ. ಹೀಗಿದ್ದರೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ನಮ್ಮ ಬಣದಿಂದ ಯಾರು ಕಣಕ್ಕೆ ಇಳಿಯಬೇಕು ಎಂಬುದನ್ನ ನಿರ್ಧರಿಸುತ್ತೇವೆಂದು ಹೇಳಿದರು.
ರಾಜ್ಯದ ಬೆಳವಣಿಗೆಗಳ ಬಗ್ಗೆ ನಾವು ಹೈಕಮಾಂಡ್ಗೆ ಮಾಹಿತಿ ನೀಡಿದ್ದೇವೆ. ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿಯುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣಾ ಪ್ರಕ್ರಿಯೆ ನಡೆಸಲು ರಾಜ್ಯದ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಗಮಿಸಲಿದ್ದಾರೆಂದು ಹೇಳಿದರು. ಯತ್ನಾಳ್ ಹೈಕಮಾಂಡ್ ನೋಟಿಸ್ಗೆ ಉತ್ತರಿಸಿದ್ದಾರೆ. ನಾವು ಕೂಡ ಅವರೊಂದಿಗಿದ್ದೇವೆ. ಹೈಕಮಾಂಡ್ ನೋಟಿಸ್ನಿಂದ ನಮ್ಮಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಆರ್ಎಸ್ಎಸ್ ಮತ್ತು ಹೈಕಮಾಂಡ್ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಹೈಕಮಾಂಡ್ ನನ್ನನ್ನು ಪರಿಗಣಿಸಿದರೆ, ನಾನು ಕೂಡ ರಾಜ್ಯಾಧ್ಯಕ್ಷನಾಗಲು ಸಿದ್ಧ ಎಂದು ಕುಮಾರ್ ಬಂಗಾರಪ್ಪ ಹೇಳಿದರು.
BJP leader and former minister Kumar Bangarappa, on Saturday, claimed that the leadership change in Karnataka BJP is inevitable, and if given a chance, he was ready to take on the responsibility. Speaking to reporters, Bangarappa stated that the BJP state president election schedule is yet to be announced, and senior leader Shivraj Singh Chouhan has not yet arrived in Bengaluru to oversee the process.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 07:19 pm
Mangalore Correspondent
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
19-10-25 01:26 pm
Bangalore Correspondent
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm