ಬ್ರೇಕಿಂಗ್ ನ್ಯೂಸ್
04-02-25 03:09 pm Bangalore Correspondent ಕರ್ನಾಟಕ
ಬೆಂಗಳೂರು, ಫೆ 04: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪೊಲೀಸರು ದ್ವಿಚಕ್ರ ವಾಹನ ಸವಾರನಿಗೆ ಬರೋಬ್ಬರಿ 1.61 ಲಕ್ಷ ರೂ. ದಂಡ ವಿಧಿಸಿದ್ದು, ದಂಡದ ಮೊತ್ತವು ವಾಹನದ ಬೆಲೆಗಿಂತಲೂ ಹೆಚ್ಚಾಗಿದೆ.
ಪೊಲೀಸರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ, ಕೆಲ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ಅಂತಹವರ ವಿರುದ್ಧ ಪೊಲೀಸರು ದೂರು ದಾಖಲಿಸಿ ದಂಡ ವಿಧಿಸುತ್ತಿದ್ದಾರೆ. ಆದರೆ, ನಗರದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಪೊಲೀಸರನ್ನು ಲೆಕ್ಕಿಸದೆ ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾನೆ.
ಕೆಎ-05, ಜೆಎಕ್ಸ್-1344 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಸವಾರನು ಪೊಲೀಸರ ದಂಡಾಸ್ತ್ರಕ್ಕೂ ಜಗ್ಗದೆ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಜಂಪ್, ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ, ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳಲ್ಲಿ ವಾಹನದ ಪಾರ್ಕಿಂಗ್ ಸೇರಿದಂತೆ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ.
ಪೊಲೀಸರು ಆತನ ವಿರುದ್ಧ ದೂರು ದಾಖಲಿಸಿ 1.61 ಲಕ್ಷ ರೂ. ದಂಡ ವಿಧಿಸಿದ್ದಾರೆ. ಈ ಸವಾರಿಗೆ ಕಳೆದ ವರ್ಷ 1,05,500 ರೂ. ದಂಡ ವಿಧಿಸಿದ್ದರೆ, ಈ ವರ್ಷ 56 ಸಾವಿರ ರೂ. ದಂಡ ವಿಧಿಸಲಾಗಿದೆ.
ದಂಡದ ಮೊತ್ತವು ಆತನ ದ್ವಿಚಕ್ರ ವಾಹನದ ಮೌಲ್ಯಕ್ಕಿಂತಲೂ ಹೆಚ್ಚಿದ್ದು, ಸಂಚಾರ ಪೊಲೀಸರು ಆ ಸವಾರನ ವಿರುದ್ಧ ಇನ್ನೂ ಯಾಕೆ ಕಠಿಣ ಕ್ರಮ ಕೈಗೊಂಡಿಲ್ಲ. ಆರ್ಟಿಒ ಅಧಿಕಾರಿಗಳು ಏಕೆ ಆತನ ವಾಹನ ಜಪ್ತಿ ಮಾಡಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆ ಬೆನ್ನಲ್ಲೇ ಕಾರ್ಯಪ್ರವೃತ್ತವಾದ ಬೆಂಗಳೂರು ಸಿಟಿ ಮಾರ್ಕೆಟ್ ಸಂಚಾರ ಠಾಣೆ ಪೊಲೀಸರು ವಾಹವನ್ನ ಜಪ್ತಿ ಮಾಡಿದ್ದಾರೆ
A two-wheeler worth not more than Rs 50,000 was fined Rs 1.61 lakh by the Bengaluru Traffic Police for 311 traffic fines pending since February 2023. On Monday, the City Market Traffic Police seized the scooter bearing the registration number KA 05 JX 1344 and nabbed the alleged driver who had committed over 300 traffic violations but had evaded paying the fines.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 10:32 pm
Mangalore Correspondent
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
19-10-25 11:09 pm
Mangalore Correspondent
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm