ಬ್ರೇಕಿಂಗ್ ನ್ಯೂಸ್
17-12-24 11:30 am HK News Desk ಕರ್ನಾಟಕ
ಮೈಸೂರು, ಡಿ.17: ಬೀದರ್ ನಲ್ಲಿ ಸರ್ವೆ ನಂ 73 ರಲ್ಲಿ 180 ಎಕರೆ ವಕ್ಫ್ ಆಸ್ತಿ ದುರುಪಯೋಗ ಆಗಿತ್ತು. ಗುಲ್ಬರ್ಗ ಜಿಲ್ಲೆಯಲ್ಲಿ ಕ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಸಂಬಂಧಪಟ್ಟ ಜಾಗ ದುರುಪಯೋಗವಾಗಿತ್ತು. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಕಮರುಲ್ ಇಸ್ಲಾಂ, ಸಿಎಂ ಇಬ್ರಾಹಿಂ ಸೇರಿದಂತೆ ಹಲವರು ಪಾಲುದಾರರಾಗಿದ್ದರು. ಅಲ್ಲಿ ದೊಡ್ಡ ವಾಣಿಜ್ಯ ಕಟ್ಟಡಗಳನ್ನು ಕಟ್ಟಿದ್ದಾರಲ್ಲ ಅದೆಲ್ಲಾ ಯಾರ ಆಸ್ತಿ. ಇದೆಲ್ಲ ಮಲ್ಲಿಕಾರ್ಜುನ ಅವರ ಪುತ್ರನಿಗೆ ಸೇರಿದ ಆಸ್ತಿಯಲ್ವಾ.? ಎಂದು ಬಿಜೆಪಿ ಮುಖಂಡ ಗೋ ಮಧುಸೂದನ್ ಪ್ರಶ್ನೆ ಮಾಡಿದ್ದಾರೆ.
ಮಾಜಿ ಎಂಎಲ್ಸಿ ಗೋ.ಮಧುಸೂದನ್ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಡ್ರೋಣ್ ಪ್ರತಾಪ್ ಇತ್ತೀಚಿಗೆ ದೊಡ್ಡ ಬಾಂಬ್ ಹಾಕ್ದ. ಆ ಡ್ರೋಣ್ ಪ್ರತಾಪ್ ರೀತಿ ಛೋಟಾ ಖರ್ಗೆ ಹಾಕಿದ್ರು. ಕರ್ನಾಟಕದ ಯಾವ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಚಕಾರೆತ್ತಲ್ಲ. ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಅನ್ವರ್ ಮಾಣಿಪ್ಪಾಡಿ ಮನೆಗೆ 150 ಕೋಟಿ ತೆಗೆದುಕೊಂಡು ಹೋಗಿದ್ರು ಎಂದು ಆರೋಪ ಮಾಡಿದ್ದಾರೆ. ಇದೊಂದು ಭಾರತದ ದೊಡ್ಡ ಜೋಕ್. ಕಾಂಗ್ರೆಸ್ ನಾಯಕರ ಮೇಲಿರುವ ಆರೋಪವನ್ನ ಹೊರ ತರಬಾರದು ಎಂದು 150 ಕೋಟಿ ಕೊಡಲಿಕ್ಕೆ ವಿಜಯೇಂದ್ರ ಅವರಿಗೇನು ಹುಚ್ಚು ಹಿಡಿದಿತ್ತಾ.?ಅನ್ವರ್ ಮಾಣಿಪ್ಪಾಡಿ ವಿಶೇಷ ವರದಿಯನ್ನು ಸಿಎಂ ಯಡಿಯೂರಪ್ಪ ಅವರಿಗೆ ಕೊಟ್ಟಿದ್ರು. ಅದನ್ನು ಈ ಹಿಂದೆ ಇದ್ದ ಸರ್ಕಾರ ಸದಾನಂದಗೌಡರು ತನಿಖೆ ಮಾಡಲು ಲೋಕಾಯುಕ್ತಕ್ಕೆ ಕಳಿಸಿಕೊಡ್ತಾರೆ. ಆಗ ತನಿಖೆ ಮಾಡಿ ಲೋಕಾಯುಕ್ತಾ ವರದಿಯನ್ನೂ ಕೊಡುತ್ತಾರೆ. ಜಸ್ಟೀಸ್ ಆನಂದ್ ಅವರು ಇದರ ಬಗ್ಗೆ ತನಿಖೆ ಮಾಡಿದ್ರು. 6 ವಾಲ್ಯೂಮ್ ಡಾಕ್ಯುಮೆಂಟ್ ಮಾಡಿ ವರದಿಯನ್ನ ಮುಂದೆ ಸಿಎಂ ಆದ ಸಿದ್ದರಾಮಯ್ಯ ಅವರಿಗೆ ಮಾಣಿಪ್ಪಾಡಿ ಕೊಟ್ಟಿದ್ದಾರೆ. ಅಂದು ನಾನು ಹಕ್ಕು ಬಾದ್ಯತಾ ಸಮಿತಿಯಲ್ಲಿ ಅಧ್ಯಕ್ಷನಾಗಿದ್ದೆ. 2013ರ ಸಮಿತಿಯಲ್ಲಿ ವೀರಣ್ಣ ಮತ್ತಿಕ್ಕಟ್ಟಿ ಅಧ್ಯಕ್ಷರಾಗಿದ್ರು. ಅವರ ಬಳಿಕ ನಾನು ಅಧ್ಯಕ್ಷನಾದೆ. ಐದು ಜನರ ಸಮಿತಿ ಇತ್ತು. ನಾವು ವೀರಣ್ಣ ಮತ್ತಿಕಟ್ಟಿ ಶುರುಮಾಡಿದ ತನಿಖೆಯನ್ನ ನಾವು ಮುಂದುವರೆಸಿದ್ದೆವು. ಅಂತಿಮ ವರದಿಯನ್ನೂ ಸಲ್ಲಿಸಿದ್ದು ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲೇ ಎಲ್ಲೆಲ್ಲಿ ದುರುಪಯೋಗ ಆಗಿದೆ.?ಎಷ್ಟು ದುರುಪಯೋಗ ಆಗಿದೆ ಎಂದು ಲೋಕಾಯುಕ್ತಕ್ಕೆ ಸಲ್ಲಿಸಿದ ವರದಿಯಲ್ಲಿದೆ.
ಇವರು ಬೇರೆಯವರ ಬಗ್ಗೆ ಮಾತನಾಡಲಿಕ್ಕೆ ಜೂನಿಯರ್ ಖರ್ಗೆ ಅವರಿಗೆ ಯಾವ ನೈತಿಕತೆ ಇದೆ.? ಎಂದು ಪ್ರಿಯಾಂಕ ಖರ್ಗೆಯನ್ನು ಪ್ರಶ್ನಿಸಿದ ಮಧುಸೂದನ್, ಬಂದೇ ನವಾಜ್ ಮುಸ್ಲಿಂ ಸಂತನ ಜಾಗವನ್ನು ಇವರು ಹೊಡೆದುಕೊಂಡಿದ್ದಾರೆ. ವಕ್ಪ್ ಆಸ್ತಿಯನ್ನ ಕಾಂಗ್ರೆಸ್ ನಾಯಕರೇ ಹೆಚ್ಚಾಗಿ ಹೊಡೆದುಕೊಂಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ್ ಖರ್ಗೆ, ಧರ್ಮಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರೇ ಸಹಕಾರ ಕೊಟ್ಟಿದ್ದಾರೆ.
ಅಂದಿಗೆ 2013-15ರ ವೇಳೆಗೆ 40 ಸಾವಿರ ಎಕರೆ ಆಸ್ತಿ ಕಬಳಿಕೆ ಆಗಿದೆ. ಈ ಬಗ್ಗೆ ಜಸ್ಟಿಸ್ ಆನಂದ್ ವರದಿ ಸಿಎಂ ಸಿದ್ದರಾಮಯ್ಯ ಕೈಯಲ್ಲಿದೆ. ತನಿಖೆ ಮಾಡಿಸಿದರೆ ಎಲ್ಲರ ಮುಖವಾಡವೂ ಹೊರಗೆ ಬರುತ್ತೆ ಎಂದು ಹೇಳಿದರು.
Former MLC and BJP leader G. Madhusudhan alleged that Chief Minister Siddaramaiah was trying to protect senior Congress leaders whose names figured in the Upa Lokayukta report over encroachment of Waqf property.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm