ಬ್ರೇಕಿಂಗ್ ನ್ಯೂಸ್
17-11-24 11:10 am Bangalore Correspondent ಕರ್ನಾಟಕ
ಬೆಂಗಳೂರು, ನ 17: ಕನ್ನಡದ ‘ಬಿಗ್ ಬಾಸ್ 11’ರ ಶೋ 8ನೇ ವಾರಕ್ಕೆ ಕಾಲಿಟ್ಟಿದೆ. ಇನ್ನೂ ಸಾಮಾನ್ಯವಾಗಿ ಯಾರ ಮೇಲೂ ಕೋಪ ಮಾಡಿಕೊಳ್ಳದ ಸುದೀಪ್ ಇದೀಗ ಚೈತ್ರಾ ಕುಂದಾಪುರ ಮೇಲೆ ಸಿಟ್ಟಾಗಿದ್ದಾರೆ. ಚೈತ್ರಾಗೆ ಸಖತ್ ಆಗಿ ಸುದೀಪ್ ವಾರಾಂತ್ಯದ ಎಪಿಸೋಡ್ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶುಕ್ರವಾರ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯ ಬಾತ್ರೂಮ್ನಲ್ಲಿ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ಬಳಿಕ ಬಿಗ್ಬಾಸ್ಗೆ ವಾಪಸ್ ಆದ್ಮೇಲೆ ಉಳಿದ ಸ್ಪರ್ಧಿಗಳ ಬಗ್ಗೆ ಹೊರಗಡೆ ಏನೆಲ್ಲಾ ನಡೆಯುತ್ತಿದೆ? ಸ್ಪರ್ಧಿಗಳ ಮೇಲೆ ಯಾವ ರೀತಿಯ ಬ್ಲಾಡ್ ಇಂಪ್ಯಾಕ್ಟ್ ಆಗಿದೆ ಅಂತ ಚೈತ್ರಾ ಸೂಚಿಸಿದರು.
ಇದೇ ವಿಚಾರವಾಗಿ ಶಿನಿವಾರ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಚೈತ್ರಾ ಮೇಲೆ ಕೆಂಡಕಾರಿದ್ದಾರೆ. ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ, ಬೆಳಗ್ಗೆ ಬಂದು ಅದನ್ನು ಸ್ಪರ್ಧಿಗಳಿಗೆ ಹೇಳುವ ಉದ್ದೇಶವೇನು ಅಂತ ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಆಗ ಚೈತ್ರಾ, ನಾನೇ ಡಾಕ್ಟರ್ ಹತ್ತಿರ ಕೆಲವೊಂದು ಕೇಳಿದ್ದೇ, ಅಲ್ಲಿದ್ದ ನರ್ಸ್ ಹೀಗೆ ಹೇಳಿದರು. ಪ್ರತಿಯೊಬ್ಬರ ಮೇಲಿನ ಅಭಿಪ್ರಾಯ ತಿಳಿಸಿದರು. ಅದು ನನ್ನ ಅಭಿಪ್ರಾಯ ಅಲ್ಲ ಎಂದರು. ತಪ್ಪು ಮಾಡಿ ಮಾತಿನಲ್ಲೇ ಸಮರ್ಥನೆ ಮಾಡಿಕೊಳ್ತಿದ್ದ ಚೈತ್ರಾ ಮೇಲೆ ಸುದೀಪ್ ರಾಂಗ್ ಆದರು. ಬಾಯಿ ಮುಚ್ಚುವಂತೆ ಚೈತ್ರಾಗೆ ಶ್.. ಎಂದು ಸನ್ನೆ ಮಾಡಿದರು. ಸುದೀಪ್ ಕೋಪ ಕಂಡು ಚೈತ್ರಾ ಕುಂದಾಪುರ ಗಪ್ ಚುಪ್ ಆದರು. ಮಾತು ನಿಲ್ಲಿಸಿ ಚೈತ್ರಾ ಕಣ್ಣೀರು ಹಾಕಿದರು. ಆ ನಂತರ ಉಸಿರು ಕಟ್ಟಿಸುವ ವಾತಾವರಣದಲ್ಲಿ ನನಗೆ ಇರೋಕೆ ಆಗಲ್ಲ. ಮನೆಗೆ ಕಳುಹಿಸಿ ಎಂದು ಚೈತ್ರಾ ಬಿಗ್ ಬಾಸ್ ಮನವಿ ಮಾಡಿದ್ದಾರೆ.
ಇನ್ನೂ ಹೊರಗಿನ ವಿಚಾರವನ್ನು ಸ್ಪರ್ಧಿಗಳು ಮನೆಯೊಳಗೆ ಚರ್ಚಿಸುವಂತಿಲ್ಲ ಎಂದು ಮನೆಯ ಮೂಲ ನಿಯಮವಾಗಿದೆ. ಅದಕ್ಕೆ ಅದನ್ನು ಸುದೀಪ್ ಚೈತ್ರಾಗೆ ಪ್ರಶ್ನೆ ಮಾಡಿದ್ದಾರೆ.
ಇಷ್ಟೇಲ್ಲ ಆದಾಗ ಕಿಚ್ಚ ಮನೆಯವರ ಬಳಿ ಒಪಿನಿಯನ್ ಕೇಳಿದರು. ಮತ್ತೆ ಚೈತ್ರಾ ಕೈ ಎತ್ತದೆ ಮಧ್ಯದಲ್ಲಿ ಮಾತನಾಡಿದರು. ಇದು ಕಿಚ್ಚನಿಗೆ ಸಿಟ್ಟು ತರಿಸಿ ನಾನು ಮೋಕ್ಷಿತಾ ಬಳಿ ಮಾತನಾಡುತ್ತಿದ್ದೇನೆ. ಮಧ್ಯದಲ್ಲಿ ಮಾತನಾಡಿದ್ರಾ? ಹಾಗಾದರೆ ಕೈ ಎತ್ತಬೇಕು ಎಂದು ನಾನು ಹೇಳಿದ್ದು ಬುಲ್ಶಿಟ್, ಟೋಟಲ್ ಡಿಸ್ ರೆಸ್ಪೆಕ್ಟ್, ಕೈ ಎತ್ತಿ ಎಂದು ಏರು ಧ್ವನಿಯಲ್ಲಿ ಚೈತ್ರಾಗೆ ಹೇಳಿದರು. ಒಂದೆರಡು ನಿಮಿಷ ಇಡೀ ಶೂಟಿಂಗ್ ಸೆಟ್ ಮತ್ತು ಬಿಗ್ಬಾಸ್ ಮನೆ ಮೌನ ತಾಳಿತು.
ಕಿಚ್ಚ ಮುಂದಕ್ಕೆ ಹೋಗೋಣ ಚೈತ್ರಾ ಎಂದಾಗ ಹೇಳಿದ ಮಾತಿಗೆ ಕ್ಷಮೆ ಕೇಳ್ತಿನಿ ಸರ್ ಎಂದರು, ಇದಕ್ಕೆ ಕಿಚ್ಚ ನಾನ್ಯಾಕಮ್ಮ ಕ್ಷಮೆ ಕೇಳ್ತೀರಿ. ನಾನು ಕ್ಷಮೆ ಕೇಳಿದಾಗ ನೀವು ಸ್ಪಂದಿಸಿಲ್ಲ. ನಿಮ್ಮ ಕ್ಷಮೆಗೆ ನಾನ್ಯಾಕೆ ಸ್ಪಂದಿಸಲಿ. ಅಯ್ಯೋ ತಲೆ ಕೆಟ್ ಮಗ ನಾನು. ಹುಚ್ಚ ಇಂದ ಕರಿಯರ್ ಶುರು ಮಾಡಿದವನು ನಾನು. 28 ವರ್ಷ ಹುಚ್ಚ ಆಗಿ ಬಾಳ್ ಬದುಕಿದೀನಿ. ಈಗ್ಯಾಕೆ ಸರಿ ಹೋಗ್ತೀನಿ, ನಾನು ಕ್ಷಮೆ ಕೇಳಿದಾಗ ಸ್ಪಂದಿಸಿದರೆ ಒಳ್ಳೆ ಮನುಷ್ಯ. ಇಲ್ಲ ಎಂದರೆ ನನ್ನಂತ ತಲೆಕೆಟ್ಟವರು ಯಾರೂ ಇಲ್ಲ’ ನಂಗೆ ಬೇಡ ಸಿಂಪಲ್ ಎಂದಿದ್ದಾರೆ ಸುದೀಪ್.
In the latest episode of Bigg Boss Kannada 11, Chaithra Kundapura found herself in the midst of controversy after discussing external opinions about her fellow contestants. After a task on the seventh week of the show, Chaithra collapsed in the bathroom and was rushed to the hospital. While she was being treated, she reportedly asked the doctor, nurse, and another person about their opinions on her co-contestants. Upon returning to the Bigg Boss house, she shared these opinions in the form of hints and stories, breaching the show's strict rule against discussing external matters inside the house.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm