ಬ್ರೇಕಿಂಗ್ ನ್ಯೂಸ್
07-11-24 06:49 pm Bangalore Correspondent ಕರ್ನಾಟಕ
ಬೆಂಗಳೂರು, ನ.7: ಕರ್ನಾಟಕದ ವಕ್ಫ್ ಬೋರ್ಡ್ ವಿವಾದ ತಾರಕಕ್ಕೇರುತ್ತಿದ್ದಂತೆ ಸಮಸ್ಯೆ ಆಲಿಸಲು ಸಂಸತ್ತಿನ ಜೆಪಿಸಿ ಅಧ್ಯಕ್ಷರೇ ಬಂದಿದ್ದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು, ರೈತರಿಂದ ಅಹವಾಲು ಸ್ವೀಕರಿಸುವ ಮೂಲಕ ವಕ್ಫ್ ಆಸ್ತಿ ಪರಿಶೀಲನೆಗೆ ಮುಂದಾಗಿದ್ದಾರೆ. ಇದೇ ವೇಳೆ, ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ನಡೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆದಿಯಾಗಿ ರಾಜ್ಯ ಸರ್ಕಾರದ ಸಚಿವರು, ಶಾಸಕರು, ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದ್ಕಡೆ, ತೇಪೆ ಹಚ್ಚುವ ಹೇಳಿಕೆಯನ್ನೂ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ವಕ್ಫ್ ಜಂಟಿ ಸದನ ಸಮಿತಿ ಪಕ್ಷದ ಕೆಲಸಕ್ಕೆ ಬಂದಿರುವಂತೆ ತೋರುತ್ತಿದೆ. ರಾಜ್ಯದಲ್ಲಿ ಅಹವಾಲು ಸ್ವೀಕಾರ ಮಾಡೋದಕ್ಕು ಮುನ್ನ ಸರ್ಕಾರದ ಗಮನಕ್ಕೆ ತರಬೇಕಿತ್ತು. ಅದನ್ನು ಮಾಡಿಲ್ಲ. ಜೊತೆಗೆ ಅಧ್ಯಕ್ಷರು ತನ್ನ ಎಲ್ಲ ಸದಸ್ಯರನ್ನೂ ಕರೆತರಬೇಕಿತ್ತು. ಜೆಪಿಸಿ ಒಂದು ನಾಟಕ ಕಂಪನಿ ಆಗಿದೆ. ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಪಹಣಿ ಪತ್ರಗಳಲ್ಲಿ ತಿದ್ದುಪಡಿ ಆಗಿದೆ. ಬಿಜೆಪಿ ಅವಧಿಯಲ್ಲಿ ರೈತರಿಗೆ ನೋಟಿಸ್ ಕೂಡ ಮಾಡಿದ್ದಾರೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಆಸ್ತಿ ಕಬಳಿಸೋ ಪ್ರಶ್ನೆ ಇಲ್ಲ. ಬಿಜೆಪಿ ಸರ್ಕಾರ ಮಾಡಿದ್ದ ತಪ್ಪನ್ನು ಸರಿಪಡಿಸಿ ನಾವು ರೈತರನ್ನ ಉಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯಕ್ಕೆ ಜೆಪಿಸಿ ಕಮಿಟಿ ಭೇಟಿ ರಾಜಕೀಯ ಪ್ರೇರಿತ. ಜಂಟಿ ಪಾರ್ಲಿಮೆಂಟ್ ಕಮಿಟಿ ಅಂದ್ರೆ ಏನು? ಕಮಿಟಿ ಭೇಟಿ ಅಂದ್ರೆ ಎಲ್ಲಾ ಸದಸ್ಯರು ಬರಬೇಕಲ್ವಾ? ಬರೀ ಅದ್ಯಕ್ಷಕರು ಮಾತ್ರ ಬಂದಿದ್ದಾರೆ. ಅವರ ಜೊತೆ ಯಾರಿದ್ದಾರೆ. ಬಿಜೆಪಿ ಮಾಜಿ ಎಂಪಿ ಇದ್ದಾರೆ. ಅವರೆಲ್ಲಾ ಕಮಿಟಿಗೆ ಏನು ಸಂಬಂಧ? ವಕ್ಫ್ ತೆಗೆಯಬೇಕು ಎಂದು ಬಿಜೆಪಿಯವರು ಹೇಳುತ್ತಾರೆ ಅಲ್ವಾ.. ಒಂದೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರನೇ ಇತ್ತು. ಆಗ ಏನು ಇವರು ಕತ್ತೆ ಕಾಯುತ್ತಿದ್ದರಾ ಎಂದು ವಾಗ್ದಾಳಿ ನಡೆಸಿದರು.
"Nothing but a BJP-sponsored committee": Priyank Kharge on JPC Chairman's Karnataka visit amid Waqf land issue.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm