ಬ್ರೇಕಿಂಗ್ ನ್ಯೂಸ್
04-11-24 05:56 pm HK News Desk ಕರ್ನಾಟಕ
ವಿಜಯಪುರ, ನ.4: ವಕ್ಪ್ ಬೋರ್ಡ್ ನಲ್ಲಿ ಲಕ್ಷಾಂತರ ಕೋಟಿ ಅವ್ಯವಹಾರವಾಗಿದೆ ಎಂದು ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಮಾಹಿತಿ ನೀಡಿದ್ದರು. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಆಸ್ತಿ ಹೊಡೆದುಕೊಂಡಿದ್ದಾರೆ. ಖಮರುಲ್ ಇಸ್ಲಾಂ, ರೆಹಮಾನ್ ಖಾನ್, ಸಿ.ಎಂ. ಇಬ್ರಾಹಿಂ, ಕೇರಳದ ಶಾಸಕರೊಬ್ಬರು ವಕ್ಪ್ ಆಸ್ತಿ ಹೊಡೆದುಕೊಂಡಿದ್ದಾರೆ ಎಂದಿದೆ. ಇವರೆಲ್ಲ ವಕ್ಪ್ ಆಸ್ತಿ ಹೊಡೆದು ಶ್ರೀಮಂತರಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ವಕ್ಪ್ ಆಸ್ತಿ ಬಗ್ಗೆ ನಿಜವಾದ ಕಳಕಳಿ ಇದ್ದರೆ ಅನ್ವರ್ ಮಾನ್ಪಾಡಿ ವರದಿಯನ್ನು ರಾಜ್ಯ ಸರ್ಕಾರ ಬಹಿರಂಗ ಮಾಡಲಿ ಎಂದು ಅವರು ಸವಾಲು ಹಾಕಿದ ಯತ್ನಾಳ್, ಹಿಂದೂಗಳನ್ನು ಸೈತಾನರಿಗೆ ಹೋಲಿಸಿ ಮಾತನಾಡುತ್ತಿದ್ದಾರೆ. ಜಮೀರ್ ಅಹ್ಮದ್ ಖಾನ್ ಸಚಿವರಾದ ನಂತರ ವಕ್ಫ್ ಹೆಸರಿನಲ್ಲಿ ಹಿಂದೂಗಳ ವಿರುದ್ಧ ಕೆಲಸ ಹೆಚ್ಚಾಗಿದೆ ಎಂದು ಯತ್ನಾಳ ಆರೋಪಿಸಿದ್ದಾರೆ.
ಫಾರ್ಮ್ ನಂ. 11ರಲ್ಲಿ ವಕ್ಫ್ ಎಂದು ಸೇರಿಸಿದ್ದಾರೆ. ಅನೇಕ ರೈತರಿಗೆ ನೊಟೀಸ್ ನೀಡದೇ ವಕ್ಫ್ ಹೆಸರು ಸೇರಿಸಿದ್ದಾರೆ. ಇದು ವಿಜಯಪುರ ಅಷ್ಟೇ ಅಲ್ಲ, ಮಂಗಳೂರು ವರೆಗೂ ಹರಡಿದೆ. ಉಡುಪಿಯಲ್ಲಿ ಒಂದು ಊರಿನ ಹೆಸರು ಬದಲಾವಣೆ ಮಾಡಿ ಸುಲ್ತಾನಪುರ ಎಂದು ಇಟ್ಟಿದ್ದಾರೆ ಎಂದು ಆರೋಪಿಸಿದರು. ಬಹಳ ದಿನಗಳಿಂದ ಷಡ್ಯಂತ್ರ ನಡೆದಿದೆ. ಜಮೀರ್ ಅಧಿಕಾರ ತೆಗೆದುಕೊಂಡ ಬಳಿಕ ಹೆಚ್ಚಾಗಿದೆ. ಇವರು ಹಿಂದೂ ಸಮಾಜವನ್ನು ಸೈತಾನ್ ಗೆ ಹೋಲಿಸಿ ಮಾತನಾಡುತ್ತಿದ್ದಾರೆ. 1974-75ರ ಗೆಜೆಟ್ ನೊಟೀಫಿಕೇಶನ್ ರದ್ದಾಗಬೇಕು. ಆ ಕಾಲದಲ್ಲಿ ಏನೆಲ್ಲಾ ಆಗಿದೆ, ಅದು ರದ್ದಾಗಬೇಕು. ಯಾವುದೇ ರೈತನ ಜಮೀನಿನಲ್ಲಿ ವಕ್ಪ್ ಎಂದು ಬರಬಾರದು. ಬ್ಯಾಂಕುಗಳು ರಾಷ್ಟ್ರೀಕರಣ ಆದಂತೆ ವಕ್ಫ್ ಆಸ್ತಿಗಳು ರಾಷ್ಟ್ರೀಕರಣ ಆಗಬೇಕು. ಈ ವಿಚಾರದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಯತ್ನಾಳ್ ಅವರು ಹೇಳಿದರು.
ಕಾಶ್ಮೀರದಲ್ಲಿ 370ನೇ ಕಲಂ ತೆಗೆದು ಹಾಕಲಾಗಿದೆ. ಅಯೋಧ್ಯೆ ವಿಚಾರದಲ್ಲಿ ನಾವು ಗೆದ್ದಿದ್ದೇವೆ. ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಆಗುವಷ್ಟು ಜಮೀನು ವಕ್ಪ್ ಕೈಯಲ್ಲಿದೆ. ಬದರಿನಾಥ ದೇವಾಲಯವು ಸಹ ಭದ್ರದ್ದೀನ್ ಶಹಟದ್ದು ಎಂದು ಹೇಳುತ್ತಾರೆ. ನಿತ್ಯ ಒಂದೊಂದು ಆಸ್ತಿ ನಮ್ಮದೇ ಎಂದು ಹೇಳುತ್ತಿದ್ದಾರೆ. ಇದೇ ರೀತಿಯಾದರೆ ಭಾರತ ಭಾರತವಾಗಿ ಉಳಿಯಲ್ಲ. ಹೀಗಾಗಿ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ವಕ್ಪ್ ಬೋರ್ಡ್ ವಿಚಾರವಾಗಿ ಮುಲ್ಲಾ, ಇನಾಮದಾರ ಹಾಗೂ ಇತರರು ಸಹ ಹೋರಾಟ ಮಾಡಿದ್ದಾರೆ. ಈಗ ಹಿಂದೂಗಳ ಆಸ್ತಿ ಪಡೆಕೊಂಡ ಬಳಿಕ ಮುಲ್ಲಾ, ಜಾಹಗೀರದಾರ, ಇನಾಮದಾರ ಅವರ ಜಮೀನು ವಾಪಸ್ ನೀಡುತ್ತೇವೆ ಎಂದು ಒಳ ಒಪ್ಪಂದ ಮಾಡಿಕೊಳ್ಳಬಹುದು ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದರು.
1939 ರಿಂದ ದೇಶದಲ್ಲಿ ಆಸ್ತಿ ಪತ್ರಗಳು ಇವೆ. ಅದರಲ್ಲಿ ಮುಸ್ಲಿಮ್ ಆಸ್ತಿ ಎಂದು ಉಲ್ಲೇಖವಿಲ್ಲ. ಅಲ್ಲಾಹಗೆ ದಾನ ನೀಡಿದ ದಾನ ಪತ್ರವೂ ಇಲ್ಲ. ಯಾವುದೇ ದಾಖಲೆಗಳಲ್ಲಿ ಅಲ್ಲಾಗಾಗಿ ದಾನ ನೀಡಿದ ಕುರುಹು ಇಲ್ಲ. ಹೀಗಾಗಿ ನಮ್ಮ ಹೋರಾಟ ನಡೆಯಲಿದೆ. ಇದು ಒಂದು ದಿನದ ಹೋರಾಟ ಅಲ್ಲ. ರಾಜ್ಯದಲ್ಲಿ ಈ ಕುರಿತು ಜನಜಾಗೃತಿ ಮಾಡುತ್ತೇವೆ. ಕಲಬುರಗಿ ಜಿಲ್ಲೆಯ ಸೇಡಂ ನಲ್ಲಿ 2500 ಎಕರೆ ವಕ್ಪ್ ಭೂಮಿ ಎನ್ನಲಾಗುತ್ತಿದೆ. ಹಿಂದಿನಿಂದಲೂ ಒಳಗಿಂದೊಳಗೆ ರೈತರ ಜಮೀನಿನಲ್ಲಿ ನಮೂದು ಮಾಡುತ್ತ ಬಂದಿದ್ದಾರೆ. ಆ ಸರಕಾರ, ಈ ಸರ್ಕಾರ ಎಂಬುದಿಲ್ಲ. ಎಲ್ಲ ಸರಕಾರಗಳು ಇದ್ದಾಗ ಇದೇ ರೀತಿ ಆಗಿದೆ. ಅದನ್ನು ಯಾರು ಮಾಡಿದರು ತಪ್ಪೇ. ಯಾರನ್ನೂ ಸಮರ್ಥನೆ ಮಾಡಿಕೊಳ್ಳಲ್ಲ. ನಮ್ಮ ಹಿಂದೂ ಸಮಾಜದ ಆಸ್ತಿ ಭಾರತದ ಆಸ್ತಿಯಾಗಿ ಉಳಿಯಬೇಕು ಎಂದು ಅವರು ಹೇಳಿದರು.
Three have swallowed huge sums in the Waqf Board, cancel the 1974 Gazette Notification slams Yatnal.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm