ಬ್ರೇಕಿಂಗ್ ನ್ಯೂಸ್
01-11-24 04:53 pm HK News Desk ಕರ್ನಾಟಕ
ವಿಜಯಪುರ, ನ.1: ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡುವಂತೆ ಆಗ್ರಹಿಸಿದ್ದಾರೆ.
ದೇಶದಲ್ಲಿ ಇನ್ನೊಂದು ಪಾಕಿಸ್ತಾನ ಆಗಬಾರದು. ಅದಕ್ಕಾಗಿ ಇಡೀ ವಕ್ಪ್ ಆಸ್ತಿ ರಾಷ್ಟ್ರೀಕರಣ ಮಾಡಬೇಕು. ಇಲ್ಲಾಂದ್ರೆ ರೈತರ, ಮಠದ ಆಸ್ತಿಗಳಿಗೆ ಇದೇ ಕರಾಳ ಶಾಸನ ಆಗಲಿದೆ. ನೆಹರು ಮಾಡಿದ ಪಾಪದ ಕೆಲಸವೇ ವಕ್ಫ್ ಕಾನೂನು ಎಂದು ಯತ್ನಾಳ ಕಿಡಿಕಾರಿದ್ದಾರೆ.
ವಕ್ಫ ಬೋರ್ಡ್ನಿಂದಾಗಿ ಜಮೀನು ಮಾಲಿಕರು, ರೈತರಿಗೆ ತೊಂದರೆಯಾಗ್ತಿದೆ. ರೈತರು, ಜಮೀನು ಮಾಲಿಕರು ಸೇರಿ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನುಗಳನ್ನು ವಕ್ಫ್ ಆಸ್ತಿಯೆಂದು ಆಕ್ರಮಿಸಿಕೊಳ್ತಿದ್ದಾರೆ. ವಕ್ಫ್ ಕಾನೂನು ಅತ್ಯಂತ ಕ್ರೂರವಾಗಿದ್ದು ವಕ್ಫ ಬೋರ್ಡ್ಗೆ ಅನಿಯಂತ್ರಿತ ಅಧಿಕಾರ ನೀಡಲಾಗಿದೆ. ಇದರಿಂದ ಭಾರತದ ಹಿಂದುಗಳಿಗೆ ಅನ್ಯಾಯವಾಗ್ತಿದೆ. ಎಲ್ಲ ವಕ್ಫ್ ಆಸ್ತಿಗಳನ್ನ ರಾಷ್ಟ್ರೀಕರಣ ಮಾಡಿ, ಸಮಾಜಕ್ಕೆ ಉಪಯೋಗವಾಗುವಂತೆ ಮಾಡಬೇಕು ಎಂದು ಯತ್ನಾಳ್ ಪತ್ರದಲ್ಲಿ ಪ್ರಧಾನಿ ಮೋದಿ ಗಮನಕ್ಕೆ ತಂದಿದ್ದಾರೆ.
ಜಮೀರ್ ಅಹ್ಮದ್ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಆಸ್ತಿಗಳಲ್ಲಿ ನಮೂದಾಗಿರುವ ವಕ್ಪ್ ಹೆಸರನ್ನು ಇದೇ ನ. 3ರ ಒಳಗೆ ತೆಗೆಯದಿದ್ದರೆ 4ರಿಂದ ರೈತರ ಪರವಾಗಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ. ಈಗ ಸಿಎಂ ಹೇಳಿದ್ದಕ್ಕೆ ನಾನು ಮಾಡಿದ್ದೇನೆ ಎಂದು ಜಮೀರ್ ಖಾನ್ ಹೇಳಿದ್ದಾನೆ. ಸಿಎಂ ಅವರನ್ನೇ ಇದರಲ್ಲಿ ಸಿಕ್ಕಿಸಿಕೊಂಡಿದ್ದಾರೆ, ಸಿದ್ದರಾಮಯ್ಯ ಅವರೇ ಈಗ ಸ್ಪಷ್ಟನೆ ಹೇಳಬೇಕು ಎಂದು ಹೇಳಿದರು.
ಸ್ಟಾರ್ ಪ್ರಚಾರಕರಿಂದ ತನ್ನ ಹೆಸರನ್ನು ಕೈಬಿಟ್ಟ ವಿಚಾರದಲ್ಲಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ನನ್ನನ್ನು ವಿಜಯೇಂದ್ರ ಸ್ಟಾರ್ ಮಾಡೋದಿಲ್ಲ, ಜನ ಮಾಡುತ್ತಾರೆ. ವಿಜಯೇಂದ್ರನ ಕೇಳಿ ಸ್ಟಾರ್ ಪ್ರಚಾರಕ ಆಗಬೇಕಿಲ್ಲ. ಜನ ನನ್ನನ್ನು ಸ್ಟಾರ್ ಮಾಡಿದ್ದಾರೆ. ಇವರು ಸರ್ಕಾರ ಇದ್ದಾಗ ಸಾವಿರಾರು ಕೋಟಿ ತಿಂದಿದ್ದಾರೆ. ಅದನ್ನು ಖರ್ಚು ಮಾಡಿ ಏನೋ ಮಾಡಲು ಹೊರಟಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಹಿಂದೂ ಓಟು ಬೇಕಾದರೆ ಕರೆಯಲಿ ಇಲ್ಲದಿದ್ರೆ ಬಿಡಲಿ ಎಂದು ಹೇಳಿದ್ದಾರೆ.
ವಿಜಯಪುರಕ್ಕೆ ರೈತರ ಅಹವಾಲು ಆಲಿಸಲು ಬಿಜೆಪಿ ಟೀಂ ಬಂದಿದ್ದ ಪ್ರಶ್ನೆಗೆ, ಆಗ ವಿಜಯೇಂದ್ರ ಏನು ಡೆನ್ಮಾರ್ಕ್ ನಲ್ಲಿದ್ದನಾ? ಯಾಕೆ ಬಂದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದರೆ ವಿಜಯೇಂದ್ರನನ್ನು ಯಾವುದೇ ಕುರ್ಚಿಯಲ್ಲಿ ಕೂರಿಸಬಾರದು. ಹೈಕಮಾಂಡ್ ನನ್ನ ಬಗ್ಗೆಯೂ ಹಾಗೂ ವಿಜಯೇಂದ್ರನ ಬಗ್ಗೆಯೂ ಮೌನ ವಹಿಸಿದೆ. ಅವರಿಗೆ ಇಬ್ಬರನ್ನೂ ಬಿಡಲು ಆಗುತ್ತಿಲ್ಲ. ಯಡಿಯೂರಪ್ಪನ ಕೈಯಲ್ಲಿ ಮಂತ್ರಿ ಆಗೋದಿಲ್ಲ ಎಂದು ಬಿಟ್ಟಿದ್ದೇನೆ. ಅಪ್ಪ ಮಗ ಸೇರಿ ಪಕ್ಷಕ್ಕೆ ಬಹಳ ಅನ್ಯಾಯ ಮಾಡಿದ್ದಾರೆ.
Karnataka BJP MLA Basanagouda Patil Yatnal has written a letter to Prime Minister Narendra Modi demanding nationalisation of the Waqf properties in the country.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm