ಬ್ರೇಕಿಂಗ್ ನ್ಯೂಸ್
19-03-24 07:38 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 18: ಮೋದಿ ಪ್ರಧಾನಿಯಾಗಲೆಂದು ಬಿಜೆಪಿಯ ಬಂಡಾಯ ನಾಯಕರು ಸುಮ್ಮನಿದ್ದಾರೆ. ಆ ನಂತರ ರಾಜ್ಯ ನಾಯಕರಿಗೆ ಬುದ್ಧಿ ಕಲಿಸುತ್ತಾರೆ ಎಂದು ಬಿಜೆಪಿ ಒಳ ಸತ್ಯವನ್ನು ಶಾಸಕ ಲಕ್ಷ್ಮಣ ಸವದಿ ಬಿಚ್ಚಿಟ್ಟಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ಮಾತನಾಡಿದ ಸವದಿ ಅವರು, " ಲೋಕಸಭೆ ಚುನಾವಣೆ ಬಳಿಕ ನೋಡಿ, ಮೋದಿಯವರು ಪ್ರಧಾನ ಮಂತ್ರಿ ಆಗಲಿ ಎಂದು ನಾವು ಸುಮ್ಮನಿದ್ದೇವೆ. ಆಮೇಲೆ ಇವರಿಗೆ ಬುದ್ಧಿ ಕಲಿಸುತ್ತೇವೆ ಎಂದು ಬಿಜೆಪಿಯ ಕೆಲವರು ಹೇಳುತ್ತಿದ್ದಾರೆ " ಎಂದು ಹೇಳಿದರು.
ಈಗ ಒನ್ ಬೈ ಒನ್ ಶುರುವಾಗಿದೆ ಇನ್ನು ಜನ ಇನ್ನೂ ಕೆಲವರು ಕ್ಯೂನಲ್ಲಿದ್ದಾರೆ. ಈಶ್ವರಪ್ಪನವರನ್ನು ತಳ್ಳಿದ್ರು, ಸದಾನಂದ ಗೌಡರನ್ನು ತಳ್ಳಿದ್ರು, ಇನ್ನೂ ಕೆಲ ನಂಬರ್ ಗಳಿದ್ದಾವೆ ಎಂದು ಭವಿಷ್ಯ ನುಡಿದರು. ನಮಗೇನಿಲ್ಲ ಎಲ್ಲವೂ ಬೇರೆಯವರಿಗೆ ಎಂಬ ರೀತಿಯಲ್ಲಿ ಕೆಲವರು ಖುಷಿಯಾಗಿದ್ದಾರೆ. ಅವರ ನಂಬರ್ ಬಂದಾಗ ಗೊತ್ತಾಗಲಿದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಜಗದೀಶ್ ಶೆಟ್ಟರ್ ಅವರ ಸ್ಪರ್ಧೆ ವಿಚಾರವಾಗಿ ಮಾತನಾಡಿ, " ಬಿಜೆಪಿಯವರು ಯಾವ ಕುರಿಯನ್ನು ಎಲ್ಲಿ ನಿಲ್ಲಿಸಬೇಕು, ಎಲ್ಲಿ ಬಲಿ ಕೊಡಬೇಕು ಎಂದು ವ್ಯವಸ್ಥಿತವಾಗಿ ಪ್ಲಾನ್ ಮಾಡುತ್ತಿದ್ದಾರೆ. ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟ ಹಾಗೇನು ಆಗಬೇಕು, ಪಾರ್ಲಿಮೆಂಟಿಗೆ ಹೋಗದಂತೆನೂ ಆಗಬೇಕು. ಪಾರ್ಲಿಮೆಂಟ್ಗೆ ಹೋದವರು ಮಂತ್ರಿ ಆಗಬೇಕು ಎಂದು ಪ್ಲ್ಯಾನ್ ಆಗಿದೆ " ಎಂದರು.
ಜಗದೀಶ್ ಶೆಟ್ಟರ್ ಅವರಿಗೆ ಎಲ್ಲವೂ ಗೊತ್ತಿದೆ. ಚುನಾವಣೆ ಬಳಿಕ ಮಾತನಾಡುತ್ತಾರೆ. ಏಕಾಏಕಿಯಾಗಿ ಬಿಜೆಪಿ ಸೇರಿದ್ದರು ಏಕಾಏಕಿಯಾಗಿ ಅಭ್ಯರ್ಥಿಯಾದರು, ಏಕಾಏಕಿಯಾಗಿ ಸೋಲುತ್ತಾರೆ ಎಂದು ಭವಿಷ್ಯ ನುಡಿದರು.
ಈಶ್ವರಪ್ಪ ಅವರು ಹಿರಿಯ ನಾಯಕರು. ನಾನು ಮತ್ತು ಶೆಟ್ಟರ್ ಅವರು ಬಿಜೆಪಿ ಬಿಡುವಾಗ ಮಾಧ್ಯಮಗಳ ಮುಂದೆ ಕೆಲ ಮಾತುಗಳನ್ನು ಹೇಳಿದ್ದೆವು. ಆ ಸಂದರ್ಭದಲ್ಲಿ ಪಕ್ಷ ಬಿಡಬಾರದಾಗಿತ್ತು ಪಕ್ಷ ಎಲ್ಲವೂ ಕೊಟ್ಟಿದೆ ಎಂದು ಈಶ್ವರಪ್ಪ ಅವರ ಅಭಿಪ್ರಾಯ ಹೇಳಿದ್ದರು. ನಾನು ಸಹ ಅ ಸಂದರ್ಭದಲ್ಲಿ ಹೇಳಿದ್ದೆ. ಲೋಕಸಭೆ ಚುನಾವಣೆ ಘೋಷಣೆ ಆಗಲಿ, ಅಭ್ಯರ್ಥಿಗಳು ಘೋಷಣೆ ಆದ ಮೇಲೆ ಈಶ್ವರಪ್ಪನವರು ಏನು ಹೇಳುತ್ತಾರೆ ಎನ್ನುವುದರ ಮೇಲೆ ತೀರ್ಮಾನ ಮಾಡೋಣ ಎಂದಿದ್ದೆ. ನಾನು ಹೇಳಿದ್ದು ಇವತ್ತು ಸತ್ಯವಾಗಿದೆ ಎಂದರು.
Laxman Savadi shares secret of BJP this coming lok sabha elections. Says they know when to make the sheep stand and when to slaughter it.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm