ಬ್ರೇಕಿಂಗ್ ನ್ಯೂಸ್
07-03-24 02:00 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.07: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯನ್ನ ಎನ್ಐಎ (NIA) ಚುರುಕುಗೊಳಿಸಿದೆ. ರಾಮೇಶ್ವರಂ ಕೆಫೆಯಲ್ಲಿ ಕೆಲಸ ಮಾಡುತ್ತಿರುವ ಕೆಫೆ ಸೂಪ್ರವೈಸರ್ ರಾಜೇಶ್ ಸೇರಿ 12 ಮಂದಿ ವಿಚಾರಣೆಗೊಳಪಡಿಸಲಾಗಿದೆ. ಗಾಯಗೊಂಡು ಆಸ್ಪತ್ರೆಯಿಂದಡಿಸ್ಚಾರ್ಜ್ ಆದ ಫಾರೂಕ್ ಹುಸೇನ್ನಿಂದಲೇ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಹೋಟೆಲ್ ಸಿಬ್ಬಂದಿ ವಿಚಾರಣೆ ವೇಳೆ ಫ್ಲೇಟ್ ಎತ್ತಿಡುತ್ತಿದ್ದ ಸಿಬ್ಬಂದಿ ಸೂಕ್ಷ್ಮವಾಗಿ ನೋಡಿರೋದು ಬಯಲಾಗಿದೆ. ಹೋಟೆಲ್ ಸಿಬ್ಬಂದಿ ಹೇಳಿಕೆ ಆಧಾರಿಸಿ ಬಾಂಬರ್ನ ರೇಖಾಚಿತ್ರ ಬಿಡಿಸಿ ಶೋಧಕ್ಕೆ ಮುಂದಾಗಿದ್ದಾರೆ.
ಪ್ಲೇಟ್ ಎತ್ತಲು ಓಡಾಡುತ್ತಿದ್ದಾಗ ಹೋಟೆಲ್ ಸಿಬ್ಬಂದಿ ಶಂಕಿತನನ್ನು ಗಮನಿಸಿದ್ದು, ಆತನ ಮಾಸ್ಕ್ ತೆಗೆದು ಇಡ್ಲಿ ತಿಂದಿರೋದನ್ನು ಗಮನಿಸಿದ್ದಾರೆ. ಫ್ಲೇಟ್ ತೆಗೆಯೋ ಸಿಬ್ಬಂದಿ ಸಂಪೂರ್ಣ ಹೇಳಿಕೆ ದಾಖಲಿಸಿಕೊಂಡಿರುವ ಎನ್ ಐ ಎ ತಂಡ, ಶಂಕಿತ ಹೇಗಿದ್ದ, ಮುಖ ಚಹರೆ ಹೇಗಿತ್ತು, ಮುಖದ ಮೇಲೆ ಯಾವುದಾದ್ರೂ ಮಾರ್ಕ್ ಇದೆಯಾ? ಕಣ್ಣುಗಳು ಹೇಗಿದ್ದವು, ಕೈಗಳ ಮೇಲೆ ಏನಾದ್ರೂ ಮಾರ್ಕ್ ಇದೆಯಾ? ಎತ್ತರ ಎಷ್ಟು ಇದ್ದ ಹೀಗೆ ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ನುರಿತ ತಜ್ಞರಿಂದ ಸಿಬ್ಬಂದಿ ಹೇಳಿದ ಹಾಗೆ ರೇಖಾ ಚಿತ್ರ ರಚಿಸಿದ್ದಾರೆ.
ಇತ್ತ, ಎನ್ ಐ ಎ ಬಿಡುಗಡೆ ಮಾಡಿರುವ ಸಿಸಿಟಿವಿ ಆಧರಿಸಿ ಸ್ಕೇಚ್ ಆರ್ಟಿಸ್ಟ್ ನಿಂದ ಇಮ್ಯಾಜಿನರಿ ಸ್ಕೆಚ್ ಬಿಡುಗಡೆ ಮಾಡಲಾಗಿದೆ. ಸ್ಕೆಚ್ ಆರ್ಟಿಸ್ಟ್ ಹರ್ಷ ಎಂಬವರು ಶಂಕಿತನ ಸಂಪೂರ್ಣ ಮುಖದ ಇಮ್ಯಾಜಿನರಿ ಸ್ಕೆಚ್ ಬಿಡಿಸಿದ್ದಾರೆ. ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ವಿತೌಟ್ ಮಾಸ್ಕ್ ಟೋಪಿ ಕನ್ನಡಕ ಧರಿಸಿದ ಸ್ಕೆಚ್ ಸಿದ್ಧಪಡಿಸಲಾಗಿದೆ. ಇದೇ ರೀತಿ ಬಾಂಬರ್ ಇರಬಹುದು ಎಂದು ಕಲ್ಪಿಸಿ ರೇಖಾ ಚಿತ್ರವನ್ನು ಕಲಾವಿದ ಬಿಡಿಸಿದ್ದಾರೆ.
ರಾಮೇಶ್ವರಂ ಕೆಫೆ ಬ್ಲಾಸ್ಟ್ನ ಆರೋಪಿ ಬಿಎಂಟಿಸಿ ಬಸ್ನಲ್ಲಿ ಓಡಾಡಿದ್ದಾನೆ. ಬಾಂಬರ್ ಬಸ್ನಲ್ಲಿ ಓಡಾಡಿದ್ದ ದೃಶ್ಯ ಈಗ ಪೊಲೀಸರಿಗೆ ಲಭ್ಯವಾಗಿದೆ. ಬಿಎಂಟಿಸಿ ಬಸ್ನಲ್ಲಿ ನಿಂತಿದ್ದಾಗ ಆರೋಪಿ ಮಾಸ್ಕ್ ಹಾಕಿದ್ದ. ಬಸ್ನಲ್ಲಿ ಕೂತಿದ್ದಾಗ ಮಾಸ್ಕ್ ತೆಗೆದಿದ್ದ. ಶಂಕಿತ ಓಡಾಡಿದ್ದ ಬಸ್ ರೂಟ್ ಕೂಡಾ ಪತ್ತೆಯಾಗಿದೆ. ಅತ್ತಿಬೆಲೆ ಮೂಲಕ ಪರಾರಿಯಾಗಿದ್ದ ಅನ್ನೋ ಮಾಹಿತಿ ಇದ್ದು, ಈಗ ಎಲೆಕ್ಟ್ರಾನಿಕ್ ಸಿಟಿ-ಅತ್ತಿಬೆಲೆ ಬಸ್ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಈ ದೃಶ್ಯ ಪುಷ್ಠಿ ನೀಡುವಂತಿದೆ.
ಭಟ್ಕಳಕ್ಕೆ ಪ್ರಯಾಣ ಮಾಡಿರುವ ಸುಳಿವು ;
ಬಾಂಬ್ ಇಟ್ಟ ದಿನವೇ ಬಸ್ನಲ್ಲಿ ಪ್ರಯಾಣ ಮಾಡಿರುವ ಆರೋಪಿಗಾಗಿ ತುಮಕೂರಿನಲ್ಲೂ ಹುಡುಕಾಟ ನಡೆದಿದೆ. ಏಳೆಂಟು ತಂಡಗಳಲ್ಲಿ ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿರುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಶಂಕಿತ ಉಗ್ರ ಬೆಂಗಳೂರಿನಿಂದ ತುಮಕೂರು, ಅಲ್ಲಿಂದ ಬಳ್ಳಾರಿ ಹಾಗೂ ಭಟ್ಕಳಕ್ಕೆ ಪ್ರಯಾಣ ಮಾಡಿರುವ ಸುಳಿವು ಸಿಕ್ಕಿರುವುದಾಗಿ ತಿಳಿದು ಬಂದಿದೆ. ತುಮಕೂರಿನಲ್ಲಿ ಗುರುವಾರ ಮಾತನಾಡಿದ ಜಿ ಪರಮೇಶ್ವರ್, ''ಬಾಂಬ್ ಬ್ಲಾಸ್ಟ್ ಮಾಡಿರುವ ಆರೋಪಿಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಆತ ಯಾವ ಯಾವ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದಾನೆ ಎಂಬುದನ್ನು ಪತ್ತೆ ಮಾಡಬೇಕಿದೆ. ಅದಕ್ಕಾಗಿ ಪೊಲೀಸರು ಏಳೆಂಟು ತಂಡಗಳನ್ನಾಗಿ ಮಾಡಿಕೊಂಡು ಹುಡುಕಾಟ ನಡೆಸಲಾಗುತ್ತಿದೆ. ಸಿಸಿಬಿ ಜೊತೆಗೆ ಈಗ ಎನ್ಐಎ ಸಹ ಕಾರ್ಯಾಚರಣೆ ನಡೆಸುತ್ತಿದೆ. ಆರೋಪಿಯು ಬಸ್ಗಳಲ್ಲಿ ಪ್ರಯಾಣಿಸಿರುವ ಮಾಹಿತಿಯನ್ನು ಆಧರಿಸಿ ತುಮಕೂರಿನಲ್ಲೂ ಹುಡುಕಾಟ ನಡೆದಿದೆ'' ಎಂದರು.
#Bengaluru #blast investigation:
— TOI Bengaluru (@TOIBengaluru) March 7, 2024
CCTV footage of the alleged Rameshwaram Cafe bomber boarding a BMTC Volvo bus. pic.twitter.com/nE187zL4Ov
Bangalore cafe blast, bomber travelled to Bhatkal from Bellari, NIA gets lead, Picture released. NIA has got leads of the suspect that he has travelled to Bhatkal via tumkuru - bellari and have moved towards Bhatkal. NIA team which has reached Bhatkal is now checking cctv footages from all the KSRTC bus that has come via Kumta and Siri.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm