ಬ್ರೇಕಿಂಗ್ ನ್ಯೂಸ್
24-02-24 10:20 pm HK News Desk ಕರ್ನಾಟಕ
ಉತ್ತರ ಕನ್ನಡ, ಫೆ 24: ಮಾಜಿ ಕೇಂದ್ರ ಸಚಿವ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮತ್ತೆ ಸಿಎಂ ವಿರುದ್ಧ ಹರಿಯಾಯ್ದಿರೋ ಹೆಗಡೆ, ಸಿದ್ದರಾಮಯ್ಯರನ್ನು ಸಿದ್ದರಾಮುಲ್ಲ ಖಾನ್ ಅಂತ ಟೀಕಿಸಿದ್ದಾರೆ. ರಾಜ್ಯ ಸರ್ಕಾರದ ಬಳಿ ನೌಕರರಿಗೆ ಕೊಡಲು ಹಣವಿಲ್ಲ, ಸರ್ಕಾರ ದಿವಾಳಿಯಾಗಿದೆ ಅಂತ ಆರೋಪಿಸಿದ್ದಾರೆ. ಇನ್ನು ಸಂಸದರ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ, ಅನಂತ್ ಕುಮಾರ್ ಹೆಗಡೆ ಸಂಸದರಾಗುವುದಕ್ಕೆ ನಾಲಾಯಕ್ಕು ಅಂತ ತಿವಿದಿದ್ದಾರೆ.
ಸಿದ್ದರಾಮುಲ್ಲಾ ಖಾನ್ ಎಂದು ಕರೆದ ಅನಂತ್ ಕುಮಾರ್ ಹೆಗಡೆ ;
ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅನಂತ್ ಕುಮಾರ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ರು. ಸಿದ್ದರಾಮುಲ್ಲಾ ಖಾನ್ ಬಳಿ ಸರ್ಕಾರದ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ, ಅಭಿವೃದ್ಧಿಗೆ, ಶಾಸಕರಿಗೆ ಕೊಡಲು ಪಗಾರ ಇಲ್ಲ ಅಂತಾರೆ ಅಂತ ಆರೋಪಿಸಿದ್ದಾರೆ.
ಅವರಿಗಿಲ್ಲದ ವೇದನೆ ಇವರಿಗೆ ಏಕೆ ?
ನಮಗೆ ಕೇಂದ್ರ ಸರ್ಕಾರ ಟ್ಯಾಕ್ಸ್ ಹಣ ಕೊಟ್ಟಿಲ್ಲ ಅಂತಾರೇ. ತಮಿಳುನಾಡಿಗೆ ಇಲ್ಲದ ವೇದನೆ, ಆಂಧ್ರದವರಿಗೆ ಇಲ್ಲದ ವೇದನೆ, ಕೇರಳಕ್ಕೆ ಇರದ ವೇದನೆ ಇವರಿಗೇಕೆ? ಅವರು ಕೇಳಬಹುದಿತ್ತಲ್ಲ? ಅಂತ ಪ್ರಶ್ನಿಸಿದ್ದಾರೆ.
ನಮ್ಮ ತೆರಿಗೆ ಹಣ ನಮಗೆ ಕೊಡಿ ;
ಈ ದೇಶದಲ್ಲಿ ತೆರಿಗೆ ಕಟ್ಟುವವರು 99.9 ಶೇ. ಜನರು ಹಿಂದುಗಳು. ನಮ್ಮ ದುಡ್ಡು ತೆಗೆದುಕೊಂಡು ಹೋಗಿ ಮಸೀದಿಗೆ, ಚರ್ಚಿಗೆ ಯಾಕೆ ಕೊಟ್ರಿ? ನಾವು ಕೇಳಬೇಕಾ ಬೇಡ್ವಾ? ನಮ್ಮ ತೆರಿಗೆ ಹಣ ನಮಗೆ ಕೊಡಿ. ನಮ್ಮ ದೇವಸ್ಥಾನಗಳು ಹಾಳು ಬಿದ್ದಿವೆ, ಅದಕ್ಕೆ ನೀಡಲು ರಾಜ್ಯ ಸರಕಾರದಲ್ಲಿ ದುಡ್ಡಿಲ್ಲ ಅಂತ ಟೀಕಿಸಿದ್ದಾರೆ.
ಅವರು ಲೋಕಸಭಾ ಸದಸ್ಯರಾಗಲು ನಾಲಾಯಕ್ಕು !
ಇನ್ನು ಸಂಸದ ಅನಂತ್ ಕುಮಾರ್ ಹೆಗಡೆ ಟೀಕಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರು ಯಾರಾದ್ರೂ ಸಂಬಳ ಕೊಟ್ಟಿಲ್ಲ ಎಂದು ಹೇಳಿದ್ದಾರಾ? ಸಂವಿಧಾನ ಬದಲಾಯಿಸೋದಕ್ಕೇ ನಾವು ಅಧಿಕಾರಕ್ಕೆ ಬಂದಿರೋದು ಅಂತಾರೆ. ಅವರು ಲೋಕಸಭಾ ಸದಸ್ಯರಾಗಲು ಲಾಯಕ್ಕಾ? ಅಂತಹವರು ಇಂತಹ ಹೇಳಿಕೆ ಕೊಟ್ರೆ ಯಾವ ಕಿಮ್ಮತ್ತಿರುತ್ತೆ ಎಂದು ವಾಗ್ದಾಳಿ ನಡೆಸಿದ್ರು.
ಅನಂತ್ ಕುಮಾರ್ ಹೆಗಡೆ ತಲೆ ಸರಿ ಇಲ್ಲ ;
ಇದೇ ವಿಚಾರಕ್ಕೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಅನಂತ್ ಕುಮಾರ್ ಹೆಗಡೆ ತಲೆ ಸರಿ ಇಲ್ಲ, ನನ್ನ ತಲೆ ಸರಿ ಇದೆ. ಆ ವ್ಯಕ್ತಿ ಹತಾಶನಾಗಿ ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ. ಆ ವ್ಯಕ್ತಿಯ ಬಗ್ಗೆ ಹೆಚ್ಚು ಮಾತನಾಡಿ ಪ್ರಯೋಜನ ಇಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಹೆಗಡೆ ವಾಗ್ದಾಳಿ ವಿಚಾರವಾಗಿ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಾತನಾಡಿದ ಎಂಬಿ ಪಾಟೀಲ್, ಅನಂತಕುಮಾರ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಇವರು ಐದು ವರ್ಷ ಕಾಣೆಯಾಗಿದ್ದರು. ಎಲ್ಲಿಯೂ ಇರಲಿಲ್ಲ, ಮತದಾರರಿಗೆ ಮುಖ ತೋರಿಸಿರಲಿಲ್ಲ. ಚುನಾವಣೆ ಬಂದ ಕಾರಣ ಹಿಂದೂ ಮುಸ್ಲಿಂ ಹೇಳಿಕೆ ಕೊಡುವ ಮೂಲಕ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿದ್ದಾರೆ. ಹಿಂದೆ ಸಂವಿಧಾನ ತಿರುಚಬೇಕೆಂದು ಹೇಳಿದ್ದರು. ಕೇಂದ್ರ ಸಚಿವರಾಗಿದ್ದ ಮಹಾಶಯರು ಹೇಳಿದ್ದರು. ಇಂಥವರ ಬಗ್ಗೆ ಬಹಳ ಮಾತನಾಡುವ ಅವಶ್ಯಕತೆಯಿಲ್ಲ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ. ಇದು ಚುನಾವಣೆ ಗಿಮಿಕ್ ಎಂದರು.
ಅನಂತಕುಮಾರ ವಿರುದ್ಧ ಇಂಡಿ ಪಟ್ಟಣದಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ, ದೀಪಾ ಆರುವ ಮುಂಚೆ ಜೋರಾಗಿ ಉರಿಯುತ್ತದೆ. ಹಾಗೇ ಅನಂತಕುಮಾರ ಹೆಗಡೆ ರಾಜಕೀಯವಾಗಿ ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿರುವುದು ಪ್ರಾರಂಭವಾಗಿದೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂದರು.
Former Union Minister and sitting MP from Uttara Kannada Lok Sabha constituency Anant Kumar Hegde has once again attacked the actor. Hegde again lashed out at the CM and called Siddaramaiah a "Siddaramaiah Khan". "The state government has no money to pay to the employees and the government is bankrupt," he alleged. Reacting to the allegations levelled by the MPs, the CM said that Anant Kumar Hegde should become an MP.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am