ಬ್ರೇಕಿಂಗ್ ನ್ಯೂಸ್
13-01-24 07:02 pm HK News Desk ಕರ್ನಾಟಕ
ಕಾರವಾರ, ಜ.13: ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಅದರ ಸಾಲಿಗೆ ಸೇರಲಿದೆ. ಇದನ್ನು ಬೇಕಾದರೆ ಬೆದರಿಕೆ ಅಂತ ತಿಳಿಯಿರಿ. ಬಾಬ್ರಿ ಮಸೀದಿ ನಿರ್ನಾಮದಂತೆ ಮಾಡುವುದು ಗ್ಯಾರಂಟಿಯೇ. ಇದು ಹಿಂದೂ ಸಮಾಜದ ತೀರ್ಮಾನ ಎಂದು ಸಂಸದ ಅನಂತ ಕುಮಾರ್ ಹೆಗಡೆ ವೀರಾವೇಶದ ಮಾತುಗಳನ್ನಾಡಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿದ್ದೆಯಿಂದ ಎದ್ದು ಕುಳಿತಂತೆ ವರ್ತಿಸುತ್ತಿರುವ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡತೊಡಗಿದ್ದಾರೆ. ಕುಮಟಾದಲ್ಲಿ ರಾಮಮಂದಿರ ಆಮಂತ್ರಣ ಕುರಿತ ಕಾರ್ಯಕ್ರಮದಲ್ಲಿ ಅನಂತ ಹೆಗಡೆ ಭಾಷಣ ಮಾಡಿದ್ದು ಶಿರಸಿಯ ಸಿಪಿ ಬಜಾರ್ದಲ್ಲಿರುವ ಮಸೀದಿ ಇರುವುದು ಅದು ವಿಜಯ ವಿಠ್ಠಲ ದೇವಸ್ಥಾನ. ಶ್ರೀರಂಗ ಪಟ್ಟಣದಲ್ಲಿರುವ ದೊಡ್ಡ ಮಸೀದಿ ಅದು ಮಾರುತಿ ದೇವಸ್ಥಾನ. ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ. ಅದನ್ನು ಕಿತ್ತುಹಾಕೋ ತನಕ ಈ ಹಿಂದು ಸಮಾಜ ಮತ್ತೆ ವಾಪಾಸ್ ಕೂತುಕೊಳ್ಳೋದಿಲ್ಲ. ಈಗ ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ.

ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ರೆ ಇದು ಹಿಂದೂ ರಕ್ತವೇ ಅಲ್ಲ ಎಂದು ಹೇಳಿದ ಅವರು, ನಮ್ಮ ವಿರೋಧಿ ಕಾಂಗ್ರೆಸ್ ಅಲ್ಲ. ಅಲ್ಲಿರುವ ಕೆಲವರ ಮಾನಸೀಕತೆ ಅಷ್ಟೇ. ಮುರುಕುರಾಮಯ್ಯನಂತಹ ಮಾನಸಿಕತೆಯೇ ನಮ್ಮ ವಿರೋಧಿ. ಗತಿಕೆಟ್ಟ ಹರಾಜಾಗಿ ಹೋದಂತಹ, ಅಲ್ಪಸಂಖ್ಯಾತ ಓಟಿಗಾಗಿ ಓಲೈಸುವ ಮಾನಸಿಕತೆಗೆ ನಮ್ಮ ವಿರೋಧ. ರಾಮಜನ್ಮಭೂಮಿ ಆಮಂತ್ರಣ ಬಂದಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಯನ್ನೇ ಅಣಕಿಸಿ ಮುಖ್ಯಮಂತ್ರಿಯ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ.
As the Babri Masjid is destroyed, bhatkal's golden palli will also join its ranks. Think of this as a threat. Is it a guarantee that the Babri Masjid will be demolished? Mp Anant Kumar Hegde said that this is the decision of the Hindu society.
18-01-26 03:34 pm
Bangalore Correspondent
ಬ್ಯಾನರ್ ಗಲಾಟೆ ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ, ಬ...
17-01-26 08:02 pm
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
18-01-26 08:20 pm
HK News Desk
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
18-01-26 09:58 pm
Mangalore Correspondent
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
18-01-26 12:58 pm
Mangalore Correspondent
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm