ಬ್ರೇಕಿಂಗ್ ನ್ಯೂಸ್
11-12-23 05:11 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.11: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಲೋಕಸಭೆ ಟಿಕೆಟ್ ಆಫರ್ ನೀಡಿದರೆ, ಅದನ್ನು ನಟ ಶಿವರಾಜ್ ಕುಮಾರ್ ನಯವಾಗಿಯೇ ತಿರಸ್ಕರಿಸಿದ್ದು ತಾನು ರಾಜಕೀಯಕ್ಕೆ ಬರಲ್ಲ, ಬಣ್ಣ ಹಚ್ಚೋದರಲ್ಲಿಯೇ ಮುಂದುವರಿಯುತ್ತೇನೆ ಎಂದಿದ್ದಾರೆ.
ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಈಡಿಗರ ಜಾಗೃತ ಸಮಾವೇಶದಲ್ಲಿ ಮಾತನಾಡುತ್ತ ಡಿಸಿಎಂ ಡಿಕೆಶಿ ಅವರು, ಜೊತೆಯಲ್ಲಿದ್ದ ಶಿವರಾಜ್ ಕುಮಾರ್ ಗೆ ಲೋಕಸಭೆ ಟಿಕೆಟ್ ಆಫರ್ ನೀಡಿದ್ದಾರೆ. ಆದರೆ ನಟ ಶಿವಣ್ಣ ಅದನ್ನು ಅದೇ ವೇದಿಕೆಯಲ್ಲಿ ನಿರಾಕರಿಸಿ ಗಮನ ಸೆಳೆದರು.
ಡಿ.ಕೆ. ಶಿವಕುಮಾರ್ ಈಡಿಗ ಸಮಾವೇಶದಲ್ಲಿ ಮಾತನಾಡಿ, ನೀನು ಪಾರ್ಲಿಮೆಂಟ್ ವೋಟಿಗೆ ನಿಂತುಕೊಳ್ಳಲು ರೆಡಿಯಾಗಿ. ನಿನಗೆ ಎಲ್ಲಿ ಬೇಕೋ ಅಲ್ಲಿ ಸೀಟು ಕೊಡುತ್ತೇನೆ ಎಂದು ಹೇಳಿದ್ದು ಸಂಚಲನ ಮೂಡಿಸಿದೆ. ಆದರೆ, ಆನಂತರ ಈ ಬಗ್ಗೆ ಮಾತನಾಡಿದ ಶಿವಣ್ಣ, ಈಗಾಗಲೇ ಐದಾರು ಸಿನಿಮಾ ಒಪ್ಪಿಕೊಂಡು ಬಿಟ್ಟಿದ್ದೇನೆ, ನನಗೆ ರಾಜಕೀಯ ಮಾಡಲು ಟೈಮಿಲ್ಲ. ನನಗೆ ಅದು ಹಿಡಿಸದಯ ಎಂದು ಹೇಳಿದ್ದಾರೆ.
ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು, ಪಾರ್ಲಿಮೆಂಟ್ಗೆ ಹೋಗುವ ಯೋಗ ಸುಲಭವಾಗಿ ಬರುವುದಿಲ್ಲ. ಆ ಯೋಗ ಮನೆ ಬಾಗಿಲಿಗೆ ಬಂದಿದೆ. ಅವಕಾಶ ತಪ್ಪಿಸಿಕೊಳ್ಳಲು ಹೋಗಬೇಡ ಎಂದು ಡಿ.ಕೆ.ಶಿವಕುಮಾರ್ ಸಮಾವೇಶದಲ್ಲಿ ಬಹಿರಂಗವಾಗಿ ಶಿವರಾಜ್ ಕುಮಾರ್ಗೆ ಎಂಪಿ ಟಿಕೆಟ್ ಆಫರ್ ಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿ ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್ ಹಾಕೋದು, ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ, ಅದನ್ನು ಮಾಡೋಕೆ ಬೇರೆಯವರು ಇದ್ದಾರೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
Kannada film actor Shiva Rajkumar has declined Karnataka Deputy Chief Minister DK Shivakumar's offer to contest in the upcoming Lok Sabha elections. During the Ediga community convention in Bengaluru, Congress leader DK Shivakumar had offered Shiva Rajkumar a Lok Sabha ticket from the party, stating that such an opportunity to enter Parliament does not come to everyone.
05-03-26 09:40 pm
HK News Staffer
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
ಸಾಕ್ಷಿಗಳು ಬರ್ತಾರೆ, ಹೋಗ್ತಾರೆ.. ಧರ್ಮಸ್ಥಳದಲ್ಲಿ ಹ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm