ಬ್ರೇಕಿಂಗ್ ನ್ಯೂಸ್
08-12-23 11:28 am HK News Desk ಕರ್ನಾಟಕ
ಚಿತ್ರದುರ್ಗ, ಡಿ 08: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಕ್ಯಾನ್ಸಲ್ ಆಗಿದೆ. ವರ ತಾಳಿಕಟ್ಟುವಾಗ ವಧು ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಐಶ್ವರ್ಯಾ ಜೊತೆ ವಿವಾಹ ಫಿಕ್ಸ್ ಆಗಿತ್ತು. ಆದರೆ ಗುರುವಾರ ಬೆಳಗ್ಗೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯ ಮುಹೂರ್ತ ನಡೆಯುವ ವೇಳೆ ವರನಿಗೆ ವಧು ಶಾಕ್ ನೀಡಿದ್ದಾಳೆ. ವರ ತಾಳಿಕಟ್ಟುವ ವೇಳೆ ಮಂಜುನಾಥ್ ನನಗೆ ಇಷ್ಟ ಇಲ್ಲವೆಂದು ಹೇಳಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆಗ ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಎರಡು ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ರು ಕೂಡ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮದುವೆ ಮುರಿದುಬಿದ್ದಿದೆ. ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಹಿಡಿಶಾಪ ಹಾಕಿದ್ದಾರೆ.
ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Bride rejects bridegroom on the day of wedding on stage at Chitradurga, video goes viral.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 06:05 pm
Mangalore Correspondent
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm