ಬ್ರೇಕಿಂಗ್ ನ್ಯೂಸ್
12-11-23 02:48 pm Bangalore Correspondent ಕರ್ನಾಟಕ
ಬೆಂಗಳೂರು, ನ.12: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 10 ಶುರುವಾಗಿ ಒಂದು ತಿಂಗಳು ಮೇಲಾಗಿದೆ. ಮನೆಯಲ್ಲಿ ಸ್ನೇಹಿತರಾಗಿ, ತಂಡವಾಗಿ ಆಡುತ್ತಿದ್ದವರು ನಿಧಾನವಾಗಿ ತನ್ನ ಆಟದ ಗೇರ್ ಬದಲಾಯಿಸಿ ವೈಯಕ್ತಿಕ ಗೆಲುವಿನ ದಡ ದಾಟುವ ಹಂತ ಬಂದಿದೆ.
ಈ ನಡುವೆ ಈ ವಾರ ದೊಡ್ಮನೆಯಿಂದ ಆಚೆಬರುವ ಸ್ಪರ್ಧಿ ಯಾರೆನ್ನುವ ಕುತೂಹಲ ಮೂಡಿದೆ. ಈ ವಾರ ಕಿಚ್ಚನ ಚಪ್ಪಾಳೆಯನ್ನು ಪ್ರತಾಪ್ ಗಳಿಸಿಕೊಂಡಿದ್ದಾರೆ. ಇದರ ಜೊತೆ ಮನೆಯ ಸರಿ ತಪ್ಪುಗಳ ಕಿಚ್ಚ ಮಾತನಾಡಿದ್ದಾರೆ.
ಈ ವಾರ ಭಾಗ್ಯಶ್ರೀ, ಸಂಗೀತಾ, ತನಿಷಾ, ಕಾರ್ತಿಕ್, ತುಕಾಲಿ, ನಮ್ರತಾ, ಇಶಾನಿ, ಸ್ನೇಹಿತ್, ನೀತು, ವರ್ತೂರು ಸಂತೋಷ್ ನಾಮಿನೇಟ್ ಆಗಿದ್ದರು. ಇವರಲ್ಲಿ ಪ್ರತಾಪ್ ಟಾಸ್ಕ್ ನಲ್ಲಿ ಗೆದ್ದು ಸಿಕ್ಕ ಪವರ್ ನಿಂದ ಭಾಗ್ಯಶ್ರೀ, ಸಂಗೀತಾ ಹಾಗೂ ತನಿಷಾ ಉಳಿಸಿದ್ದಾರೆ. ಇನ್ನು ನಮ್ರತಾ, ಕಾರ್ತಿಕ್, ತುಕಾಲಿ ಸಂತೂ ಅವರು ಎಲಿಮಿನೇಷನ್ ನಿಂದ ಪಾರಾರಾಗಿದ್ದಾರೆ ಎಂದು ಕಿಚ್ಚ ಹೇಳಿದ್ದಾರೆ
ವರ್ತೂರು ಸಂತೋಷ್ ಹೇಳಿದ್ದೇನು?
"ಹೊರಗಡೆ ಒಂದು ಘಟನೆ ನಡೆಯಿತು. ಅದನ್ನು ಮರೆತು ಇಲ್ಲಿ ಆಡಬೇಕು ಅಂದರು. ನನಗೆ ಆಗ್ತಾ ಇಲ್ಲ. ನಾನು ಹೊರಗಡೆ ಹೋಗಬೇಕು" ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಕಿಚ್ಚ ಸುದೀಪ್ ಹೇಳಿದ್ದೇನು?
ಆಗ ಕಿಚ್ಚ ಸುದೀಪ್ ಅವರು 35 ಲಕ್ಷ ಮತಗಳು ಬಂದಿವೆ. ಆ ಜನರ ವಿರುದ್ಧವಾಗಿ ನಾನು ಹೋಗೋಕೆ ಆಗಲ್ಲ, ಹೋಗೋದಿಲ್ಲ, ನನಗೆ ಬೇಸರವಾಗಿದೆ" ಎಂದು ಹೇಳಿದ್ದಾರೆ.
ಮನಸ್ಸು ಬದಲಾಯಿಸ್ತಾರಾ ಸಂತೋಷ್?
ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯ ಗೇಟ್ ಬಳಿ ಬಂದಿದ್ದು, ಸಂಗೀತಾ ಅವರು, "ಮತ್ತೆ ಈ ಅವಕಾಶ ಸಿಗೋದಿಲ್ಲ" ಎಂದು ಹೇಳಿದ್ದಾರೆ. ಹೀಗಿದ್ದರೂ ಕೂಡ ವರ್ತೂರು ಅವರು ಯಾರ ಮಾತನ್ನೂ ಕೇಳಿಲ್ಲ. ಆದರೆ ಸಂತೋಷ್ ಅವರು ಮನೆಯಿಂದ ಹೊರಗಡೆ ಹೋಗೋದು ಡೌಟ್. ಕಿಚ್ಚ ಸುದೀಪ್, ಸ್ಪರ್ಧಿಗಳು ಸೇರಿಕೊಂಡು ಸಂತೋಷ್ ಅವರನ್ನು ಅಲ್ಲಿಯೇ ಇರಬೇಕು ಅಂತ ಮನವೊಲಿಸಬಹುದು.
ಯಾಕೆ ಇಷ್ಟ ಆಗ್ತಿಲ್ಲ?
ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎನ್ನುವ ಆರೋಪದಡಿ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು. ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯೊಳಗಡೆ ತೆರಳಿ ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದರು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಜಾಮೀನು ಮೂಲಕ ಸಂತೋಷ್ ಹೊರಗಡೆ ಬಂದಿದ್ದರು. ಆಮೇಲೆ ಅವರು ದೊಡ್ಮನೆಯೊಳಗಡೆ ಎಂಟ್ರಿ ನೀಡಿದ್ದರು. ಯಾರು ಎಷ್ಟೇ ಧೈರ್ಯ ತುಂಬಿದ್ದರೂ ಸಂತೊಷ್ ಅವರಿಗೆ ಈಗ ಬಿಗ್ ಬಾಸ್ ಮನೆಯಲ್ಲಿ ಇರಲು ಇಷ್ಟವೇ ಇಲ್ಲ. ಮಾನಸಿಕವಾಗಿ ಸಂತೋಷ್ ಅವರಿಗೆ ಚೆನ್ನಾಗಿ ಆಟ ಆಡಲು ಆಗುತ್ತಿಲ್ಲ. ಹೀಗಾಗಿ ಅವರು ದೊಡ್ಮನೆಯಿಂದ ಹೊರಗಡೆ ಬರ್ತೀನಿ ಅಂತ ಹೇಳುತ್ತಿದ್ದಾರೆ.
ಇನ್ನು ಉಳಿದಿರುವ ನೀತು, ಸ್ನೇಹಿತ್, ವರ್ತೂರು ಸಂತೋಷ್, ಇಶಾನಿ ಅವರಲ್ಲಿ ಯಾರು ಮನೆಯಿಂದ ಹೊರಬರುತ್ತಾರೆ ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ.
Big boss Varthur Santhosh says i want to leave house even after being saved with 35 lakhs votes, says i can't play because of the tiger claw pendant. Sudeep was shocked and gets out of stage.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm