ಬ್ರೇಕಿಂಗ್ ನ್ಯೂಸ್
20-08-23 09:45 pm HK News Desk ಕರ್ನಾಟಕ
ದಾವಣಗೆರೆ, ಆಗಸ್ಟ್ 20: ರಾಜ್ಯದ ದಾವಣಗೆರೆ ಮೂಲದ ಯೋಗೇಶ್ ಕುಟುಂಬದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯೋಗೇಶ್ ಕುಟುಂಬ ಅಮೆರಿಕಾದಲ್ಲಿ ವಾಸವಾಗಿತ್ತು. ಮೂವರ ಶವ ಮನೆಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಆತ್ಮಹತ್ಯೆ ಎಂದು ವರದಿಯಾಗಿತ್ತು. ಇದೀಗ ಪತ್ನಿ ಪ್ರತಿಭಾ, ಮಗು ಯಶ್ಗೆ ಗುಂಡಕ್ಕಿ ಹತ್ಯೆ ಮಾಡಿ ಕೊನೆಗೆ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬಾಲ್ಟಿಮೋರ್ ಪೊಲೀಸರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಕೊಲೆ ಮಾಡಿ ಆತ್ಮಹತ್ಯೆ ಯಾಕೆ ಮಾಡಿಕೊಂಡಿದ್ದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಗಸ್ಟ್ 18 ರಂದು ಪಕ್ಕದ ಮನೆಯವರ ಮಾಹಿತಿ ಮೇರೆ ಯೋಗೇಶ್ ಮನೆಗೆ ಪೊಲೀಸರು ಬಂದಿದ್ದರು. ಒಳಗಿನಿಂದ ಯಾರೂ ಪ್ರತಿಕ್ರಿಯೆ ನೀಡದ ಹಿನ್ನೆಲೆ ಬಾಗಿಲು ಒಡೆದು ನೋಡಿದಾಗ ಯೋಗೇಶ್, ಪ್ರತಿಭಾ ಮತ್ತು ಯಶ್ ಮೃತದೇಹ ಪತ್ತೆಯಾಗಿತ್ತು.
ಡೆತ್ ನೋಟ್ ಪತ್ತೆ ?
ಮೃತಪಟ್ಟ ಜಾಗದಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಬಾಲ್ಟಿಮೋರ್ ಪೊಲೀಸರು ಸ್ಪಷ್ಟ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ಮತ್ತು ಮೃತದೇಹ ತಾಯ್ನಾಡಿಗೆ ತರೆಸುವಂತೆ ಯೋಗೇಶ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಕಣ್ಣೀರಿಡುತ್ತಾ ಸರ್ಕಾರಕ್ಕೆ ಮನವಿ ಮಾಡಿರುವ ಮೃತ ಯೋಗೇಶ್ ತಾಯಿ ಶೋಭಾ, ನಮ್ಮ ಬಳಿ ಮಗ ಮತ್ತು ಸೊಸೆ ಯಾವುದೇ ತೊಂದರೆ ಆಗಿರುವ ಬಗ್ಗೆ ಹೇಳಿಕೊಂಡಿಲ್ಲ. ಮದುವೆಯಾಗಿ 9 ವರ್ಷ ಆಗಿದೆ. ಮದುವೆಯಾದ ಸಮಯದಿಂದ ಅಲ್ಲಿಯೇ ಇದ್ದಾರೆ. ನಮ್ಮ ಸೊಸೆ ಬೆಂಗಳೂರು ಮೂಲದವರು, ಯಾವಾಗ? ಏನಾಗಿದೆ ಅಂತ ನಮಗೆ ಮಾಹಿತಿ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
Couple from Davangere, son, found dead at home in America, twist of double murder and suicide. Based on the initial investigation, the incident is believed to be a double murder-suicide that Nagarajappa committed," Baltimore County Police spokesperson Anthony Shelton was quoted as saying by The Baltimore Sun newspaper.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
07-07-25 12:20 pm
Mangalore Correspondent
Tamilnadu Lock up death, Kannada News: ತಮಿಳುನ...
06-07-25 10:52 pm
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm