ಬ್ರೇಕಿಂಗ್ ನ್ಯೂಸ್
17-06-23 01:52 pm HK News Desk ಕರ್ನಾಟಕ
ಮೈಸೂರು, ಜೂ 17: ಯಡಿಯೂರಪ್ಪ ಪ್ರಯತ್ನದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಅವರ ನಂತರ ಬಂದವರು ಮಾಡಿದ್ದೇನು ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪ್ರವಾಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಒಬ್ಬರೇ ಪರಿಸ್ಥಿತಿ ನಿಭಾಯಿಸಿದರು. ಕೋವಿಡ್ ವೇಳೆ ಜನರ ಪ್ರಾಣ ಉಳಿಸಲು ಇಡೀ ಸರ್ಕಾರ ಪ್ರಯತ್ನಿಸಿತು. ಕಷ್ಟದ ಸಂದರ್ಭಗಳಲ್ಲಿ ಯಡಿಯೂರಪ್ಪ ರಾಜ್ಯ ಕಾಪಾಡಿದ್ದಾರೆ. ಆದರೆ ಅವರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಎಂದು ಬೊಮ್ಮಾಯಿ ಹೆಸರೆತ್ತದೆ ಪ್ರಶ್ನಿಸಿದರು.
ಯಡಿಯೂರಪ್ಪ ನಂತರ ಬಂದವರು ಕಾರ್ಯಕರ್ತರ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಹಿಂದೂ ಮುಖಂಡರಾದ ಪ್ರವೀಣ್ ನೆಟ್ಟಾರು, ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಉತ್ಸಾಹ ಕಾಣಿಸಲಿಲ್ಲ ಎಂದ ಪ್ರತಾಪ್ ಸಿಂಹ ನಾನು ಜನರ ಆಕ್ರೋಶ, ಕಾರ್ಯಕರ್ತರ ನೋವಿಗೆ ಧ್ವನಿಯಾಗಿದ್ದೇನೆಯೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ಗ್ಯಾರಂಟಿಗೆ ಬೇಕಾದ 59 ಸಾವಿರ ಕೋಟಿ ಹಣ ಎಲ್ಲಿಂದ ತರುತ್ತೀರಾ? ನನ್ನನ್ನು ಎಳಸು ಎಂದರೂ ಬೇಸರವಿಲ್ಲ, ನನ್ನ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರೆ ಸಾಕು. ಹಣಕಾಸು ಬಗ್ಗೆ ತಿಳಿದ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದ್ರಿ? ನನ್ನನ್ನ ಚೈಲ್ಡ್ ಅಂತಾನೆ ಕರೆಯಿರಿ ಬೇಜಾರು ಇಲ್ಲ, ಆದರೆ ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡುವುದು ಹೇಗೆ ತಿಳಿಸಿ?” ಎಂದು ಆಗ್ರಹಿಸಿದರು.
ಜಿ. ಪರಮೇಶ್ವರ್ರನ್ನು ಮುಗಿಸಿ ಸಿಎಂ ಆದರಲ್ಲ. ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ. ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಹಕರಿಸಿದ ಹೆಚ್ ಡಿ ದೇವೇಗೌಡರನ್ನ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ ಅದು ನನಗೆ ಬೇಡ” ಎಂದು ಲೇವಡಿ ಮಾಡಿದ್ದಾರೆ.
ಅಕ್ಕಿ ಕೊಡುವ ಘೋಷಣೆ ಮಾಡುವ ಮುನ್ನ ಮೋದಿ ಅವರನ್ನು ಕೇಳಿದಿರಾ? ಕಾಂಗ್ರೆಸ್ ಅಧಿಕಾರಕ್ಕೆ ತರಲು ಡಿಕೆಶಿ ಪ್ರಮುಖ ಪಾತ್ರ ವಹಿಸಿದರು. ಆದರೆ ಈಗ ಡಿಕೆಶಿ ವಿರುದ್ಧ ಎಂ ಬಿ ಪಾಟೀಲ್ ರನ್ನು ಛೂ ಬಿಟ್ಟಿದ್ದೀರಿ. ಇದನ್ನೆಲ್ಲಾ ಮೆಚ್ಯೂರಿಟಿ ಎನ್ನುವುದಾದರೆ ಈ ರೀತಿಯ ಪ್ರಬುದ್ಧತೆ ನಿಮ್ಮಿಂದ ನನಗೆ ಬೇಡ” ಎಂದರು.
Mysuru BJP MP Pratap Simha indirectly slammed former Karnataka CM Basavaraj bommai for his governance. What measures did bommai take in the murder of Praveen nettaru or harsha murder in Shivamogga.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 10:52 pm
HK News Desk
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm