ಬ್ರೇಕಿಂಗ್ ನ್ಯೂಸ್
09-06-23 03:50 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 9: ಕರ್ನಾಟಕ ರಾಜ್ಯಕ್ಕೆ ಮುಂಗಾರು ಆಗಮನ ತಡವಾಗಿದೆ ಕಂಡು ಕೇಳರಿಯದ ಬಿಸಿಲಿನ ಕಾರಣ ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ.
ಅತಿಯಾದ ಬಿಸಿಲು ಇದ್ದ ಕಾರಣ ನೀರು ತ್ವರಿತವಾಗಿ ಖಾಲಿಯಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಬಿಸಿಲು ಹೆಚ್ಚಾಗಿದ್ದು, ನದಿ, ಹೊಳೆಗಳಲ್ಲಿ ಕೂಡ ನೀರಿಲ್ಲದಂತಾಗಿದೆ. ಮಂಗಳೂರು ನಗರದಲ್ಲಿ ನೀರಿನ ಕೊರತೆಯಿಂದಾಗಿ ಶಾಲಾ-ಕಾಲೇಜುಗಳಿಗೂ ರಜೆ ಕೊಡುವಂತ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎನ್ನುವ ಅರ್ಥದಲ್ಲಿ ಬಿಜೆಪಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದು, ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನೆ ಮಾಡಿದೆ.
ಸಿದ್ದುಕಾಲ ಎಂದರೆ ಬರಗಾಲ ಎಂದ ಬಿಜೆಪಿ ;
ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ "ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಮುಂಗಾರು ಓಡಿಹೋಯಿತೇ! ಸಿದ್ದರಾಮಯ್ಯನವರೇ?" ಎಂದು ಪ್ರಶ್ನೆ ಮಾಡಿದೆ.
"ಬರಿದಾಯ್ತು ಘಟಪ್ರಭಾ, ಮಲಪ್ರಭಾ. ಬತ್ತಿ ಹೋಗುತ್ತಿದೆ ಕೆಆರ್ಎಸ್. ಶುರುವಾಗಿದೆ ಬೆಂಗಳೂರಿಗೆ ಜಲಕಂಟಕ. ಉಡುಪಿ-ಮಂಗಳೂರಲ್ಲಿ ನೀರಿಲ್ಲ, ಕಾಲೇಜು, ಹೋಟೆಲ್ಗಳು ಬಂದ್ !, ಸಿಗಂದೂರಿನ ಹಿನ್ನೀರು ಸಂಪೂರ್ಣ ಖಾಲಿ. ಕೃಷ್ಣ, ತುಂಗೆಯೂ ಬರಿದು. ತಳಕಂಡ ನಾರಾಯಣಪುರ ಬಲದಂಡೆ. ಆದರೂ ತಾವು ಮೌನವಾಗಿದ್ದೀರಿ" ಎಂದು ಸಿದ್ದರಾಮಯ್ಯ ಅವರನ್ನು ಕೇಳಿದೆ.
"ರಾಜ್ಯದಲ್ಲಿ ಕ್ಷಾಮ ಪಕ್ಷದ ಕಾಲ್ಗುಣದಿಂದ ಉಂಟಾದ ಈ ಘನಘೋರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ, ಹೇಗೆ 'ಸಿದ್ದ' ರಾಗಿದ್ದೀರಿ?" ಕಾಗೆ ಹಾರಿಸದೆ, ರಾಜ್ಯಕ್ಕೆ ಉತ್ತರ ಕೊಡಿ ಎಂದು ಕೇಳಿದೆ.
ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಮುಂಗಾರು ಓಡಿಹೋಯಿತೇ! @siddaramaiahನವರೇ,
— BJP Karnataka (@BJP4Karnataka) June 9, 2023
🗣 ಬರಿದಾಯ್ತು ಘಟಪ್ರಭಾ, ಮಲಪ್ರಭಾ.
ತಾವು ಮಾತ್ರ 🤐
🗣 ಬತ್ತಿ ಹೋಗುತ್ತಿದೆ ಕೆಆರ್ಎಸ್.
ತಾವು ಮಾತ್ರ🤐
🗣 ಶುರುವಾಗಿದೆ ಬೆಂಗಳೂರಿಗೆ ಜಲಕಂಟಕ.
ತಾವು ಮಾತ್ರ 🤐
🗣 ಉಡುಪಿ-ಮಂಗಳೂರಲ್ಲಿ ನೀರಿಲ್ಲ, ಕಾಲೇಜು, ಹೋಟೆಲ್ಗಳು ಬಂದ್!
ತಾವು…
No rains, waterbodies river dried up, BJP tweets says its all becuase of the fate of CM Siddaramaiah.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 10:52 pm
HK News Desk
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm