ಬ್ರೇಕಿಂಗ್ ನ್ಯೂಸ್
10-03-23 01:41 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.10: ಹೆಚ್ 3ಎನ್ 2 ವೈರಸ್ ಸೋಂಕಿಗೆ ಹಾಸನ ಜಿಲ್ಲೆಯ ಈರೇಗೌಡ ಎಂಬ 82 ವರ್ಷದ ವೃದ್ಧ ವ್ಯಕ್ತಿ ಬಲಿಯಾಗಿದ್ದಾರೆ. ಮಾರ್ಚ್ 6ರಂದು ಇವರು ಮೃತಪಟ್ಟಿದ್ದು, ಹೆಚ್3ಎನ್2 ವೈರಸ್ಗೆ ಎಂಬುದು ದೃಢಪಟ್ಟಿದೆ, ಈ ಮೂಲಕ ಹೊಸ ವೈರಸ್ ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವಾಗಿದೆ.
ದೇಶದಲ್ಲಿ H3N2 ವೈರಸ್ನಿಂದ ಉಂಟಾದ ಮೊದಲ ಎರಡು ಸಾವುಗಳು ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ., ಒಬ್ಬರು ಕರ್ನಾಟಕದವರು ಮತ್ತು ಇನ್ನೊಂದು ಹರಿಯಾಣದವರು. ಈರೇಗೌಡ ಫೆಬ್ರವರಿ 24 ರಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ವೈರಸ್ ಸೋಂಕಿನ ರೀತಿಯ ರೋಗ ಲಕ್ಷಣಗಳೊಂದಿಗೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು.
ಈರೇಗೌಡರ ಕುಟುಂಬ ಸದಸ್ಯರು ಮತ್ತು ಸಂಪರ್ಕದ ವ್ಯಕ್ತಿಗಳನ್ನು ಆರೋಗ್ಯ ಸಿಬಂದಿ ಸಮೀಕ್ಷೆ ಮಾಡಿದ್ದಾರೆ. ಅವರ ಪತ್ನಿ ಸೇರಿದಂತೆ ಎಲ್ಲರಿಗೂ ವೈರಸ್ ನೆಗೆಟಿವ್ ಬಂದಿದೆ. ಮುಂದಿನ 14 ದಿನಗಳವರೆಗೆ ಪ್ರದೇಶದಲ್ಲಿ ಕಣ್ಗಾವಲು ಮುಂದುವರಿಸಲು ಯೋಜಿಸಿದ್ದಾರೆ.
ಈ ಹಿಂದೆ ಕೋವಿಡ್ -19 ನಿಂದ ಬಳಲುತ್ತಿರುವ ಜನರು H3N2 ಸೋಂಕಿಗೆ ಒಳಗಾದ ವೇಳೆ ಹೆಚ್ಚು ಕೆಮ್ಮು ಲಕ್ಷಣ ಅನುಭವಿಸಿದ್ದರು. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸೋಂಕಿನ ಲಕ್ಷಣ ಕಂಡುಬರುತ್ತವೆ. ಗರ್ಭಿಣಿಯರು ಸಹ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಕಟ್ಟುನಿಟ್ಟಾದ ನೈರ್ಮಲ್ಯ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಬಹುದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕೆಮ್ಮು, ಜ್ವರ ಹಾಗೂ ಕೋವಿಡ್ ರೀತಿಯ ರೋಗಲಕ್ಷಣದ ಎಚ್3ಎನ್2 ಸೋಂಕಿನ 26 ಪ್ರಕರಣಗಳು ಪತ್ತೆಯಾಗಿವೆ.
An 82-year-old man in Karnataka's Hassan is believed to be the first to die of H3N2 in the country. Hire Gowda was admitted to hospital on February 24 and died on March 1, according to officials. He was reportedly a diabetic and suffered from hypertension.
20-01-26 02:15 pm
Bangalore Correspondent
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
ಇವಿಎಂಗೆ ಗುಡ್ ಬೈ, ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ;...
20-01-26 12:03 pm
ನನ್ನ ವಿರುದ್ಧ ಯಾರೋ ಅಪರಿಚಿತರು ಷಡ್ಯಂತ್ರ ಮಾಡಿದ್ದಾ...
19-01-26 08:42 pm
19-01-26 11:03 pm
HK News Desk
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
19-01-26 10:55 pm
Mangalore Correspondent
Kukke Subramanya, Drowning: ಕುಕ್ಕೆ ಸುಬ್ರಹ್ಮಣ್...
18-01-26 09:58 pm
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
19-01-26 10:20 pm
HK News Desk
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm
ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಲೈ...
19-01-26 03:38 pm
Mangalore Crime, Konaje Police: ಕಾಂಗ್ರೆಸ್ ಕಾರ...
18-01-26 12:58 pm
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm