ಬ್ರೇಕಿಂಗ್ ನ್ಯೂಸ್
13-01-23 10:55 pm HK News Desk ಕರ್ನಾಟಕ
ಮೈಸೂರು, ಜ.13 : ಕರ್ನಾಟಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್.ಮಂಜುನಾಥ್ ಅಂದ್ರೆ ಮಿರುಗುವ ಚಿನ್ನದ ಸರ, ಕೈಗೆ ಉಂಗುರ, ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್, ತಲೆಗೆ ಆಕರ್ಷಕ ವಿಗ್ ಹಾಕಿದ್ದ ಫೋಟೊ ಅಷ್ಟೇ ನೋಡಿದ್ದೆವು. ಆದರೆ ಪೊಲೀಸರ ಕಣ್ತಪ್ಪಿಸಿ ಓಡಾಡ್ತಿದ್ದ ನೂರಾರು ಕೋಟಿ ಒಡೆಯ ರವಿ, ಆ ಎಲ್ಲವನ್ನೂ ಬಿಟ್ಟು ಖಾಲಿ ಖಾಲಿಯಾಗಿದ್ದ. ಬೋಳು ತಲೆ, ಮೀಸೆಯನ್ನೂ ತೆಗೆದಿದ್ದ ಸ್ಯಾಂಟ್ರೋ ರವಿ ತನ್ನನ್ನು ಸುಲಭದಲ್ಲಿ ಯಾರೂ ಗುರುತು ಹಿಡಿಯದಂತೆ ವೇಷ ಬದಲಿಸಿಕೊಂಡಿದ್ದ.
ಈ ನಡುವೆ, ಮೈಸೂರು, ಬೆಂಗಳೂರು, ಮಂಗಳೂರು ಸುತ್ತಾಡಿದ್ದ ರವಿ ಗುಜರಾತ್ ಸೇರಿದ್ದೇ ರೋಚಕ. ಮಂಗಳೂರಿನಿಂದ ಪುಣೆಗೆ ಹೋಗಿ ಅಲ್ಲಿಂದ ಗುಜರಾತಿನ ಅಹ್ಮದಾಬಾದ್ ಸೇರಿದ್ದಾನೆ ಎನ್ನುವ ಮಾಹಿತಿ ಕಲೆಹಾಕಲಾಗಿದೆ. ಇದೇ ವೇಳೆ, ಹಲವಾರು ಹೊಸ ಸಿಮ್ ಗಳನ್ನೂ ಖರೀದಿಸಿದ್ದಾನೆ. ಈ ನಡುವೆ, ರವಿಯ ಬಂಧನ ಪೊಲೀಸರಿಗೆ ಸವಾಲಾಗುತ್ತಿದ್ದಂತೆ ಆಪ್ತರನ್ನು ಬಲೆಗೆ ಕೆಡವಿದ್ದರು. ಅಲ್ಲದೆ, ಯಾರೆಲ್ಲ ಆಪ್ತರಿದ್ದಾರೋ ಅವರ ಮೊಬೈಲ್ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಇದೇ ವೇಳೆ, ಮೈಸೂರಿನ ಚೇತನ್ ಎಂಬಾತನಿಗೆ ಅಪರಿಚಿತ ನಂಬರಿನಿಂದ ಕರೆ ಬಂದಿದ್ದನ್ನು ಪೊಲೀಸರು ಗಮನಿಸಿದ್ದಾರೆ. ಟ್ರೇಸ್ ಮಾಡಿದಾಗ, ಆ ಕರೆ ಅಹ್ಮದಾಬಾದ್ ನಿಂದ ಬಂದಿರುವುದು ತಿಳಿದುಬಂದಿತ್ತು. ಅದು ಸ್ಯಾಂಟ್ರೋ ರವಿಯದ್ದೇ ಎನ್ನುವುದನ್ನು ದೃಢ ಪಡಿಸುತ್ತಲೇ ಮೈಸೂರು ಪೊಲೀಸರ ತಂಡ ಅಹ್ಮದಾಬಾದ್ ತಲುಪಿತ್ತು.

ಸ್ಯಾಂಟ್ರೋ ರವಿ ತನ್ನ ವೇಷ ಬದಲಿಸಿಕೊಳ್ತಾನೆ ಎನ್ನುವುದು ಪೊಲೀಸರಿಗೂ ತಿಳಿದಿತ್ತು. ಹಾಗಾಗಿ ಆತನ ಎಲ್ಲ ರೀತಿಯ ಚಹರೆಗಳನ್ನೂ ರೆಡಿ ಮಾಡ್ಕೊಂಡಿದ್ದರು. ಬೋಳು ತಲೆ, ಮೀಸೆ ತೆಗೆದರೆ ಹೇಗಿರುತ್ತಾನೆ ಎನ್ನುವ ಚಿತ್ರವೂ ರೆಡಿಯಾಗಿತ್ತು. ಪೊಲೀಸರು ಅಂದ್ಕೊಂಡ ರೀತಿಯಲ್ಲೇ ರವಿ ವೇಷ ಬದಲಾಗಿತ್ತು. ಅಹ್ಮದಾಬಾದ್ ತಲುಪಿದ ಪೊಲೀಸರು ತಮ್ಮ ಕೈಲಿದ್ದ ಫೋಟೊ ಹಿಡಿದುಕೊಂಡೇ ಸಿವಿಲ್ ಡ್ರೆಸ್ನಲ್ಲಿ ಆ ಹೊಟೇಲ್ ನುಗ್ಗಿದ್ದರು. ಅಲ್ಲಿಯೇ ಶುಕ್ರವಾರ ಬೆಳಗ್ಗೆ ಸಿಕ್ಕಾಕ್ಕೊಂಡಿದ್ದಾನೆ ಎನ್ನಲಾಗುತ್ತಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಆತನ ಜೊತೆಯಲ್ಲಿದ್ದ ಮೈಸೂರಿನ ಶೃತೇಶ್, ಗುಜರಾತ್ ಮೂಲದ ಕೊಚ್ಚಿಯ ನಿವಾಸಿ ರಾಮ್ ಜಿ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಇದಕ್ಕೂ ಮೊದಲೇ ಸ್ಯಾಂಟ್ರೋ ರವಿಯೊಂದಿಗೆ ಸಂಪರ್ಕದಲ್ಲಿದ್ದ ಮಧುಸೂದನ್ ಎಂಬಾತನನ್ನು ಬಂಧಿಸಲಾಗಿತ್ತು ಎಂದು ಮಾಹಿತಿ ನೀಡಿದರು.


ಸ್ಯಾಂಟ್ರೋ ರವಿ ತಲೆಗೆ ಹಾಕಿದ್ದ ವಿಗ್ ತೆಗೆದು ಮೀಸೆ ಬೋಳಿಸಿಕೊಂಡು ಯಾರಿಗೂ ಅನುಮಾನ ಬರದಂತೆ ತಲೆಮರೆಸಿಕೊಂಡಿದ್ದ. ರಾಯಚೂರು ಎಸ್ಪಿ, ಮಂಡ್ಯ ಎಸ್ಪಿ, ರಾಮನಗರ ಎಸ್ಪಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕರ್ನಾಟಕ ಪೊಲೀಸರ ಮರ್ಯಾದೆ ಉಳಿಸುವ ಕೆಲಸ ಸಿಬ್ಬಂದಿ ಮಾಡಿದ್ದಾರೆ. 1500 ಕಿಮೀ ದೂರದಲ್ಲಿ ಹೋಗಿ ಆರೋಪಿ ಹಿಡಿದಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದರು.
Hytech pimp santro ravi arrest in Gujrath interesting story.
19-01-26 08:42 pm
Bangalore Correspondent
ಐಪಿಎಸ್ ರಾಮಚಂದ್ರ ರಾವ್ ಸರಸ ವಿಡಿಯೋ ; ಎಷ್ಟೇ ದೊಡ್ಡ...
19-01-26 08:34 pm
ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ಬೆತ್ತಲೆ, ರಾಸ...
19-01-26 05:04 pm
ಲಕ್ಕುಂಡಿ ಗ್ರಾಮದಲ್ಲಿ ಸಾವಿರ ಕೇಜಿಯ ಶಿವಲಿಂಗ ಇದೆ ;...
19-01-26 03:33 pm
ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿ ;...
19-01-26 03:08 pm
19-01-26 11:03 pm
HK News Desk
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
19-01-26 10:55 pm
Mangalore Correspondent
Kukke Subramanya, Drowning: ಕುಕ್ಕೆ ಸುಬ್ರಹ್ಮಣ್...
18-01-26 09:58 pm
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
19-01-26 10:20 pm
HK News Desk
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm
ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಲೈ...
19-01-26 03:38 pm
Mangalore Crime, Konaje Police: ಕಾಂಗ್ರೆಸ್ ಕಾರ...
18-01-26 12:58 pm
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm