ಬ್ರೇಕಿಂಗ್ ನ್ಯೂಸ್
15-11-22 06:21 pm HK News Desk ಕರ್ನಾಟಕ
ಕಲಬುರಗಿ, ನ.15 : ಮುಖ್ಯಮಂತ್ರಿ ಬೊಮ್ಮಾಯಿ ಬಂದು ಹೋದ ಬೆನ್ನಲ್ಲೇ ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ ಮಾಡಲಾಗಿದೆ. ಮಲ್ಲಿಕಾರ್ಜುನ್ ಮುತ್ಯಾಲ (64) ಎಂಬವರನ್ನು ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಮಲ್ಲಿಕಾರ್ಜುನ್ ಮುತ್ಯಾಲ ಅವರು ಸೇಡಂ ಪಟ್ಟಣದಲ್ಲಿ ಎಲೆಕ್ಟ್ರಾನಿಕ್ ಶಾಪ್ ಹೊಂದಿದ್ದರು. ಪ್ರತಿ ದಿನವೂ ಅವರು ಶಾಪ್ನಲ್ಲೇ ಮಲಗುತ್ತಿದ್ದರಂತೆ. ನಿನ್ನೆ ರಾತ್ರಿಯೂ ಅಲ್ಲಿಯೇ ನಿದ್ರಿಸಿದ್ದು ಈ ವೇಳೆ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಮರ್ಮಾಂಗಕ್ಕೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಕುತ್ತಿಗೆಗೆ ಹಗ್ಗ ಬಿಗಿದು ನೇತು ಹಾಕಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸೇಡಂ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮಲ್ಲಿಕಾರ್ಜುನ್ ಅವರು ಈ ಹಿಂದೆ ಜೆಡಿಎಸ್ನಲ್ಲಿದ್ದರು. ಇತ್ತೀಚೆಗಷ್ಟೇ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ನಿರ್ಗಮನದ ಬೆನ್ನಲ್ಲೇ ಬಿಜೆಪಿ ಮುಖಂಡನ ಕೊಲೆ ಆಗಿರುವುದು ಸಂಚಲನ ಮೂಡಿಸಿದೆ.
Murder of BJP leader in Kalburgi soon after the visit of CM Bommai, private part cut into pieces.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
18-07-26 09:31 pm
HK News Staffer
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ...
18-07-26 06:22 pm
ಡೊನಾಲ್ಡ್ ಟ್ರಂಪ್ ಕೊಂದವರಿಗೆ 10 ಮಿಲಿಯನ್ ಡಾಲರ್ ಬಹ...
18-07-26 12:48 pm
‘ಪ್ರಾಜೆಕ್ಟ್ ಮೇಘಾಲಯ’ ಸಂಚು ಸ್ಫೋಟ! ವಿಜಯ್ ಸರ್ಕಾರ...
18-07-26 12:22 pm
51 ಬಾರಿ ವಿಷಸರ್ಪದಿಂದ ಕಚ್ಚಿಸಿಕೊಂಡರೂ ಸಾವಿನಿಂದ ಪಾ...
17-07-26 10:32 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
18-07-26 10:06 pm
HK News Staffer
ಮೈಸೂರು ; ಹೊಸ ಬದುಕಿನ ಕನಸು 15 ದಿನದಲ್ಲೇ ನುಚ್ಚುನ...
18-07-26 07:27 pm
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ; 8 ಕಾರ್...
18-07-26 07:21 pm
ಸಂಪಾಜೆ ಮೀಸಲು ಅರಣ್ಯದಲ್ಲಿ ಕಾಡುಕೋಣ ಬೇಟೆ ; ತಡೆದು...
18-07-26 12:34 pm
ಬಿ.ಸಿ. ರೋಡಿನಲ್ಲಿ ಯುವತಿ ಹತ್ಯೆ ಘಟನೆ ನೆಪದಲ್ಲಿ ಜಾ...
17-07-26 09:07 pm