ಬ್ರೇಕಿಂಗ್ ನ್ಯೂಸ್
13-10-22 05:40 pm Bangalore Correspondent ಕರ್ನಾಟಕ
ಬೆಂಗಳೂರು, ಅ.13: ಇತ್ತೀಚೆಗೆ ಎಸ್ಸಿ-ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಿ ಬೀಗತೊಡಗಿದ್ದ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಹೊಸ ತಲೆನೋವು ಸೃಷ್ಟಿಯಾಗಿದೆ. ಮುಸ್ಲಿಮರಿಗೆ ಕೊಟ್ಟಿರುವ ಓಬಿಸಿ ಕೋಟಾದ ಮೀಸಲನ್ನು ರದ್ದುಪಡಿಸಿ ಅದನ್ನು ಇತರೇ ಹಿಂದುಳಿದ ವರ್ಗಗಳಿಗೆ ನೀಡಬೇಕೆಂಬ ಕೂಗು ಕೇಳಿಬಂದಿದೆ. ಹಿಂದುತ್ವ ಪ್ರತಿಪಾದಿಸುವ ಬಿಜೆಪಿ ಶಾಸಕರು ಮತ್ತು ಹಿಂದುತ್ವ ಸಂಘಟನೆಗಳು ಈ ಆಗ್ರಹ ಮಾಡಿದ್ದು, ಹೀಗೆ ಮಾಡಿದಲ್ಲಿ ಚುನಾವಣೆ ವೇಳೆಗೆ ಹಿಂದುತ್ವದ ಮತಗಳನ್ನು ಕ್ರೋಡೀಕರಣ ಮಾಡಲು ಸಾಧ್ಯ ಎನ್ನುವ ಹೊಸ ವಾದವನ್ನು ಮುಂದಿಟ್ಟಿದೆ.
ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಧಾರವಾಡ ಶಾಸಕ ಅರವಿಂದ ಬೆಲ್ಲದ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದು, ಸಂವಿಧಾನದಲ್ಲಿ ಜಾತಿ ಆಧಾರಿತವಾಗಿ ಮಾತ್ರ ಮೀಸಲು ನೀಡುವುದಕ್ಕೆ ಅವಕಾಶ ಇರುವುದು. ಆದರೆ ಹಿಂದಿನ ಕಾಂಗ್ರೆಸ್ ಸರಕಾರ ತುಷ್ಟೀಕರಣದ ಭಾಗವಾಗಿ ಮುಸ್ಲಿಮರನ್ನು ಓಬಿಸಿ ಕೋಟಾಕ್ಕೆ ಸೇರಿಸಿ ಅನ್ಯಾಯ ಮಾಡಿದೆ. ಮುಸ್ಲಿಮರು ಓಬಿಸಿ 2ಎ ಮತ್ತು 2ಬಿ ಕೆಟಗರಿಯಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ. ಅದನ್ನು ರದ್ದುಪಡಿಸಿ ಪಂಚಮಸಾಲಿ ಲಿಂಗಾಯತರನ್ನು ಓಬಿಸಿ 2ಎಗೆ ಸೇರಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಯತ್ನಾಳ್ ಮತ್ತು ಬೆಲ್ಲದ್ ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರವನ್ನೂ ಬರೆದಿದ್ದಾರೆ.
ಗೌಡ ಲಿಂಗಾಯತ, ಮಲ್ಲೇ ಗೌಡ್ರು, ದೀಕ್ಷರು ಕೂಡ ಪಂಚಮಸಾಲಿ ಲಿಂಗಾಯತರಲ್ಲಿ ಒಳಗೊಂಡಿದ್ದು, ಹಲವು ದಶಕಗಳಿಂದ ಮೀಸಲು ಕೇಳುತ್ತಿದ್ದಾರೆ. ಕೂಡು ಒಕ್ಕಲಿಗ ಸಮುದಾಯ ಕೂಡ 2ಎ ಮೀಸಲಾತಿಗಾಗಿ ಆಗ್ರಹ ಮಾಡುತ್ತಿದ್ದಾರೆ. ಗಂಗಾ ಮತಸ್ಥರು ಮತ್ತು ಕುರುಬ ಸಮುದಾಯದವರು ಕೂಡ ಮೀಸಲು ಕೇಳುತ್ತಿದ್ದು, ಇವರೆಲ್ಲರ ಬೇಡಿಕೆಗೆ ಮನ್ನಣೆ ನೀಡುವ ಸಮಯ ಬಂದಿದೆ ಎಂದು ಯತ್ನಾಳ್ ಹೇಳಿದ್ದಾರೆ. ಸಂವಿಧಾನದಲ್ಲಿ ಧರ್ಮಕ್ಕೆ ಸಂಬಂಧಿಸಿ ಮೀಸಲು ನೀಡಲು ಅವಕಾಶ ಇಲ್ಲದಿದ್ದರೂ ಮುಸ್ಲಿಮರಿಗೆ ಓಬಿಸಿ 2ಬಿ ಕೋಟಾದಲ್ಲಿ ನಾಲ್ಕು ಪರ್ಸೆಂಟ್ ಮೀಸಲು ನೀಡಲಾಗಿದೆ. ಕೆಲವು ಮುಸ್ಲಿಮರು 2ಎ ವಿಭಾಗದಲ್ಲಿಯೂ ಮೀಸಲು ಪಡೆಯುತ್ತಿದ್ದಾರೆ. ಮುಸ್ಲಿಮರಲ್ಲಿ 17 ಉಪ ಪಂಗಡಗಳಿದ್ದು ಅವುಗಳಿಗೆ ಮೀಸಲು ನೀಡಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರು ಎನ್ನುವ ನೆಲೆಯಲ್ಲಿ ಮೀಸಲಾತಿ ಕೋಟಾ ಇರುವಾಗ ಜಾತಿ ಆಧಾರಿತವಾಗಿ ಎರಡೆರಡು ಕಡೆ ಮೀಸಲು ಕೊಟ್ಟಿರುವುದು ಹೇಗೆ ಎಂದು ಅರವಿಂದ ಬೆಲ್ಲದ್ ಪ್ರಶ್ನೆ ಮಾಡಿದ್ದಾರೆ.
ಪಂಚಮಸಾಲಿ ಲಿಂಗಾಯತರು 3ಬಿ ಕೆಟಗರಿಯಲ್ಲಿದ್ದು ಅವರನ್ನು 2ಬಿಗೆ ಒಳಪಡಿಸಿದಲ್ಲಿ 15 ಪರ್ಸೆಂಟ್ ಮೀಸಲಾತಿ ಕೋಟಾ ಸಿಗುತ್ತದೆ. ಕ್ರಿಸ್ತಿಯನ್ನರು ಕೂಡ 3ಬಿ ಕೆಟಗರಿಯಲ್ಲಿ ಮೀಸಲಾತಿ ಪಡೆಯುತ್ತಾರೆ. ಮುಸ್ಲಿಮರಿಗೆ 2ಬಿಯಲ್ಲಿ ನೀಡಲಾಗಿರುವ ಕೋಟಾವನ್ನು ರದ್ದುಪಡಿಸಿದಲ್ಲಿ ಬ್ರಾಹ್ಮಣರಿಗೂ ಮೀಸಲು ಸೌಲಭ್ಯ ದೊರಕುತ್ತದೆ. ಕುರುಬ, ಮರಾಠರಿಗೂ ಮೀಸಲು ನೀಡಲು ಸಾಧ್ಯವಾಗುತ್ತದೆ ಎಂದು ಅರವಿಂದ ಬೆಲ್ಲದ್ ಹೇಳಿದ್ದಾರೆ.
ಕಾನೂನು ಪ್ರಕಾರ ಮಾಡುತ್ತೇವೆ ; ಸಿಎಂ
ಚುನಾವಣೆ ದೃಷ್ಟಿಯಿಂದ ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಸಿಎಂ ಬೊಮ್ಮಾಯಿ, ನಾವು ಕಾನೂನು ಪ್ರಕಾರ ಮಾಡುತ್ತೇವೆ. ಯಾವುದನ್ನೂ ಕಾನೂನು ಉಲ್ಲಂಘಿಸಿ ಮಾಡುವುದಿಲ್ಲ. ಮೀಸಲು ನೀಡಲು ಸಂವಿಧಾನದಲ್ಲಿ ಅವಕಾಶಗಳಿದ್ದಲ್ಲಿ ಅದನ್ನು ಪರಿಗಣಿಸುತ್ತೇವೆ ಎಂದಿದ್ದಾರೆ. ಮುಸ್ಲಿಮರ ಮೀಸಲು ರದ್ದುಪಡಿಸಿ ಓಬಿಸಿ ಕೋಟಾದಲ್ಲಿ ಇತರೇ ಹಿಂದುಳಿದ ವರ್ಗಗಳನ್ನು ಸೇರಿಸಿದಲ್ಲಿ ಆಮೂಲಕ ಇನ್ನಷ್ಟು ಜನರ ಓಲೈಕೆ ಸಾಧ್ಯ ಎನ್ನುವ ನೆಲೆಯಲ್ಲಿ ರಾಜ್ಯ ನಾಯಕರು ಯೋಚಿಸುತ್ತಿದ್ದಾರೆ.
ಓಬಿಸಿ ಅಂದರೆ ಕ್ಲಾಸ್, ಕಾಸ್ಟ್ ಅಲ್ಲ ; ಸಿಎಸ್
ಆದರೆ, ಬಿಜೆಪಿ ನಾಯಕರ ಈ ರೀತಿಯ ಹೇಳಿಕೆಗೆ ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕಾನಾಥ್ ಕಿಡಿಕಾರಿದ್ದಾರೆ. ಅದ್ಯಾವುದೂ ಕಾನೂನು ಪ್ರಕಾರ ಸಾಧ್ಯವಿಲ್ಲ. ಓಬಿಸಿ ಪಟ್ಟಿಯಿಂದ ಯಾವುದೇ ಜಾತಿಯನ್ನು ಹೊರಕ್ಕಿಡುವುದು ಸಾಧ್ಯವಾಗಲ್ಲ. ಹಾವನೂರು ಆಯೋಗ ವರದಿ ತಯಾರಿಸುವ ಸಂದರ್ಭದಲ್ಲಿ ಇಂಥಹದ್ದೇ ಚರ್ಚೆ ಇತ್ತು. ಯಾವುದೇ ಜಾತಿ, ವರ್ಗವನ್ನು ಆರ್ಥಿಕ ಆಧಾರದಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕೇ ಬೇಡವೇ ಎನ್ನುವ ಚರ್ಚೆ ಇತ್ತು. ಓಬಿಸಿ ಅಂದರೆ, ಅದು ಕ್ಲಾಸ್, ಕಾಸ್ಟ್ ಅಲ್ಲ. ಕರ್ನಾಟಕ ಓಬಿಸಿ ಲಿಸ್ಟ್ ನಲ್ಲಿ ಕ್ರಿಸ್ತಿಯನ್, ಸಿಖ್, ಜೈನರೂ ಇದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಪಂಚಮಸಾಲಿ ಸಮುದಾಯ ಮೀಸಲು ಆಗ್ರಹಿಸಿ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ, ಒತ್ತಾಯ ಮಾಡುತ್ತಲೇ ಬಂದಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಭರವಸೆ ನೀಡುತ್ತ ಬಂದಿದ್ದರೂ, ಅದನ್ನು ಕಾರ್ಯರೂಪಕ್ಕೆ ತರುವುದು ಸುಲಭದ ಮಾತಲ್ಲ. ಹೀಗಾಗಿ ಇರುವ ಮೀಸಲನ್ನೇ ಹಂಚುವ ಸಲುವಾಗಿ ಕೆಲವನ್ನು ರದ್ದುಪಡಿಸಿ, ಒಂದಷ್ಟು ಸಮುದಾಯಗಳಿಗೆ ಹೊಸತಾಗಿ ಹೊಂದಿಸಬೇಕಾಗಿದೆ. ಇತ್ತೀಚೆಗೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುತ್ವ ಆಧಾರದ ಮತಗಳನ್ನು ಆಕರ್ಷಿಸಿರುವ ಬಿಜೆಪಿ ನಾಯಕರು, ಮುಸ್ಲಿಮರ ಓಬಿಸಿ (2ಬಿ) ಕೆಟಗರಿಯನ್ನು ರದ್ದುಪಡಿಸಿ ಅವನ್ನು ಇತರೇ ಪಂಗಡಗಳಿಗೆ ಹಂಚಿದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಲಾಭ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
Calls to do away with the 4 per cent reservation exclusively given to Muslims under the OBC category in Karnataka are growing within the ruling BJP. Following the ban on Popular Front of India (PFI), the theory doing the rounds within the ruling BJP. Following the ban on Popular Front of India (PFI), the theory doing the rounds within the ruling BJP is that doing away with reservation for Muslims to accommodate Lingayats or Brahmins would help the party in a big way during the Assembly elections.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm