ಬ್ರೇಕಿಂಗ್ ನ್ಯೂಸ್
29-09-22 01:58 pm HK News Desk ಕರ್ನಾಟಕ
ಬೆಳಗಾವಿ, ಸೆ.29 : ಈ ದೇಶದಲ್ಲಿ ಮೊದಲಿಗೆ ನಿಷೇಧ ಮಾಡಬೇಕಿರುವುದು ಕಾಂಗ್ರೆಸ್ ಪಕ್ಷವನ್ನು. ದೇಶದಲ್ಲಿ ಇವತ್ತು ಪಿಎಫ್ಐ, ಎಸ್ ಡಿ ಪಿ ಐ ಅಂತಹ ಸಂಘಟನೆಗಳಿಗೆ ಭಯೋತ್ಪಾದನೆ ಚಟುವಟಿಕೆ ನಡೆಸಲು ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಅದಕ್ಕಾಗಿ ಕಾಂಗ್ರೆಸನ್ನು ಮೊದಲು ನಿಷೇಧ ಮಾಡಬೇಕೆಂದು ಹೇಳ್ತೀನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದ್ದಾರೆ.
ಮಹಾತ್ಮ ಗಾಂಧಿಯವರಿಗೆ ಮೊದಲೇ ಗೊತ್ತಿತ್ತು. ಕಾಂಗ್ರೆಸ್ ಸ್ವಾತಂತ್ರ್ಯಾ ನಂತರ ದೇಶದಲ್ಲಿ ಆಡಳಿತ ಮಾಡಿದ್ರೆ ದೇಶವನ್ನ ಹಾಳು ಮಾಡುತ್ತದೆ ಅಂತ. ಹಾಗಾಗಿ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಅನ್ನ ವಿಸರ್ಜನೆ ಮಾಡಲಿ ಅಂತ ಹೇಳಿದ್ದರು. ಆದರೆ ಇವರು ಮಾಡಿರಲಿಲ್ಲ. ಸಿದ್ದರಾಮಯ್ಯ ತಮ್ಮ ಸರಕಾರದ ಅವಧಿಯಲ್ಲಿ ಎಷ್ಟು ಜನ ಪಿಎಫ್ಐ ಕಾರ್ಯಕರ್ತರನ್ನ ರಕ್ಷಣೆ ಮಾಡಿದ್ದಾರೆ ಅಂತ ಹಿಂದೆ ತಿರುಗಿ ನೋಡಲಿ. ಕಾಂಗ್ರೆಸ್ ನವರು ಹಂತಕರನ್ನ ರಕ್ಷಣೆ ಮಾಡಿದ್ದಾರೆ. ಆ ಬಗ್ಗೆ ಒಮ್ಮೆ ಅಧ್ಯಯನ ಮಾಡಿದರೆ ಒಳ್ಳೆಯದು. ಆಗ ಅವರೇ ಕಾಂಗ್ರೆಸ್ ನಿಷೇಧ ಮಾಡಬೇಕೆಂದು ಹೇಳ್ತಾರೆ ಎಂದು ಟಾಂಗ್ ನೀಡಿದ್ದಾರೆ.
ಅವಧಿ ಪೂರ್ವ ಚುನಾವಣೆ ಇಲ್ಲ
ಗುಜರಾತ್ ಜೊತೆಗೆ ಕರ್ನಾಟಕದಲ್ಲೂ ಡಿಸೆಂಬರ್ ನಲ್ಲಿ ಚುನಾವಣೆ ಆಗುತ್ತೆ ಎನ್ನುವ ವದಂತಿ ಕುರಿತ ಪ್ರಶ್ನೆಗೆ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬರಲ್ಲ. ನಮ್ಮ ಸರ್ಕಾರ ಪೂರ್ಣ ಅವಧಿ ಪೂರೈಸುತ್ತವೆ. ನಮಗೆ ಯಾವುದೇ ಚುನಾವಣೆ ಧಾವಂತ ಇಲ್ಲ. ಸಿಎಂ ಆಗೋ ಧಾವಂತ ಇರೋದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ. ನಮ್ಮ ಪಾರ್ಟಿಯಲ್ಲಿ ಅಂತಹ ಧಾವಂತಗಳು ಇಲ್ಲ ಎಂದರು.
ರಮೇಶ್ ಜಾರಕಿಹೊಳಿ ನಾಯಕತ್ವದಲ್ಲಿ ಬೆಳಗಾವಿ ಜಿಲ್ಲೆ ಚುನಾವಣೆ ಎದುರಿಸುತ್ತಿರಾ ಪ್ರಶ್ನೆಗೆ, ನಾವು ಎಲ್ಲರನ್ನೂ ಇಟ್ಟುಕೊಂಡು ಚುನಾವಣೆ ಗೆ ಹೋಗ್ತಿವಿ. ಸ್ಪಷ್ಟವಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ನಮ್ಮ ಗುರಿ ಸತೀಶ್ ಜಾರಕಿಹೊಳಿ. ನಮ್ಮದು ಮತ್ತು ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಗುರಿ ಒಂದೇ ಇದೆ. ಮುಂದಿನ ಚುನಾವಣೆಯಲ್ಲಿ ಬೆಳಗಾವಿಯಲ್ಲಿ18 ಸ್ಥಾನದ ಗೆಲುವು. ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಗುರಿಯಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನ ರಾಜಕೀಯ ಸನ್ಯಾಸತ್ವ ಕೊಡಿಸುವ ಸವಾಲನ್ನ ರಮೇಶ್ ಜಾರಕಿಹೊಳಿ ತೆಗೆದುಕೊಂಡಿದ್ದಾರೆ ಎಂದು ನಳಿನ್ ಹೇಳಿದರು. ಹಾಲಿ ಬಿಜೆಪಿ ಶಾಸಕರ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂಬ ಪ್ರಶ್ನೆಗೆ, ಹಾಲಿ ಶಾಸಕರನ್ನ ಬದಲಾಯಿಸುವ ಪ್ರಶ್ನೆಯಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ನಮ್ಮ ಪಕ್ಷದ ಶಕ್ತಿ. ಹಾಲಿ ಶಾಸಕರನ್ನ ಬದಲಾಯಿಸುವ ಬಗ್ಗೆ ಯಾವುದೇ ಯೋಚನೆ, ಚರ್ಚೆ ನಮ್ಮ ಮುಂದಿಲ್ಲ ಎಂದರು.
First congress should be banned, growth of PFI was by congress slams Nalin Kumar Kateel.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm