ಬ್ರೇಕಿಂಗ್ ನ್ಯೂಸ್
20-09-22 10:53 pm HK News Desk ಕರ್ನಾಟಕ
ಹಾವೇರಿ, ಸೆ.20 : ಎರಡು ಮೂರು ದಿನಗಳಿಂದ ಸ್ವಾಮೀಜಿಗೆ ಧಮ್ಕಿ ಬರ್ತಾ ಇತ್ತು. ಶಿಗ್ಗಾಂವ್ ನಲ್ಲಿ ಸಭೆ ಮಾಡಿಸಲು ಬಿಡಲ್ಲ ಅಂತಾ ಹೇಳಿದ್ರು. ಶಿಗ್ಗಾಂವ್ ಏನು ಪಾಕಿಸ್ತಾನ ಐತೇನು? ಎಂದು ಬಸವನಗೌಡ ಪಾಟೀಲ್ ಯತ್ನಾಳ ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಗುಡುಗಿದ್ದಾರೆ.
ಶಿಗ್ಗಾಂವಿಯ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಬೆಳಗ್ಗಿನಿಂದ ಸಂಜೆಯ ವರೆಗೂ ಪಂಚಮಸಾಲಿ ವೀರಶೈವ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ಕೊನೆಯಲ್ಲಿ ವಿಧಾನಸಭೆ ಅಧಿವೇಶನದಿಂದಲೇ ಸ್ಥಳಕ್ಕೆ ಆಗಮಿಸಿದ ಯತ್ನಾಳ ವೀರಾವೇಶದಿಂದ ಮಾತನಾಡಿದ್ದಾರೆ. ಯಡಿಯೂರಪ್ಪ ಹೆಸರೆತ್ತದೆ ಅಪ್ಪ ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಾಪುರದಾಗ ಕೈಯಾಡಸಾಕ ಬರ್ತಾನ್. ಕೋಟಿಗಟ್ಟಲೆ ರೊಕ್ಕ ಮಾಡ್ಯಾರು, ಲೂಟಿ ಮಾಡಿದ್ದಾರೆ. ನಿನ್ನ ಮಗನಿಗೆ ಟಿಕೆಟ್ ಸಿಗತೈತೋ ಇಲ್ಲೋ ಗೊತ್ತಿಲ್ಲ. ನಾವು ಮಾತ್ರ ಬಿಡೋದಿಲ್ಲ. ಬೊಮ್ಮಾಯಿ ಅವರದ್ದು ತಪ್ಪೇನಿಲ್ಲ. ನಿಮ್ಮ ಕುರ್ಚಿ ಅಲ್ಲಾಡಿಸುವುದಿಲ್ಲ. ಕೊನೆಯ ಬ್ರಹ್ಮಾಸ್ತ್ರ ನನ್ನ ಬಳಿ ಇದೆ, ಅದು ಬೆಂಗಳೂರು ಚಲೋ
ಲಾಸ್ಟ್ ಹೋರಾಟ ಅದು. ಸರಕಾರ ಮಣಿಯದಿದ್ದರೆ ಅದನ್ನು ಮಾಡಿಯೇ ತೀರುತ್ತೇವೆ ಎಂದು ಯತ್ನಾಳ ಹೇಳಿದರು.
ಇವತ್ತು ವಿಧಾನ ಸಭೆಯಲ್ಲಿ ಚರ್ಚೆಯಾಗಿದೆ. ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ನನಗೆ ವಿಶ್ವಾಸವಿದೆ ನವೆಂಬರ್ ಒಳಗೆ ಸರಕಾರ ಮೀಸಲಾತಿ ವಿಚಾರದಲ್ಲಿ ನಿರ್ಣಯ ಮಾಡ್ತದೆ. ಇಲ್ಲದೇ ಇದ್ದರೆ ಬೆಂಗಳೂರಿನ ಹೋರಾಟದಲ್ಲಿ ಮುಂದಿನ ನಿರ್ಣಯ ಮಾಡೋಣ. ಗುರುಗಳ ಬಗ್ಗೆ, ನಮ್ಮ ಬಗ್ಗೆ ಸಂಶಯ ಇತ್ತು ನಿಮಗೆ. ನನಗೆ ಆಸೆ ಹಚ್ವಿದ್ದಾರೆ, ನಾವು ಆಶೆಗೆ ಹೋಗುವುದಿಲ್ಲ. ನನಗೆ ಮಂತ್ರಿಯಾಗುವ ಆಸೆ ಇಲ್ಲ. ಆದರೆ ಸಮಾಜಕ್ಕೆ ದ್ರೋಹ ಮಾಡಬಾರದು ಎನ್ನುವ ಗಟ್ಟಿ ನಿರ್ಧಾರ ಮಾಡಿದ್ದೇನೆ.
ಕಳೆದ ಅಧಿವೇಶನದಲ್ಲಿ ಒಂದು ವಾರದಲ್ಲಿ ಸರ್ವಪಕ್ಷದ ಸಭೆ ಕರೆಯುವುದಾಗಿ ಬೊಮ್ಮಾಯಿ ಹೇಳಿದ್ದರು. ಕಳೆದ ರಾತ್ರಿನೂ ಸಿಎಂ ಸಭೆ ಮಾಡಿದ್ರು, ಸ್ಪೀಕರ್ ಕಚೇರಿಯಲ್ಲಿ ಕರೆದು ಸಭೆ ಮಾಡಿದ್ರು. ತಾರ್ಕಿಕ ಅಂತ್ಯ ಕೊಡ್ತೀವಿ ಅಂತ ಸಿಎಂ ಹೇಳಿದ್ದಾರೆ. ನಮ್ಮ ಸಮಾಜದ ಇಬ್ಬರು ಶಾಸಕರು ಬಿಟ್ರೆ, ಎಲ್ಲಾ ಸಮಾಜದ ಶಾಸಕರು ಇವತ್ತು ಸದನದಲ್ಲಿ ಬೆಂಬಲ ಕೊಟ್ಟಿದ್ದಾರೆ. ಮೀಸಲಾತಿ ಬಗ್ಗೆ ಚರ್ಚಿಸಲು ಅಧಿವೇಶದಲ್ಲಿ ಅವಕಾಶ ನೀಡ್ತೀವಿ ಅಂತಾ ಹೇಳಿದ್ದಾರೆ. ನಾನು ಆಶಾವಾದಿ ಇದ್ದೇನೆ, ಸರಕಾರ ಸೂಕ್ತ ನಿರ್ಣಯ ಮಾಡ್ತದೆ. ಇವತ್ತು ನಮ್ಮ ಪ್ರತಿಭಟನೆ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ ಎಂದು ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು.
Haveri Basanagouda Patil Yatnal slams Yediyurappa over The Panchamasali Lingayats demanding inclusion in the OBC category.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm