ಬ್ರೇಕಿಂಗ್ ನ್ಯೂಸ್
18-09-22 05:49 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.18 : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ 40 ಪರ್ಸೆಂಟ್ ಕಮಿಷನ್ ಆರೋಪ, ಇದೀಗ ರಾಜ್ಯದ ಗಡಿ ದಾಟಿ ತೆಲಂಗಾಣಕ್ಕೂ ಕಾಲಿಟ್ಟಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ʼವೆಲ್ಕಂ ಟು 40 ಪರ್ಸೆಂಟ್ ಸಿಎಂʼ ಎಂಬ ಫ್ಲೆಕ್ಸ್ ಅಳವಡಿಸಲಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತೀವ್ರ ಮುಜುಗರ ತಂದಿಟ್ಟಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಈ ನಡುವೆ, ಬಿಜೆಪಿಯನ್ನು ಅಣಕಿಸಲು ತೆಲಂಗಾಣದ ಆಡಳಿತಾರೂಢ ಟಿಆರ್ಎಸ್ ಪಕ್ಷದ ಕಾರ್ಯಕರ್ತರು ʼ40 ಪರ್ಸೆಂಟ್ ಸಿಎಂಗೆ ಸ್ವಾಗತʼ ಎಂದು ಫ್ಲೆಕ್ಸ್ ಅಳವಡಿಸಿ, ಹೊಸ ವಿವಾದ ಸೃಷ್ಟಿಸಿದೆ.
ಶನಿವಾರ ಹೈದರಾಬಾದ್ ವಿಮೋಚನಾ ದಿನಾಚರಣೆ ಪ್ತಯುಕ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೈದರಾಬಾದ್ ಪರೇಡ್ ಮೈದಾನದಲ್ಲಿ ಭಾಷಣ ಮಾಡಿದ್ದರು. ಅದಕ್ಕೂ ಮೊದಲೇ ಈ ಬೃಹತ್ ಫಲಕವನ್ನು ಅಲ್ಲಿ ಅಳವಡಿಸಿತ್ತು ಎನ್ನಲಾಗಿದೆ.
ಕರ್ನಾಟಕದ ಗೌರವ ಮಣ್ಣುಪಾಲು
ಹೈದರಾಬಾದ್ನಲ್ಲಿ ಅಳವಡಿಸಿರುವ ʼ40 ಪರ್ಸೆಂಟ್ ಸಿಎಂಗೆ ಸ್ವಾಗತʼ ಬೋರ್ಡ್, ಪ್ರತಿಪಕ್ಷ ಕಾಂಗ್ರೆಸ್ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೊಸ ಅಸ್ತ್ರವನ್ನು ಒದಗಿಸಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಬಿಜೆಪಿ ರಾಜ್ಯಕ್ಕಿದ್ದ ಗೌರವ ಮಣ್ಣು ಪಾಲು ಮಾಡಿದೆ. ಕರ್ನಾಟಕಕ್ಕೆ ಇದ್ದ ಪ್ರಗತಿಪರರ ನಾಡು ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ. ಮುಖ್ಯಮಂತ್ರಿ ಈ ಅವಮಾನವನ್ನು ತಡೆದುಕೊಂಡಿರುವುದು ಆಶ್ಚರ್ಯ ಎಂದು ಕೆಣಕಿದೆ.
#40PercentSarkara ದ ಕುಖ್ಯಾತಿ ದೇಶದೆಲ್ಲೆಡೆ ಪಸರಿಸಿದೆ!
— Karnataka Congress (@INCKarnataka) September 18, 2022
ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಇದ್ದ ಪ್ರಜ್ಞಾವಂತರ ನಾಡು, ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ.
ಭ್ರಷ್ಟಾಚಾರದ ಮಹಾಪೋಷಕರಾದ
ಸಿಎಂಗೆ ತೆಲಂಗಾಣದಲ್ಲಿನ ಈ ಬೋರ್ಡ್ಗಳನ್ನು ವಿರೋಧಿಸುವ ದಮ್ ಇಲ್ಲದಾಗಿದೆ. pic.twitter.com/mybrqUg4XQ
Karnataka Chief Minister Basavaraj Bommai is apparently being welcomed to the statewide celebration of Hyderabad Liberation Day with a tinge of mockery by the Telangana Rashtriya Samiti (TRS).A huge banner, which has been put up near the parade grounds in Secundarabad, carries the words, “Welcome to 40% CM”. Seen a little closer, the message reads, “Welcome to 40% ComMission”!
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 12:07 pm
HK News Desk
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm