ಬ್ರೇಕಿಂಗ್ ನ್ಯೂಸ್
18-09-22 12:10 pm HK News Desk ಕರ್ನಾಟಕ
ಮಂಡ್ಯ, ಸೆ.17 : ನವಜಾತ ಶಿಶುವೊಂದು ಪಾಳು ಬಾವಿಯಲ್ಲಿ ಪತ್ತೆಯಾಗಿದ್ದು 30 ಅಡಿ ಆಳದ ಬಾವಿಗೆ ಬಿದ್ದರೂ ಪವಾಡ ಸದೃಶ ಬದುಕುಳಿದ ಘಟನೆ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ.
ರಸ್ತೆ ಬದಿಯ ಪಾಳುಬಾವಿಯಲ್ಲಿ ಅಳುತ್ತಿದ್ದ ಮಗುವಿನ ಶಬ್ದ ಕೇಳಿ ರೈತ ಮಹಿಳೆಯರು ಬಂದು ಇಣುಕಿದಾಗ ಬಾವಿಯಲ್ಲಿ ಮಗು ಕಂಡುಬಂದಿದೆ. ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಗುವನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಸ ಕಡ್ಡಿಯೇ ತುಂಬಿದ್ದ ಪಾಳುಬಾವಿಯಲ್ಲಿ ಬಿದ್ದಿದ್ದರೂ ಪವಾಡ ಸದೃಶ ರೀತಿಯಲ್ಲಿ ಶಿಶು ಬದುಕುಳಿದಿದೆ. ಆಗ ತಾನೇ ಜನಿಸಿರುವ ಗಂಡು ಮಗು ಇದಾಗಿದ್ದು ಅದನ್ನು ಪಾಳು ಬಾವಿಗೆ ಎಸೆದವರು ಯಾರು ಎಂಬ ಬಗ್ಗೆ ತನಿಖೆ ಆರಂಭಗೊಂಡಿದೆ. ಶಿಶುವಿನ ಮುಖ ಮತ್ತು ದೇಹದ ಕೆಲವು ಭಾಗಗಳಲ್ಲಿ ಇರುವೆ ಕಚ್ಚಿರುವ ಗುರುತುಗಳಿವೆ. ಬಾವಿಯಲ್ಲಿ ಪ್ಲಾಸ್ಟಿಕ್, ಪೇಪರ್ ಇನ್ನಿತರ ಕಸಗಳನ್ನು ಎಸೆಯಲಾಗಿದ್ದು ಹೀಗಾಗಿ ಕೆಳಕ್ಕೆ ಬಿದ್ದ ಮಗುವಿಗೆ ಹೆಚ್ಚೇನು ಗಾಯಗಳಾಗದೆ ಬದುಕುಳಿದಿದೆ. ಬೆಳಗ್ಗಿನ ಹೊತ್ತಿಗೆ ಮಗುವನ್ನು ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೃತ್ಯ ಎಸಗಿದವರ ಬಗ್ಗೆ ಹುಡುಕಾಟ ನಡೆದಿದೆ.
Newborn baby thrown into 30 feet well in Mandya, luckily survives.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 12:07 pm
HK News Desk
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm