ಬ್ರೇಕಿಂಗ್ ನ್ಯೂಸ್
28-09-21 07:05 pm Source ; One India Kannada ಉದ್ಯೋಗ
ರಾಮನಗರ, ಸೆಪ್ಟೆಂಬರ್ 28: ರಾಮನಗರ ಜಿಲ್ಲೆಯಲ್ಲಿ 9 ಗೃಹರಕ್ಷಕದಳ ಘಟಕಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಒಟ್ಟು 700 ಗೃಹರಕ್ಷಕರ ಸಂಖ್ಯಾಬಲವನ್ನು ಹೊಂದಿದೆ. ಪ್ರಸ್ತುತ ವಿವಿಧ ಘಟಕದಲ್ಲಿ ಖಾಲಿ ಇರುವ 220 ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಸಾತನೂರು, ಬಿಡದಿ ಮತ್ತು ಕುದೂರು, ಕೋಡಿಹಳ್ಳಿ ಹಾಗೂ ಅಕ್ಕೂರು ಗೃಹರಕ್ಷಕದಳ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ.
ಈಗ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಸಾತನೂರು, ಬಿಡದಿ, ಕುದೂರು, ಕೋಡಿಹಳ್ಳಿ, ಅಕ್ಕೂರು ಘಟಕಗಳಲ್ಲಿ ಖಾಲಿ ಇರುವ 220 ಸ್ಥಾನಗಳನ್ನು ತುಂಬಲು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಸೆಪ್ಟಂಬರ್ 27 ರಿಂದ ಅಕ್ಟೊಬರ್ 26ರ ತನಕ ವಿತರಣೆ ಮಾಡಲಾಗುತ್ತದೆ.
ಅಭ್ಯರ್ಥಿಗಳಿಗೆ ಅರ್ಹತೆಗಳು; ಗೃಹರಕ್ಷಕದಳಕ್ಕೆ ಸೇರಲು 10ನೇ ತರಗತಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 19 ರಿಂದ 30 ವರ್ಷಗಳು. ಮಹಿಳೆಯರೂ ಸಹ ಗೃಹರಕ್ಷಕರಾಗಿ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ.
ಸ್ವಯಂ ಸೇವೆ ಮಾಡಲಿಚ್ಚಿಸುವವರು, ಯಾವುದೇ ವೃತ್ತಿಯಲ್ಲಿರುವವರು, ಸರ್ಕಾರಿ ನೌಕರರು ಅರ್ಜಿ ಸಲ್ಲಿಸಬಹುದಾಗಿದೆ. ಗೃಹರಕ್ಷರಿಗೆ ಕರ್ತವ್ಯಗಳ ಸಮಯದಲ್ಲಿ ಮತ್ತು ವಾರದ ಕವಾಯತುಗಳ ಹಾಜರಿಗೆ ಗೌರವಧನ ನೀಡಲಾಗುತ್ತದೆ. ಗೃಹರಕ್ಷಕ ಸದಸ್ಯತ್ವವನ್ನು ಬಯಸುವ ಗೃಹರಕ್ಷಕರು ಕಂಪ್ಯೂಟರ್, ವಾಹನ ಚಾಲನೆ ತಿಳಿದಿದ್ದರೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಆಯ್ಕೆಯಾದ ಗೃಹರಕ್ಷಕರಿಗೆ ಸ್ಥಳೀಯ ಮಟ್ಟದಲ್ಲಿಯೇ 10 ದಿನಗಳ ಮೂಲ ತರಬೇತಿಯನ್ನು ನೀಡಲಾಗುತ್ತದೆ. ಹೆಚ್ಚಿನ ತರಬೇತಿಗೆ ಬೆಂಗಳೂರಿನಲ್ಲಿರುವ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ನೀಡುವ ವಿಪತ್ತು ನಿರ್ವಹಣೆ, ನಿಸ್ತಂತು ಚಾಲನಾ ತರಬೇತಿ, ಲಘು ಮತ್ತು ಪ್ರವಾಹ ರಕ್ಷಣೆ, ಪ್ರಥಮ ಚಿಕಿತ್ಸೆ ಮುಂದಾಳತ್ವ ತರಬೇತಿ ಅಗ್ನಿಶಮನ ತರಬೇತಿ ವಿವಿಧ ತರಬೇತಿಗಳಿಗೆ ನಿಯೋಜಿಸಲಾಗುತ್ತದೆ.
ಈ ಸಂದರ್ಭದಲ್ಲಿ ಆಗುವ ಪ್ರಯಾಣ ವೆಚ್ಚ ಹಾಗೂ ತರಬೇತಿ ಭತ್ಯೆಗಳನ್ನು ಗೃಹರಕ್ಷಕದಳ ಸಂಸ್ಥೆಯಿಂದ ಭರಿಸಲಾಗುತ್ತದೆ. ಕರ್ತವ್ಯದ ಸಮಯದಲ್ಲಿ ವಾರದ ಕವಾಯತುಗಳ ಹಾಜರಿಗೆ ಗೌರವಧನ ನೀಡಲಾಗುತ್ತದೆ ಅದಕ್ಕಾಗಿ ಕಡ್ಡಾಯವಾಗಿ ಯಾವುದೇ ಶಾಖೆಯ ಕೆನರಾ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು.
ಆಸಕ್ತರು ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಕೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 080-27272265 ಕರೆ ಮಾಡಬಹುದಾಗಿದೆ. ಇಲ್ಲವೇ ಜಿಲ್ಲಾ ಗೃಹರಕ್ಷಕದಳ ಕಛೇರಿ, ಹನುಮಂತನಗರ, ಜಾಲಮಂಗಲ ರಸ್ತೆ, ಪಂಚಮುಖಿ ಆಂಜನೇಯ ದೇವಸ್ಥಾನದ ಪಕ್ಕ, ರಾಮನಗರ ಟೌನ್, ರಾಮನಗರ ಇಲ್ಲಿ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ.
ಅಪ್ರೆಂಟಿಸ್ ಮೇಳ; ರಾಮನಗರ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಕ್ಟೋಬರ್ 4 ರಂದು ಅಪ್ರೆಂಟಿಸ್ ಮೇಳವನ್ನು ಬೆಳಗ್ಗೆ 10 ಗಂಟೆಗೆ ಆಯೋಜನೆ ಮಾಡಿದೆ.
ರಾಮನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಪ್ರೆಂಟಿಸ್ ಮೇಲಳ ನಡೆಯಲಿದೆ. ಅಪ್ರೆಂಟಿಸ್ ಮೇಳದಲ್ಲಿ ಐಟಿಐ ತೇರ್ಗಡೆಯಾಗಿರುವ ಮತ್ತು ಎಸ್. ಎಸ್. ಎಲ್. ಸಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.
ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಬಳಿಕ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಮೇಳದಲ್ಲಿ ನೋಂದಣಿಯಾಗುವ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡುವ ಕಂಪನಿಗಳು, ಕೈಗಾರಿಕೆಗಳು ಸಹ ನೋಂದಣಿ ಮಾಡಿಕೊಳ್ಳಲು ಮನವಿ ಮಾಡಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9448277634, 9900990375, 7760444044 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ರಾಮನಗರ ಜಿಲ್ಲಾ ಕೌಶಲ್ಯ ಮಿಷನ್ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಹೇಳಿದ್ದಾರೆ.
ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ; ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಮನಗರದ ಸರ್ಕಾರಿ ಮಹಿಳಾ ಪಾಲಿಟಕ್ನಿಕ್ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಕೆಲವೇ ಸೀಟುಗಳು ಬಾಕಿ ಉಳಿದಿವೆ. ಎಸ್. ಎಸ್. ಎಲ್. ಸಿ ವಿದ್ಯಾರ್ಹತೆಯ ಮೇಲೆ ಪ್ರಥಮ ವರ್ಷದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ.
Apply for 220 Home Guard post at Ramanagara district. Candidates can apply till October 26, 2021.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm