ಬ್ರೇಕಿಂಗ್ ನ್ಯೂಸ್
27-11-24 01:14 am HK News Desk ಉದ್ಯೋಗ
ಬೆಂಗಳೂರು, ನ 26: ಕರ್ನಾಟಕದ ಐಟಿಐ ಅಭ್ಯರ್ಥಿಗಳಿಗೆ ದುಬೈನಲ್ಲಿ ಅಪ್ರೆಂಟಿಸ್ ತರಬೇತಿಯನ್ನು ನೀಡಲಾಗುತ್ತದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಈ ಕುರಿತು ಮಾಹಿತಿ ನೀಡಿದೆ. ಶಿಷ್ಯವೇತನ ಸಹಿತ ಅಪ್ರೆಂಟಿಸ್ ತರಬೇತಿ ಇದಾಗಿದ್ದು, ಅಸಕ್ತರು, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡಲು ಡಿಸೆಂಬರ್ 1, 2024 ಕೊನೆಯ ದಿನವಾಗಿದೆ.
ಡ್ರೈಡಾಕ್ಸ್ ವರ್ಲ್ಡ್, ದುಬೈನಲ್ಲಿ ಅರ್ಹ ಐಟಿಐ ಅಭ್ಯರ್ಥಿಗಳಿಗೆ ವೃತ್ತಿಪರ ತರಬೇತಿ/ ಅಪ್ರೆಂಟಿಸ್ ಅವಕಾಶವಿದೆ. ಪ್ರಾಯೋಗಿಕ ಕೌಶಲ್ಯಾಭಿವೃದ್ಧಿ ಮತ್ತು ಬಹು-ವಿಭಾಗೀಯ ಔದ್ಯೋಗಿಕ ತರಬೇತಿ ಒಳಗೊಂಡ ವೃತ್ತಿ ಜೀವನ ನಿರ್ಮಾಣದ ವಿಶಿಷ್ಟ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದೆ.
ಮುಖ್ಯ ಅರ್ಹತೆಗಳು ;
ವಿದ್ಯಾರ್ಹತೆ ಐಟಿಐ (ಫಿಟ್ಟರ್ ಮತ್ತು ವೆಲ್ಡರ್ ಮಾತ್ರ). 2020-21ರಲ್ಲಿ ಅಥವಾ ನಂತರ ಉತ್ತೀರ್ಣರಾಗಿರಬೇಕು. ತಮ್ಮ ವೃತ್ತಿ ಕಲಿಕೆಗೆ ಸಂಬಂಧಿಸಿದ ಯಾವುದಾದರೂ ತಾಂತ್ರಿಕ ಕೌಶಲ್ಯದ ಕೋರ್ಸ್‌ನಲ್ಲಿ ಪ್ರಮಾಣಪತ್ರ ಹೊಂದಿರಬೇಕು. ವಯೋಮಿತಿ 18 ರಿಂದ 23 ವರ್ಷಗಳು ಒಳಗಿರಬೇಕು. ಸರಳ ಇಂಗ್ಲೀಷ್ ಭಾಷಾ ಜ್ಞಾನ ಹೊಂದಿರಬೇಕು. 2 ವರ್ಷಗಳ ವೃತ್ತಿ ತರಬೇತಿ ಮತ್ತು 3 ವರ್ಷಗಳ ನಂತರ ವೃತ್ತಿಪರರಾಗಿ/ ತಂತ್ರಜ್ಞರಾಗಿ ಕೆಲಸ ಮಾಡುವ ಒಪ್ಪಂದ ಇರುತ್ತದೆ.
ಅಭ್ಯರ್ಥಿಗಳಿಗೆ ವೇತನ/ ಸ್ಟೈಫಂಡ್ ಮಾಸಿಕ 1200 AED (ಮೊದಲನೇ ವರ್ಷ) ನಂತರ ವಾರ್ಷಿಕವಾಗಿ ಏರಿಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ಉಚಿತ ವಿಮಾನ ಟಿಕೆಟ್, ತರಬೇತಿ ಸ್ಥಳದಲ್ಲೇ ಉಚಿತ ವಸತಿ, ಉಚಿತ ಆಹಾರ, ತರಬೇತಿ ಸ್ಥಳದೊಳಗೆ ಉಚಿತ ಪ್ರಯಾಣ, ಉಚಿತ ಆರೋಗ್ಯ ವಿಮೆ, ವಾರ್ಷಿಕ ರಜೆಗಳು, ಹಾಗೂ ಹಿಂದಿರುಗುವ ಪ್ರಯಾಣದ ವಿಮಾನ ಟಿಕೆಟ್ ಸೌಲಭ್ಯಗಳಿರುತ್ತವೆ.
ಅಗತ್ಯವಿರುವ ತಾಂತ್ರಿಕ ಸಾಮರ್ಥ್ಯ/ ಅರ್ಹತೆಗಳು;
ಬ್ಲೂ ಪ್ರಿಂಟ್, ಡ್ರಾಯಿಂಗ್‌ಗಳು, ಟೆಕ್ನಿಕಲ್ ಸ್ಪೆಸಿಫಿಕೇಷನ್‌ಗಳನ್ನು ಓದಿ ಅರ್ಥಮಾಡಿಕೊಳ್ಳುವ ಹಾಗೂ ವ್ಯಾಖ್ಯಾನಿಸುವ ಮುಖಾಂತರ ನೀಡಿರುವ ಕೆಲಸಗಳನ್ನು ಸೂಚನೆ ಹಾಗೂ ಯೋಜನೆಯಂತೆ ಪೂರ್ಣಗೊಳಿಸುವ ಸಾಮರ್ಥ್ಯವಿರಬೇಕು. ಕೆಲಸದ ಮಾಹಿತಿ ಸಲ್ಲಿಕೆ, ಉಪಕರಣಗಳ ನಿರ್ವಹಣಾ ಜ್ಞಾನ, ಸಾಮಗ್ರಿಗಳ ಕ್ರಮ ಬದ್ಧತೆ, ಸುರಕ್ಷತಾ ಪರಿಶೀಲನೆಗಳು, ಕೆಲಸದ ದಿನಚರಿ ಕುರಿತಾದ ಜ್ಞಾನವಿರಬೇಕು. ಕೆಲಸದ ವಾತಾವರಣ ಹಾಗೂ ಅವಶ್ಯಕತೆಗೆ ತಕ್ಕಂತೆ ಹೊಂದಿಕೊಳ್ಳುವಿಕೆ, ಸಮಸ್ಯೆ ಬಗೆಹರಿಸುವ ಸಾಮರ್ಥ್ಯ, ಕೆಲಸದಲ್ಲಿ ಅಗತ್ಯವಿರುವ ಎಲ್ಲಾ ನೆರವು ನೀಡುವುದು ಹಾಗೂ ಕಲಿಯುವ ಪ್ರವೃತ್ತಿ ಮತ್ತು ಕೆಲಸದಲ್ಲಿ ಬದ್ಧತೆ ಹೊಂದಿರಬೇಕು. ಕಷ್ಟಕರ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಂಡು ಕೆಲಸ ಮಾಡುವ ಸಾಮರ್ಥ್ಯ, ಉತ್ತಮ ದೈಹಿಕ ಸಾಮರ್ಥ್ಯ, ಕಣ್ಣು- ಕೈಗಳ ನಡುವೆ ಸಮನ್ವಯತೆ, ಹೊಸ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವಿರಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1 ಡಿಸೆಂಬರ್ 2024. ಆನ್‌ಲೈನ್ ಸಂದರ್ಶನದ ದಿನಾಂಕವನ್ನು ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ. ಅರ್ಜಿ ಸಲ್ಲಿಸಲು http://imck.kaushalkar.com/ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಅಂತರರಾಷ್ಟ್ರೀಯ ವಲಸೆ ಕೇಂದ್ರ - ಕರ್ನಾಟಕ (IMC-K) ಕಲ್ಯಾಣ ಸುರಕ್ಷಾ ಭವನ, 4ನೇ ಮಹಡಿ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560029 ಇಲ್ಲಿಗೆ ಸಂಪರ್ಕಿಸಬಹುದು. ಸಿವಿ ಹಾಗೂ ದಾಖಲೆಗಳನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ [email protected]
ಕರೆ ಅಥವಾ ವಾಟ್ಸಪ್ ಮಾಡಲು 9606492213/ 9606492214 ಗೆ ಕರೆ ಮಾಡಿ
ITI apprentice training in Dubai, apply now, December last date. Click the website or call the number listed
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm