ಬ್ರೇಕಿಂಗ್ ನ್ಯೂಸ್
01-04-22 08:55 pm Source: Vijayakarnataka ಡಿಜಿಟಲ್ ಟೆಕ್
ಚೀನಾದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಗೊಂಡಿದ್ದ ನೂತನ Xiaomi 12 Pro 5G ಸ್ಮಾರ್ಟ್ಫೋನನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ Xiaomi ಕಂಪೆನಿ ಇಂದು ಖಚಿತಪಡಿಸಿದೆ. ದೇಶದಲ್ಲಿ Xiaomi 12 Pro 5G ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡುವ ಬಗ್ಗೆ Xiaomi ಕಂಪೆನಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ಒದಗಿಸಿದ್ದು, ತನ್ನ ನೂತನ Xiaomi 12 Pro ಸ್ಮಾರ್ಟ್ಫೋನ್ ಅನ್ನು "ದಿ ಶೋಸ್ಟಾಪರ್" ಎಂದು ಹೇಳುವ ಮೂಲಕ ಸ್ಮಾರ್ಟ್ಫೋನ್ ಪ್ರಿಯರ ಗಮನ ಸೆಳೆದಿದೆ. Xiaomi ತನ್ನ ನೂತನ Xiaomi 12 Pro 5G ಸ್ಮಾರ್ಟ್ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡುವ ಬಗ್ಗೆ ತಿಳಿಸಿದೆಯಾದರೂ, ಈ ಫೋನ್ ಅನ್ನು ಬಿಡುಗಡೆ ಮಾಡುವ ಅಧಿಕೃತ ದಿನಾಂಕವನ್ನು ಪ್ರಕಟಿಸಿಲ್ಲ.! ಹಾಗೆಂದು, ಹೊಸ Xiaomi 12 Pro 5G ಸ್ಮಾರ್ಟ್ಫೋನ್ ಬರುವಿಕೆಗಾಗಿ ಕಾಯುತ್ತಿರುವ ಜನತೆ ಬೇಸರವಾಗಬೇಕಿಲ್ಲ. ಏಕೆಂದರೆ, Xiaomi 12 Pro ಸ್ಮಾರ್ಟ್ಫೋನ್ ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಜನಪ್ರಿಯ ಟಿಪ್ಸ್ಟಾರ್ ಇಶಾನ್ ಅಗರ್ವಾಲ್ ಅವರು ಹೇಳಿದ್ದಾರೆ.
Xiaomi ಕಂಪೆನಿಯ ಇತ್ತೀಚಿನ Xiaomi 12 ಸರಣಿಯಲ್ಲಿ Xiaomi 12 Pro 5G ಸ್ಮಾರ್ಟ್ಫೋನನ್ನು ಚೀನಾದಲ್ಲಿ ಕಳೆದ ಡಿಸೆಂಬರ್ನಲ್ಲಷ್ಟೇ ಬಿಡುಗಡೆ ಮಾಡಲಾಗಿತ್ತು. Xiaomi 12 ಮತ್ತು Xiaomi 12X ಸ್ಮಾರ್ಟ್ಫೋನ್ಗಳ ಜೊತೆಗೆ ಬಿಡುಗಡೆಯಾದ ಈ ನೂತನ Xiaomi 12 Pro 5G ಸ್ಮಾರ್ಟ್ಫೋನ್ 120Hz ಡೈನಾಮಿಕ್ ರಿಫ್ರೆಶ್-ರೇಟ್ ಡಿಸ್ಪ್ಲೇ, Qualcomm Snapdragon 8 Gen 1 SoC ನಿಂದ ಚಾಲಿತವಾದ ಪ್ರೀಮಿಯಂ ಸ್ಮಾರ್ಟ್ಫೋನ್ ಆಗಿ ಮಾರುಕಟ್ಟೆಗೆ ಎಂಟ್ರಿ ನೀಡಿತ್ತು. ಇವಿಷ್ಟೇ ಅಲ್ಲದೇ, 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX707 ಸಂವೇದಕ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್, 120W ವೇಗದ ವೈರ್ಡ್ ಚಾರ್ಜಿಂಗ್ಗೆ ಬೆಂಬಲದೊಂದಿಗೆ 4,600mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು. ಹಾಗಾದರೆ, Xiaomi ಕಂಪೆನಿಯ ಬಹುನಿರೀಕ್ಷಿತ Xiaomi 12 Pro 5G ಸ್ಮಾರ್ಟ್ಫೋನ್ ಹೇಗಿದೆ?, ಭಾರತದಲ್ಲಿ Xiaomi 12 Pro 5G ಸ್ಮಾರ್ಟ್ಫೋನಿನ ಬೆಲೆಗಳು ಎಷ್ಟಿರಬಹುದು ಮತ್ತು ವೈಶಿಷ್ಟ್ಯಗಳು ಯಾವುವು ಎಂಬೆಲ್ಲಾ ಮಾಹಿತಿಗಳನ್ನು ತಿಳಿಯೋಣ ಬನ್ನಿ.
ಭಾರತೀಯ ರೂಪಾಂತರದ Xiaomi 12 Pro 5G ಸ್ಮಾರ್ಟ್ಫೋನ್ ಚೀನಾದಲ್ಲಿ ಬಿಡುಗಡೆ ಮಾಡಲಾದ ಮಾದರಿಯಂತೆಯೇ ಅದೇ ವಿಶೇಷಣಗಳನ್ನು ಹೊಂದಿರುವ ಸಾಧ್ಯತೆಯಿದೆ. ಇದನ್ನು ನಾವು ನಂಬುವುದಾದರೆ, ನೂತನ Xiaomi 12 Pro 5G ಸ್ಮಾರ್ಟ್ಫೋನ್ MIUI 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.73-ಇಂಚಿನ WQHD+ (1,440x3,200 ಪಿಕ್ಸೆಲ್ಗಳು) E5 AMOLED ಡಿಸ್ಪ್ಲೇ ಜೊತೆಗೆ 1,500 nits ಗರಿಷ್ಠ ಹೊಳಪು, 480Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ಡೈನಾಮಿಕ್ ದರವನ್ನು ಈ ಫೋನ್ ಹೊಂದಿರಲಿದೆ. ಪ್ರದರ್ಶನವು ಕಡಿಮೆ-ತಾಪಮಾನದ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ಬ್ಯಾಕ್ಪ್ಲೇನ್ ತಂತ್ರಜ್ಞಾನವನ್ನು ಆಧರಿಸಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿರುತ್ತದೆ. ಈ ಮೊದಲೇ ತಿಳಿಸಿದಂತೆ, Xiaomi 12 Pro ಸ್ಮಾರ್ಟ್ಫೋನಿನಲ್ಲಿ ಇತ್ತೀಚಿನ ಸ್ನಾಪ್ಡ್ರಾಗನ್ 8 Gen 1 SoC ಪ್ರೊಸೆಸರ್ ಅನ್ನು ತರಲಾಗಿದ್ದು, ಇದನ್ನು 12GB ವರೆಗಿನ LPDDR5 RAM ನೊಂದಿಗೆ ಜೋಡಿಸಲಾಗಿದೆ.
ಚೀನಾ ಮಾದರಿಯ Xiaomi 12 Pro 5G ಸ್ಮಾರ್ಟ್ಫೋನಿನಲ್ಲಿ 50-ಮೆಗಾಪಿಕ್ಸೆಲ್ ಪ್ರೈಮರಿ ಸೋನಿ IMX707 ಸಂವೇದಕವನ್ನು ಅಳವಡಿಸಲಾಗಿತ್ತು. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗೆ ಬೆಂಬಲವನ್ನು ಹೊಂದಿದೆ, ಜೊತೆಗೆ 50-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಅನ್ನು ಸಹ ಹೊಂದಿದೆ. ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕವವಿದೆ. Xiaomi 12 Pro 5G ಫೋನ್ 256GB ವರೆಗೆ UFS 3.1 ಸಂಗ್ರಹಣೆಯನ್ನು ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ v5.2, GPS/ A-GPS, NFC, ಇನ್ಫ್ರಾರೆಡ್ (IR), ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹಾಗೂ ಹರ್ಮನ್ ಕಾರ್ಡನ್ ಟ್ಯೂನಿಂಗ್ ಜೊತೆಗೆ ನಾಲ್ಕು-ಯೂನಿಟ್ ಸ್ಪೀಕರ್ ಸಿಸ್ಟಮ್ ಹೊಂದಿದೆ. Xiaomi 12 Pro ಫೋನ್ 4,600mAh ಬ್ಯಾಟರಿಯನ್ನು ಹೊಂದಿದ್ದು, ಇದು 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 50W ವೈರ್ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ ಎಂಬುದನ್ನು ಗಮನಿಸಿ.
ಇಷ್ಟೆಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ Xiaomi 12 Pro ಸ್ಮಾರ್ಟ್ಫೋನನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಚೀನಾದಲ್ಲಿ 8GB + 128GB ಸ್ಟೋರೇಜ್ ರೂಪಾಂತರವನ್ನು CNY 4,699 (ಸುಮಾರು ರೂ. 55,100) ಆರಂಭಿಕ ಬೆಲೆಯೊಂದಿಗೆ ಅನಾವರಣಗೊಳಿಸಲಾಗಿದೆ. 8GB + 256GB ಸ್ಟೋರೇಜ್ ಮಾಡೆಲ್ ಅನ್ನು CNY 4,999 (ಸುಮಾರು ರೂ. 58,600) ಗಳಿಗೆ ಮತ್ತು ಟಾಪ್-ಆಫ್-ಲೈನ್ 12GB + 256GB ಸ್ಟೋರೇಜ್ ಆಯ್ಕೆಯ ಫೋನನ್ನು CNY 5,399 (ಸುಮಾರು ರೂ. 63,300) ಗಳಿಗೆ ಮಾರಾಟಕ್ಕೆ ಇಡಲಾಗಿತ್ತು. ಇದಾದ ನಂತರ Xiaomi 12 Pro ನ ಜಾಗತಿಕ ರೂಪಾಂತರವನ್ನು 8GB + 256GB ಸ್ಟೋರೇಜ್ ರೂಪಾಂತರಕ್ಕಾಗಿ $999 (ಸುಮಾರು ರೂ.76,300) ಆರಂಭಿಕ ಬೆಲೆಯೊಂದಿಗೆ ಇತ್ತೀಚೆಗೆ ಘೋಷಿಸಲಾಗಿತ್ತು. ಆದರೆ, ಚೀನಾ ಮತ್ತು ಜಾಗತಿಕ ರೂಪಾಂತರಗಳ Xiaomi 12 Pro 5G ಸ್ಮಾರ್ಟ್ಫೋನ್ ಬೆಲೆಗಳಿಗೆ ಹೋಲಿಸಿದರೆ ದೇಶದಲ್ಲಿ ಈ ಸ್ಮಾರ್ಟ್ಫೋನ್ ಕಡಿಮೆ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ. ಭಾರತದಲ್ಲಿನ Xiaomi 12 Pro ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳಲ್ಲಿ ಏನಾದರೂ ಬದಲಾವಣೆ ಕಂಡುವಂದರೆ ಈ ಸ್ಮಾರ್ಟ್ಫೋನ್ 50 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ನಮ್ಮ ಮೊಬೈಲ್ ಮಾರುಕಟ್ಟೆಯನ್ನು ತಲುಪುವ ವಿಶ್ವಾಸವನ್ನು ಇಡಬಹುದು.
Xiaomi 12 Pro India Launch Confirmed, Debut In April.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm