ಬ್ರೇಕಿಂಗ್ ನ್ಯೂಸ್
13-03-26 12:09 pm HK News Staffer ಕರ್ನಾಟಕ
ಶಿವಮೊಗ್ಗ, ಮಾರ್ಚ್ 13: ಶಿವಮೊಗ್ಗದಿಂದ ಬೆಂಗಳೂರು, ಹುಬ್ಬಳ್ಳಿ ಅಲ್ಲದೇ ದೇಶಾದ್ಯಂತ 131 ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಇಂಡಿಗೋ ವಿಮಾನ ಸೇವೆಯು ಏಪ್ರಿಲ್ ಅಂತ್ಯಕ್ಕೆ ಕೊನೆಯಾಗುತ್ತಿದೆ. ಇಂಡಿಗೊ ವಿಮಾನ ಸೇವೆಯು ಮೇ 1ರಿಂದ ಶಿವಮೊಗ್ಗದಿಂದ ಇರುವುದಿಲ್ಲ ಎನ್ನುವ ಸೂಚನೆ ಲಭಿಸಿದೆ.
ಪ್ರಸ್ತುತ ಏಪ್ರಿಲ್ 30ರ ವರೆಗಷ್ಟೇ ಇಂಡಿಗೋ ದೇಶೀಯ ವಿಮಾನಗಳಲ್ಲಿ ಆಸನಗಳನ್ನು ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಮೇ 1ರಿಂದ ವಿಮಾನದ ಬುಕಿಂಗ್ ಲಭ್ಯವಿಲ್ಲದಿರುವುದು ಜನರನ್ನು ಗೊಂದಲಕ್ಕೀಡು ಮಾಡಿದೆ. ಪ್ರಯಾಣಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಇದ್ದರೂ ತಾಂತ್ರಿಕ ಕಾರಣಗಳಿಂದಾಗಿ ಈ ಮಾರ್ಗದ ಸೇವೆಯನ್ನು ಸಂಸ್ಥೆ ಸ್ಥಗಿತಗೊಳಿಸುತ್ತಿದೆ. ಇಂಡಿಗೊ ಸಂಸ್ಥೆಯು ಮುಂಬಯಿ, ಚೆನ್ನೈ, ಹೊಸದಿಲ್ಲಿ, ಅಹಮದಾಬಾದ್, ಹೈದರಾಬಾದ್, ಪಂಜಾಬ್, ಗೋವಾ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ದೇಶದ 131 ಮಾರ್ಗಗಳಲ್ಲಿ ಸಂಪರ್ಕ ವಿಮಾನ ಸೇವೆಯನ್ನು ಹೊಂದಿದೆ. ಇದು ಬೇರೆ ಸಂಸ್ಥೆಗಳಲ್ಲಿ ಲಭ್ಯವಿಲ್ಲ.
ಹೀಗಾಗಿ, ಜನರ ಬೇಸಿಗೆ ಪ್ರಯಾಣದ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಲಭ್ಯ ಮಾಹಿತಿ ಪ್ರಕಾರ, ಇತ್ತೀಚೆಗೆ ಅಹಮದಾಬಾದ್ ವಿಮಾನ ದುರಂತದ ಬಳಿಕ ಸೇವೆಯನ್ನು ದೇಶದಲ್ಲಿ ಡಿಜಿಸಿಎ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದಕ್ಕೆ ಪೂರಕವಾಗಿ ವಿಮಾನಯಾನ ಸಂಸ್ಥೆಗಳಿಗೆ ಈಗ ಇರುವ ಮಾರ್ಗಗಳಿಗೆ ಮತ್ತಷ್ಟು ವಿಮಾನಗಳು ಮತ್ತು ಪೈಲಟ್‌ಗಳ ಅಗತ್ಯವಿದೆ. ಕೆಲವು ವಿಮಾನ ಸಂಸ್ಥೆಗಳು ಕಡಿಮೆ ವಿಮಾನಗಳು ಮತ್ತು ಫೈಲಟ್ಗಳನ್ನು ಬಳಸಿಕೊಂಡು ಹೆಚ್ಚಿನ ಅವಧಿಗೆ ನಿರ್ವಹಣೆ ಮಾಡಿಸಿಕೊಳ್ಳುತ್ತಿವೆ. ವಿಮಾನ ದುರಂತ ಹಿನ್ನೆಲೆಯಲ್ಲಿ ಡಿಜಿಸಿಎ ಇದಕ್ಕೆ ಕಡಿವಾಣ ಹಾಕಲು ನಿಯಮಗಳನ್ನು ಕಠಿಣಗೊಳಿಸಿದೆ. ಇದರಿಂದಾಗಿ ಇಂಡಿಗೋ ಸಂಸ್ಥೆಯು ಸಂಚಾರ ಸೇವೆಗಳನ್ನು ಕಡಿತಗೊಳಿಸುತ್ತಿದೆ.
ಡಿಜಿಸಿಎ ವಿಮಾನಯಾನ ಸೇವಾ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅದರಿಂದಾಗಿ ಇಂಡಿಗೊ ಸಂಸ್ಥೆಗೆ ವಿಮಾನಗಳು ಮತ್ತು ಪೈಲಟ್ ಗಳ ಕೊರತೆ ಎದುರಾಗಿದೆ. ಹೀಗಾಗಿ, ಸಣ್ಣ ಪುಟ್ಟ ಎಟಿಆರ್ ಗಳಲ್ಲಿ ನೀಡುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಅದರ ಬಗ್ಗೆ ದಿಲ್ಲಿಯಲ್ಲಿರುವ ಇಂಡಿಗೊ ಸಂಸ್ಥೆಯ ವ್ಯವಸ್ಥಾಪಕರ ಜತೆ ಈಗಾಗಲೇ ಒಂದು ಹಂತದ ಮಾತುಕತೆ ನಡೆಸಿದ್ದೇನೆ. ಯಾವುದೇ ಕಾರಣಕ್ಕೂ ಶಿವಮೊಗ್ಗ- ಬೆಂಗಳೂರು ನಡುವಿನ ಇಂಡಿಗೊ ಸೇವೆ ಸ್ಥಗಿತಗೊಳಿಸದಂತೆ ಕ್ರಮ ವಹಿಸಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm