ಬ್ರೇಕಿಂಗ್ ನ್ಯೂಸ್
30-03-22 07:41 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ನೂತನ Oppo F21 Pro ಸರಣಿ ಸ್ಮಾರ್ಟ್ಫೋನ್ಗಳನ್ನು ಇದೇ ಏಪ್ರಿಲ್ 12 ರಂದು ಬಿಡುಗಡೆ ಮಾಡುವ ಬಗ್ಗೆ Oppo ಕಂಪೆನಿ ಬುಧವಾರ ಟ್ವೀಟ್ ಮೂಲಕ ಬಹಿರಂಗಪಡಿಸಿದೆ. Oppo F21 Pro ಸರಣಿಯಲ್ಲಿ Oppo F21 Pro ಮತ್ತು F21 Pro 5G ಎರಡು ಸ್ಮಾರ್ಟ್ಫೋನ್ಗಳು ದೇಶದಲ್ಲಿ ಬಿಡುಗಡೆಯಾಗುವುದನ್ನು ಕಂಪೆನಿ ಖಚಿತಪಡಿಸಿದ್ದು, ಕಂಪನಿಯ ಟ್ವೀಟ್ ಪ್ರಕಾರ ಇದೇ ಏಪ್ರಿಲ್ 12 ರಂದು ಸಂಜೆ 5 ಗಂಟೆಗೆ ಈ ಎರಡೂ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿವೆ. ಫೈಬರ್ಗ್ಲಾಸ್-ಲೆದರ್ ಬ್ಯಾಕ್ ಮತ್ತು 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ನೊಂದಿಗೆ Oppo F21 Pro ಸರಣಿ ಸ್ಮಾರ್ಟ್ಫೋನ್ಗಳಲ್ಲಿ ಒಂದು ಸ್ಮಾರ್ಟ್ಫೋನನ್ನು ಪಟ್ಟಿ ಮಾಡಲಾಗಿದೆ.
ಪ್ರಸ್ತಾಪಿಸಲಾದ ಕ್ಯಾಮೆರಾ ಸೆಟಪ್ Oppo F21 Pro ಸರಣಿಯಾದ್ಯಂತ ಲಭ್ಯವಿರುತ್ತದೆಯೇ ಅಥವಾ ನಿರ್ದಿಷ್ಟ ಮಾದರಿಗೆ ಸೀಮಿತವಾಗಿದೆಯೇ ಎಂಬುದನ್ನು ಕಂಪೆನಿಯು ಸ್ಪಷ್ಟಪಡಿಸಿಲ್ಲ. ಆದರೆ, ಪ್ರತ್ಯೇಕವಾಗಿ, Oppo F21 Pro ಸರಣಿಯ ವಿನ್ಯಾಸದ ಕುರಿತು ಪತ್ರಿಕಾ ಟಿಪ್ಪಣಿಯ ಮೂಲಕ ಕೆಲವು ವಿವರಗಳನ್ನು ಬಹಿರಂಗಪಡಿಸಿದೆ, Oppo F21 Pro ಕಾಸ್ಮಿಕ್ ಕಪ್ಪು ಮತ್ತು ಸನ್ಸೆಟ್ ಆರೆಂಜ್ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿರಲಿದ್ದರೆ, Oppo F21 Pro 5G ಕಾಸ್ಮಿಕ್ ಮತ್ತು ರೈನ್ಬೋ ಸ್ಪೆಕ್ಟ್ರಮ್ ಬಣ್ಣಗಳಲ್ಲಿ ತಿಳಿಸಲಾಗಿದೆ. ಕಪ್ಪು ಮತ್ತು ಸನ್ಸೆಟ್ ಆರೆಂಜ್ ಫೈಬರ್ಗ್ಲಾಸ್-ಲೆದರ್ ವಿನ್ಯಾಸವು 'ಫ್ರೇಮ್ಲೆಸ್' ಬ್ಯಾಟರಿ ಕವರ್ನಂತೆ ಇರಲಿದೆ. ಈ ಹಿಂಭಾಗದ ವಿನ್ಯಾಸವನ್ನು ವಿನ್ಯಾಸಗೊಳಿಸಲು ಎರಡು ವರ್ಷಗಳ ಸಂಶೋಧನೆಯನ್ನು ತೆಗೆದುಕೊಂಡಿರುವುದಾಗಿ ಎಂದು Oppo ಹೇಳಿಕೊಂಡಿದೆ.
Oppo F21 Pro ಸರಣಿ ಸ್ಮಾರ್ಟ್ಫೋನ್ಗಳು ಹೊಂದಿರುವ ವೈಶಿಷ್ಟ್ಯಗಳು ಯಾವುವು ಎಂಬ ಬಗ್ಗೆ ಕಂಪನಿಯು ಇನ್ನೂ ಹೆಚ್ಚಿನ ವಿವರಗಳನ್ನು ಒದಗಿಸಿಲ್ಲ. ಆದರೆ, Oppo F21 Pro 4G ರೂಪಾಂತರವು ಈ ವಾರದ ಆರಂಭದಲ್ಲಿ ಇಂಡೋನೇಷ್ಯಾದಲ್ಲಿ ಬಿಡುಗಡೆಯಾದ Oppo Reno 7 4G ಸ್ಮಾರ್ಟ್ನ್ನು ಹೋಲುತ್ತದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳ ಈ ಊಹಾಪೋಹಗಳು ನಿಖರವಾಗಿದ್ದರೆ, Oppo F21 Pro ಸರಣಿ ಸ್ಮಾರ್ಟ್ಫೋನ್ಗಳು 90Hz ರಿಫ್ರೆಶ್ ದರದೊಂದಿಗೆ 6.43-ಇಂಚಿನ ಪೂರ್ಣ-HD+ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸಬಹುದು ಹಾಗೂ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಎರಡು 2-ಮೆಗಾಪಿಕ್ಸೆಲ್ ಸಂವೇದಕಗಳನ್ನು ಒಳಗೊಂಡಿರಬಹುದು.
ಇಂಡೋನೇಷ್ಯಾದಲ್ಲಿ ಬಿಡುಗಡೆಯಾದ Oppo Reno 7 4G ಸ್ಮಾರ್ಟ್ಫೋನ್ 32-ಮೆಗಾಪಿಕ್ಸೆಲ್ ಸೆಲ್ಫಿ ಸಂವೇದಕವನ್ನು ಹೊತ್ತು ಬಿಡುಗಡೆಯಾಗಿತ್ತು. ಅದರಂತೆ, Oppo F21 Pro ಸರಣಿ ಸ್ಮಾರ್ಟ್ಫೋನ್ ಕೂಡ 32-ಮೆಗಾಪಿಕ್ಸೆಲ್ ಸೆಲ್ಫಿ ಸಂವೇದಕವನ್ನು ಹೊಂದಿರಬಹುದು ಹಾಗೂ ಸಂಪರ್ಕ ಆಯ್ಕೆಗಳಲ್ಲಿ 4G LTE, Wi-Fi 5, ಬ್ಲೂಟೂತ್ v5.1, NFC, USB ಟೈಪ್-C, ಮತ್ತು 3.5mm ಹೆಡ್ಫೋನ್ ಜ್ಯಾಕ್ಗಳು ಒಳಗೊಂಡಿರಬಹುದು ಎಂದು ನಾವು ಊಹಿಸಬಹುದು. Oppo Reno 7 4G ಸ್ಮಾರ್ಟ್ಫೋನಿನಲ್ಲಿ ಸ್ನಾಪ್ಡ್ರಾಗನ್ 680 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿರುವುದರಿಂದ ಭಾರತದಲ್ಲಿ ನೂತನ Oppo F21 Pro ಸರಣಿ ಸ್ಮಾರ್ಟ್ಫೋನ್ಗಳು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಬಹುದಾದ ಪ್ರೀಮಿಯಂ ಸ್ಮಾರ್ಟ್ಫೋನ್ಗಳಾಗಿರಬಹುದು ಎಂದು ದೇಶದ ಮೊಬೈಲ್ ಮಾರುಕಟ್ಟೆ ಊಹಿಸಿದೆ.
Oppo F21 Pro Series To Launch In India On April 12
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am