ಬ್ರೇಕಿಂಗ್ ನ್ಯೂಸ್
26-03-22 11:12 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯರ ಕ್ರಿಕೆಟ್ ಹಬ್ಬ ಐಪಿಎಲ್ ಕೆಲವೇ ಗಂಟೆಗಳು ಭಾಕಿ ಇರುವಾಗ ಭರ್ಜರಿ ಸಿಹಿಸುದ್ದಿಯೊಂದನ್ನು ರಿಲಯನ್ಸ್ ಜಿಯೋ ಪ್ರಕಟಿಸಿದ್ದು, ಐಪಿಎಲ್ ವೀಕ್ಷಣೆಗಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಹೊಂದಿರುವ 555 ರೂಪಾಯಿಗಳ ಡೇಟಾ ಆಡ್ ಆನ್ ಆಫರ್ ಅನ್ನು ಘೋಷಿಸಿದೆ. ಈಗಾಗಲೇ ಜಿಯೋವಿನ ರೀಚಾರ್ಜ್ ಪ್ಲ್ಯಾನ್ ಹೊಂದಿದ್ದು, ಐಪಿಎಲ್ ವೀಕ್ಷಣೆಗಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಮಾತ್ರ ಎದುರುನೋಡುತ್ತಿರುವ ಗ್ರಾಹಕರಿಗೆ ಇದು ಭರ್ಜರಿ ಕೊಡುಗೆಯಾಗಿದ್ದು, ಭಾರೀ ಡೇಟಾ ಜೊತೆಗೆ ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ ಎಂದು ರಿಲಯನ್ಸ್ ಜಿಯೋ ತಿಳಿಸಿದೆ. ಹಾಗಾದರೆ, ರಿಲಯನ್ಸ್ ಜಿಯೋದಿಂದ ಹೊಸದಾಗಿ ಲಾಂಚ್ ಆಗಿರುವ 555 ರೂ.ಗಳ ಪ್ರಿಪೇಯ್ಡ್ ಯೋಜನೆಯ ಸಂಪೂರ್ಣ ಪ್ರಯೋಜನಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ರಿಲಯನ್ಸ್ ಜಿಯೋ ಪ್ರಕಟಿಸಿರುವ ಹೊಸ 555 ರೂ.ಗಳ ಪ್ರಿಪೇಯ್ಡ್ ಯೋಜನೆಯು ಉಚಿತ ಡಿಸ್ನಿ + ಹಾಟ್‌ಸ್ಟಾರ್ ಉಚಿತ ಪ್ರಯೋಜನದ ಜೊತೆಗೆ ಒಟ್ಟು 55GB ಡೇಟಾದೊಂದಿಗೆ ಬರುತ್ತದೆ. ಜಿಯೋ ಗ್ರಾಹಕರು ತಮ್ಮ ಪ್ರಸ್ತುತ ರೀಚಾರ್ಜ್ ಯೋಜನೆಯ ಜೊತೆಗೆ ಈ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದ್ದು, ಐಪಿಎಲ್ ವೀಕ್ಷಣೆಗಾಗಿಯೇ ಪ್ರಕಟಿಸಿರುವ ಪ್ರೀಪೇಡ್ ಯೋಜನೆ ಇದಾಗಿದೆ. ಒಟ್ಟು 55 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಯೋಜನೆಯು ಅನಿಯಮಿತ ಪ್ರಯೋಜನಗಳ ಪ್ರಿಪೇಯ್ಡ್ ಯೋಜನೆಯನ್ನು ಬಯಸುವ ಬಳಕೆದಾರರಿಗಾಗಿ ಅಲ್ಲ ಎಂಬುದನ್ನು ಗಮನಿಸಿ, ಏಕೆಂದರೆ, ಈ ಯೋಜನೆಯು ಧ್ವನಿ ಕರೆ ಅಥವಾ SMS ಪ್ರಯೋಜನಗಳೊಂದಿಗೆ ಬರುವುದಿಲ್ಲ ಎಂದು ಜಿಯೋ ಮಾಹಿತಿ ನೀಡಿದೆ. ಆದರೆ, ಜಿಯೋವಿನ ಎಲ್ಲಾ ಅಪ್ಲಿಕೇನ್‌ಗಳಿಗೆ ಮಾತ್ರ ಪ್ರವೇಶವನ್ನು ಒದಗಿಸುತ್ತದೆ.
ಜಿಯೋವಿನ ಈ ಯೋಜನೆಯು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ಒದಗಿಸುತ್ತದೆ. ಜಿಯೋವಿನ ಗ್ರಾಹಕರು 499 ರೂ. ಬೆಲೆಯ ವಾರ್ಷಿಕ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಮತ್ತು 55 ದಿನಗಳ ವ್ಯಾಲಿಡಿಟಿಯಲ್ಲಿ 55GB ಡೇಟಾವನ್ನು ಈ ಯೋಜನೆಯಲ್ಲಿ ಪಡೆಯಲಿದ್ದಾರೆ. ಈ ಯೋಜನೆಯನ್ನು ಖರೀದಿಸಲು 200 ರೂ.ಗಳಿಗಿಂತ ಹೆಚ್ಚು ವೆಚ್ಚವಾಗುವುದರಿಂದ, ಜಿಯೋ ಗ್ರಾಹಕರು 20% ರಷ್ಟು JioMart ಮಹಾ ಕ್ಯಾಶ್‌ಬ್ಯಾಕ್‌ಗೆ ಅರ್ಹರಾಗುತ್ತಾರೆ. ಈ ಆಡ್ ಆನ್ ಯೋಜನೆಯನ್ನು ಐಪಿಎಲ್ ಪ್ರಿಯರಿಗಾಗಿಯೇ ಪ್ರಕಟಿಸಿದ್ದರೂ ಸಹ, ಈಗಾಗಲೇ ಹೆಚ್ಚು ಟಾಕ್ಟೈಮ್ ಯೋಜನೆಯನ್ನು ಹೊಂದಿರುವ ಮತ್ತು ಮನೆಯಿಂದಲೇ ಕೆಲಸ ಮಾಡುತ್ತಿರುವ ಜನರಿಗೆ ಹೆಚ್ಚು ಡೇಟಾವನ್ನು ನೀಡುವ ಆಡ್-ಆನ್ ಯೋಜನೆಯಾಗಿಯೂ ಲಾಭವಾಗಲಿದೆ.
ಇನ್ನು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆ ಜೊತೆಗೆ ಧ್ವನಿ ಕರೆ ಅಥವಾ SMS ಪ್ರಯೋಜನಗಳನ್ನು ಹೊಂದಿರುವ ಯೋಜನೆಗಳನ್ನು ಸಹ ಜಿಯೋ ಹೊಂದಿದೆ. ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆ ಜೊತೆಗೆ ಧ್ವನಿ ಕರೆ ಅಥವಾ SMS ಪ್ರಯೋಜನಗಳನ್ನು ಹೊಂದಿರುವ ರಿಲಯನ್ಸ್ ಜಿಯೋವಿನ ಮೊದಲ ಪ್ರಿಪೇಯ್ಡ್ ಯೋಜನೆಯು ಕೇವಲ 499 ರೂ.ಗಳಿಗೆ ಲಭ್ಯವಿದೆ. ಆದರೆ, ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100SMS ಗಳೊಂದಿಗೆ 28 ದಿನಗಳ ಅವಧಿಗೆ ದಿನಕ್ಕೆ 2GB ಡೇಟಾವನ್ನು ಒದಗಿಸುತ್ತದೆ. ಆದರೆ, ಹೊಸ 555 ರೂ.ಗಳ ಪ್ರಿಪೇಯ್ಡ್ ಆಡ್ ಆನ್ ಯೋಜನೆಯು ಉಚಿತ ಡಿಸ್ನಿ + ಹಾಟ್‌ಸ್ಟಾರ್ ಉಚಿತ ಪ್ರಯೋಜನದ ಜೊತೆಗೆ ಒಟ್ಟು 55GB ಡೇಟಾದೊಂದಿಗೆ 55 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವುದನ್ನು ನಾವು ಹೋಲಿಸಬಹುದು.
ಇದೇ ರೀತಿಯಲ್ಲಿ ಜಿಯೋವಿನ 601 ರೂ.ಗಳ ಮತ್ತೊಂದು ಯೋಜನೆಯಲ್ಲೂ ಸಹ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆ ನೀಡಲಾಗಿದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ ಪ್ರತಿ ದಿನ 3GB ಡೇಟಾವನ್ನು ನೀಡುತ್ತದೆ. ದೈನಂದಿನ 3GB ಡೇಟಾ ಜೊತೆಗೆ ಯೋಜನೆಯು ಹೆಚ್ಚುವರಿ 6GB ಡೇಟಾವನ್ನು ಸಹ ನೀಡುತ್ತದೆ. ಈ ಮೇಲಿನ ಎರಡೂ ಅನ್‌ಲಿಮಿಟೆಡ್ ಪ್ಪ್ರೀಪೇಡ್ ಯೋಜನೆಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ರೂ 499 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ಗೆ ಚಂದಾದಾರಿಕೆಯನ್ನು ನೀಡುತ್ತವೆ. ಈ ಎರಡೂ ಯೋಜನೆಗಳಲ್ಲಿಯೂ ಜಸಹ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಹೆಚ್ಚಿನವುಗಳಂತಹ ವಿವಿಧ ಜಿಯೋ ಅಪ್ಲಿಕೇಶನ್‌ಗಳನ್ನು ಜಿಯೋ ಬಳಕೆದಾರರು ಆನಂದಿಸಬಹುದು.
Jio Launches New Rs 555 Prepaid Plan With Disney+ Hotstar.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm