ಬ್ರೇಕಿಂಗ್ ನ್ಯೂಸ್
30-12-20 05:46 pm Source: GIZBOT Mutthuraju H M ಡಿಜಿಟಲ್ ಟೆಕ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ಈಗಾಗಲೇ ಬಳಕೆದಾರರಿಗೆ ಹಲವು ಸೇವೆಗಳನ್ನ ಪರಿಚಯಿಸಿದೆ. ಇನ್ನು ಗೂಗಲ್ ಸೇವೆಗಳಾದ ಜಿಮೇಲ್, ಯೂಟ್ಯೂಬ್, ಡಾಕ್ಸ್, ಶೀಟ್ಸ್ ಜನರ ಅವಶ್ಯಕ ಸೇವೆಗಳಲ್ಲಿ ಒಂದಾಗಿ ರೂಪುಗೊಂಡಿವೆ. ಇನ್ನು ಗೂಗಲ್ನ ಜಿ-ಮೇಲ್ ಬಳಸುವವರು ಪ್ರತಿನಿತ್ಯ ಕೆಲಸದ ವಿಚಾರವಾಗಿ ಇಮೇಲ್ಗಳನ್ನು ಸ್ವೀಕರಿಸುವುದು ಕೂಡ ಸಾಮಾನ್ಯವಾಗಿದೆ. ಹೀಗೆ ಹಲವಾರು ಇಮೇಲ್ಗಳಿಂದ ನಿಮ್ಮ Google ಖಾತೆಯ ಫ್ರೀ ಸ್ಟೋರೇಜ್ ಸ್ಪೇಸ್ ಫುಲ್ ಆಗಿದ್ದರೆ, ಕೆಲವು ಇಮೇಲ್ಗಳನ್ನು ತೆರವುಗೊಳಿಸಬೇಕಾಗುತ್ತದೆ.
ಹೌದು, ಜಿ-ಮೇಲ್ನಲ್ಲಿ ಹಲವು ಇಮೇಲ್ಗಳು ತುಂಬಿಕೊಂಡಾಗ ಸ್ಟೋರೇಜ್ ಸ್ಪೇಸ್ ಸಮಸ್ಯೆ ಉಂಟಾಗುತ್ತದೆ. ಇಂತಹ ಸಂಧರ್ಭದಲ್ಲಿ ಅನಗತ್ಯ ಎನಿಸುವ ಇಮೇಲ್ಗಳನ್ನು ಡಿಲೀಟ್ ಮಾಡುಲೇಬೇಕಾಗುತ್ತದೆ. ಆದ್ದರಿಂದ ನಿಮ್ಮಜಿ- ಮೇಲ್ನಲ್ಲಿ ಅನಗತ್ಯ ಇಮೇಲ್ಗಳನ್ನು ಆಯ್ಕೆ ಮಾಡಲು ಮತ್ತು ಅಳಿಸಲು ಹೆಚ್ಚಿನ ಸಮಯವಿಲ್ಲದೆ ಹೋದರೆ ಬೇಗ ಡಿಲೀಟ್ ಮಾಡಬೇಕಾದರೆ, ಒಂದು ಟ್ರಿಕ್ ಇದೆ. ಈ ಟ್ರಿಕ್ ಮೂಲಕ ದೊಡ್ಡ ಫೈಲ್ಗಳನ್ನು ಆಯ್ಕೆ ಮಾಡಲು ಮತ್ತು ಡಿಲೀಟ್ ಮಾಡಲು ಮತ್ತು ಹೊಸ ಇಮೇಲ್ಗಳಿಗಾಗಿ ಸ್ವಲ್ಪ ಸ್ಪೇಸ್ ಅನ್ನು ಮಾಡಲು ನಿಮಗೆ ಅನುಮತಿಸುತ್ತದೆ.
ದೊಡ್ಡ ಗಾತ್ರದ ಫೈಲ್ಗಳೊಂದಿಗೆ ಇರುವ ಇಮೇಲ್ಗಳನ್ನು ತ್ವರಿತವಾಗಿ ಆಯ್ಕೆ ಮಾಡುವುದು ಮತ್ತು ಡಿಲೀಟ್ ಮಾಡುವುದು ನಿಮಗೆ ಸುಲಭವಾಗಲಿದೆ. ಇದಕ್ಕಾಗಿ ಇಮೇಲ್ ಸರ್ಚ್ ಬಾರ್ನಲ್ಲಿ "larger: 20m" ಎಂದು ಟೈಪ್ ಮಾಡಿದರೆ, 20MB ಗಿಂತ ದೊಡ್ಡದಾದ ಎಲ್ಲಾ ಇಮೇಲ್ಗಳನ್ನು Gmail ಪ್ರದರ್ಶಿಸುತ್ತದೆ. ನೀವು ಈ ಎಲ್ಲಾ ಇಮೇಲ್ಗಳನ್ನು ಆಯ್ಕೆ ಮಾಡಬಹುದು ಅಥವಾ ಮೇಲ್ಗಳನ್ನು ಒಂದೊಂದಾಗಿ ಅಳಿಸಬಹುದು ಮತ್ತು ಹೊಸ ಇಮೇಲ್ಗಳಿಗೆ ಸ್ಥಳಾವಕಾಶ ಮಾಡಿಕೊಡಲಿದೆ.
ಇನ್ನು ನೀವು ಡಿಲೀಟ್ ಮಾಡಲು ಬಯಸುವ ಇಮೇಲ್ಗಳಿಗಾಗಿ 5MB, 1MB, 10MB, ಅಥವಾ ಇತರವುಗಳನ್ನು ನೀವು ಬಯಸಬಹುದು. ಈ ಪ್ರಕ್ರಿಯೆಯು ದೊಡ್ಡ ಗಾತ್ರದ ಇಮೇಲ್ಗಳನ್ನು ತ್ವರಿತವಾಗಿ ಹುಡುಕಲು ಮತ್ತು ಅವುಗಳನ್ನು ಡಿಲೀಟ್ ಮಾಡಲು ಮತ್ತು ಸ್ವಲ್ಪ ಜಾಗವನ್ನು ಮುಕ್ತಗೊಳಿಸಲು ನಿಮಗೆ ಸುಲಭವಾಗಿಸುತ್ತದೆ. Gmail ನಲ್ಲಿ ಜಾಗವನ್ನು ಮುಕ್ತಗೊಳಿಸಲು ಇದು ಒಂದು ಮಾರ್ಗವಾಗಿದೆ. Gmail ಪೂರ್ಣ ಸಮಸ್ಯೆಯನ್ನು ಪರಿಹರಿಸಲು ನಿಮಗೆ ಅನುಮತಿಸುವ ಇನ್ನೂ ಕೆಲವು ಮಾರ್ಗಗಳನ್ನು ಕೆಳಗಿನ ಹಂತಗಳಲ್ಲಿ ಅನುಸರಿಸಿ.
Google ಫೋಟೋಗಳಿಂದ ಅನಗತ್ಯ ಫೈಲ್ಗಳನ್ನು ಡಿಲೀಟ್ ಮಾಡಿ
Google ಡ್ರೈವ್ ಮತ್ತು Google ಫೋಟೋಗಳಿಂದ ಅನಗತ್ಯ ಫೈಲ್ಗಳನ್ನು ಡಿಲೀಟ್ ಮಾಡುವ ಮೂಲಕ ನೀವು Gmail ನ ಪೂರ್ಣ ಸಮಸ್ಯೆಯನ್ನು ಪರಿಹರಿಸಬಹುದು. ಪೂರ್ವನಿಯೋಜಿತವಾಗಿ ಗೂಗಲ್ ಎಲ್ಲಾ ಬಳಕೆದಾರರಿಗೆ 15GB ಉಚಿತ ಸಂಗ್ರಹಣೆಯನ್ನು ನೀಡುತ್ತದೆ. ಡ್ರೈವ್, ಫೋಟೋಗಳು ಸೇರಿದಂತೆ ವಿವಿಧ ಗೂಗಲ್ ಪ್ಲಾಟ್ಫಾರ್ಮ್ಗಳಲ್ಲಿ ಸಂಗ್ರಹಣೆಯನ್ನು ಹಂಚಿಕೊಳ್ಳಲಾಗಿದೆ. ಇತರ Google ಸೇವೆಗಳಿಂದ ಡೇಟಾವನ್ನು ತೆರವುಗೊಳಿಸುವುದು Gmail ಪೂರ್ಣ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.
This News Article is a Copy of GIZBOT
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm