ಬ್ರೇಕಿಂಗ್ ನ್ಯೂಸ್
24-12-20 02:42 pm Source: GIZBOT Mutthuraju H M ಡಿಜಿಟಲ್ ಟೆಕ್
ಪ್ರಸ್ತುತ ಜನಪ್ರಿಯ ವಿಡಿಯೋ ಕಾಲಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ಜೂಮ್ ಅಪ್ಲಿಕೇಶನ್ ಕೂಡ ಒಂದಾಗಿದೆ. ಕೋವಿಡ್ -19 ಸಂದರ್ಭದಲ್ಲಿ ಬಳಕೆದಾರರು ಸಂವಹನ ಮತ್ತು ಸಹಯೋಗಕ್ಕಾಗಿ ಇದರ ಬಳಕೆ ಸಾಕಷ್ಟು ಹೆಚ್ಚಾಗಿತ್ತು. ಸದ್ಯ ಇದೀಗ ವಿಡಿಯೋ ಪ್ಲಾಟ್ಫಾರ್ಮ್ ಆಗಿರುವ ಜೂಮ್ ತನ್ನದೇ ಆದ ಕಾರ್ಪೊರೇಟ್ ಇಮೇಲ್ ಮತ್ತು ಕ್ಯಾಲೆಂಡರ್ ಸೇವೆಯನ್ನು ನೀಡುವುದಕ್ಕೆ ಸಿದ್ದತೆ ನಡೆಸಿದೆ.
ಹೌದು, ಜೂಮ್ ಅಪ್ಲಿಕೇಶನ್ ಬಳಕೆದಾರರಿಗೆ ವೆಬ್ ಇಮೇಲ್ ಸೇವೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಈಗಾಗಲೇ ವಿಡಿಯೋ ಕಾಲಿಂಗ್ ಪ್ಲಾಟ್ಫಾರ್ಮ್ನಲ್ಲಿ ಜನಪ್ರಿಯತೆ ಗಳಿಸಿರುವ ಜೂಮ್ ಮುಂದಿನ ವರ್ಷ ಕೆಲವು ಗ್ರಾಹಕರಿಗೆ ಜೂಮ್ ವೆಬ್ ಇಮೇಲ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇದರ ಜೊತೆಗೆ ಕ್ಯಾಲೆಂಡರ್ ಅಪ್ಲಿಕೇಶನ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿದೆ.
ಜೂಮ್ ಅಪ್ಲಿಕೇಶನ್ ವೀಡಿಯೊ ಕಾಲ್ ಸೇವೆಯಲ್ಲಿ ಸಾಧಿಸಿದೆ. ಇದರ ಮುಂದುವರೆದ ಭಾಗವಾಗಿ ಇಮೇಲ್ ಸೇವೆ ನೀಡಲು ಮುಂದಾಇದೆ. ಆದರೆ ಇಮೇಲ್ ಸೇವೆಯಲ್ಲಿ ಯಶಸ್ಸು ಸಾಧಿಸುವುದಕ್ಕೆ ಸಾಕಷ್ಟು ಸ್ಪರ್ಧೆಯನ್ನು ಎದುರಿಸಲಿದೆ. ಈಗಿನಂತೆ, ಮೈಕ್ರೋಸಾಫ್ಟ್ (ಆಫೀಸ್ 365) ಮತ್ತು ಗೂಗಲ್ (ಜಿ ಸೂಟ್) ಸಾಕಷ್ಟು ಪ್ರಾಬಲ್ಯ ಹೊಂದಿವೆ. ಇವುಗಳು ಕಾರ್ಪೊರೇಟ್ ಇಮೇಲ್ಗಳಿಗೆ ಸಮಾನಾರ್ಥಕವಾಗಿದೆ. ದಿ ವರ್ಜ್ ಪಾಯಿಂಟ್ಗಳಂತೆ, ಜೂಮ್ನ ಹೊಸ ಸೇವೆಯು ಕಂಪನಿಯು ಕೇವಲ ವೀಡಿಯೊ ಕರೆ ಮಾಡುವುದಕ್ಕಿಂತ ವಿಭಿನ್ನ ಪ್ರದೇಶಗಳಲ್ಲಿ ಅದರ ಪರಿಹಾರಗಳ ಅಪ್ಲಿಕೇಶನ್ ಅನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
ಜೂಮ್ ತನ್ನದೇ ಆದ ಇಮೇಲ್ ಹಾಗೂ ಕ್ಯಾಲೆಂಡರ್ ಸೇವೆ ಮೂಲಕ ಗೂಗಲ್ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಈಗಾಗಲೇ ವಿಡಿಯೋ ಪ್ಲಾಟ್ಫಾರ್ಮ್ನಲ್ಲಿ ಸಾಧಿಸಿರುವ ಯಶಸ್ಸನ್ನೇ ಇಮೇಲ್ ಕ್ಷೇತ್ರದಲ್ಲೂ ಮುಂದುವರೆಸುವ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಈ ಇಮೇಲ್ ಹಾಗೂ ಕ್ಯಾಲೆಂಡರ್ ಸೇವೆ ಹೇಗಿರಲಿದೆ ಅನ್ನೊದರ ಮಾಹಿತಿಯನ್ನು ಕಂಪೆನಿ ಬಿಟ್ಟುಕೊಟ್ಟಿಲ್ಲ. ಆದಾಗ್ಯೂ ಇಮೇಲ್ ಸೇವೆಯಲ್ಲಿ ಯಶಸ್ಸು ಕಾಣಬೇಕಾದರೆ ಹೆಚ್ಚಿನ ಪೈಪೋಟಿ ಇದ್ದು, ಇದನ್ನ ಜೂಮ್ ಹೇಗೆ ಎದುರಿಸಲಿದೆ ಅನ್ನೊದನ್ನ ಗಮನಿಸಬೇಕಿದೆ.
ಇನ್ನು ಮೊದಲೇ ಹೇಳಿದಂತೆ, ಜೂಮ್ ಭಾರಿ ಬಳಕೆದಾರರ ಸಂಖ್ಯೆಯನ್ನು ಹೊಂದಿದೆ. ಆದಾಗ್ಯೂ, ಹೆಚ್ಚುತ್ತಿರುವ ಉಚಿತ ಬಳಕೆದಾರರ ಸಂಖ್ಯೆಯು ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ಕಷ್ಟಕರವಾಗಿದ್ದರಿಂದ ಅದರ ಒಟ್ಟು ಅಂಚುಗಳು ಒತ್ತಡದಲ್ಲಿ ಉಳಿದಿವೆ. ಕಂಪನಿಯ ಮೊದಲ ಮತ್ತು ಎರಡನೇ ತ್ರೈಮಾಸಿಕಗಳ ನಡುವಿನ 40% ಬೆಳವಣಿಗೆಯ ದರಕ್ಕೆ ಹೋಲಿಸಿದರೆ, 10 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ 433,700 ಗ್ರಾಹಕರನ್ನು ಇದು ಹೊಂದಿದೆ ಎಂದು ಜೂಮ್ ವರದಿ ಮಾಡಿದೆ. ಇದು ಹಿಂದಿನ ವರ್ಷಕ್ಕಿಂತ 485% ಹೆಚ್ಚಳವಾಗಿದೆ ಆದರೆ ಹಣಕಾಸಿನ ಎರಡನೇ ತ್ರೈಮಾಸಿಕದಿಂದ ಕೇವಲ 17% ಹೆಚ್ಚಾಗಿದೆ.
This News Article is a Copy of GIZBOT
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm