ಬ್ರೇಕಿಂಗ್ ನ್ಯೂಸ್
12-12-20 01:25 pm Source: GIZBOT Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಭಾರಿ ಜುಕರ್ಬರ್ಗ್ ಕಟ್ಟಿದ ಸಾಮ್ರಾಜ್ಯ ಕಾನೂನಿ ಅಂಕುಶದಲ್ಲಿ ಸಿಲುಕಿ ಪ್ರಾಬಲ್ಯ ಕಳೆದುಕೊಳ್ಳುವ ಅಪಾಯದಲ್ಲಿದೆ. ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಲು ತನ್ನ ಪ್ರತಿಸ್ಫರ್ಧಿಗಳನ್ನೇ ಇಲ್ಲದಂತೆ ಫೇಸ್ಬುಕ್ ಮಾಡುತ್ತಿದೆ ಎಂದು ಅಮೆರಿಕದಲ್ಲಿ ಫೇಸ್ಬುಕ್ ವಿರುದ್ದ ಕಾನೂನು ಸಮರ ಶುರುವಾಗಿದೆ. ಅಷ್ಟೇ ಯಾಕೆ ಈ ಮೊಕದ್ದಮೆಯಲ್ಲಿ ಫೇಸ್ಬುಕ್ ತನ್ನ ಒಡೆತನ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ಗಳನ್ನ ಮಾರಾಬೇಕಾದ ಸನ್ನಿವೇಶ ಬಂದರೂ ಬರಬಹುದು ಎಂದು ಹೇಳಲಾಗುತ್ತಿದೆ.
ಹೌದು, ಫೇಸ್ಬುಕ್ ವಿರುದ್ದ ಅಮೆರಿಕದಲ್ಲಿ ಮೊಕದ್ದಮೆ ದಾಖಲಾಗಿದೆ. ಯುಎಸ್ನ ಎಫ್ಟಿಎ ಮೆನ್ಲೊ ಪಾರ್ಕ್ ವಿರುದ್ಧ ಆಂಟಿಟ್ರಸ್ಟ್ ಮೊಕದ್ದಮೆ ಹೂಡಿದೆ. ಅಲ್ಲದೆ ಯುಎಸ್ನ 46 ರಾಜ್ಯಗಳಾದ ವಾಷಿಂಗ್ಟನ್ ಡಿಸಿ ಮತ್ತು ಗುವಾಮ್ ನಡುವಿನ ಒಕ್ಕೂಟವು ಕೂಡ ಫೇಸ್ಬುಕ್ ವಿರುದ್ದ ಮೊಕದ್ದಮೆ ಹೂಡಿವೆ. ಅಲ್ಲದೆ ಕಂಪೆನಿಗಳ ಈ ಪರಭಕ್ಷಕ ಸ್ವಾಧೀನವನ್ನು ತಡೆಯಲು ಆಂಟಿಟ್ರಸ್ಟ್ ಮೊಕದ್ದಮೆ ವಿಮರ್ಶಾತ್ಮಕವಾಗಿ ಮಹತ್ವದ್ದಾಗಿದೆ" ಮತ್ತು ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸಬೇಕು ಎಂದು ಹೇಳಲಾಗಿದೆ.
ಫೇಸ್ಬುಕ್ ವಿರುದ್ದ ಇರುವ ಆರೋಪ ಏನು? ಸೊಶೀಯಲ್ ಮೀಡಿಯಾ ದೈತ್ಯ ಮಾರುಕಟ್ಟೆ ಪ್ರಾಬಲ್ಯವನ್ನು ಸ್ಥಾಪಿಸಲು ಫೇಸ್ಬುಕ್ 'ಪರಭಕ್ಷಕ ತಂತ್ರ'ವನ್ನು ಬಳಸುತ್ತಿದೆ ಎಂದು ಯುಎಸ್ ಫೆಡರಲ್ ಟ್ರೇಡ್ ಕಮಿಷನ್ ಗಮನಿಸಿದೆ. ಫೇಸ್ಬುಕ್ ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಅನ್ನು ಖರೀದಿಸುವಾಗ ಏಕಸ್ವಾಮ್ಯ ಕಾನೂನನ್ನು ಉಲ್ಲಂಘಿಸಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಸ್ಪರ್ಧೆಯೆ ಇಲ್ಲದಂತೆ ಮಾಡುವುದಕ್ಕೆ ಏಕಸ್ವಾಮ್ಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಇದು ಸಣ್ಣ ಸ್ಪರ್ಧಿಗಳು ಮತ್ತು ಪ್ರತಿಸ್ಪರ್ಧಿಗಳನ್ನು ಕಿತ್ತುಹಾಕಿದೆ. ಹೊಸ ಆಂಟಿಟ್ರಸ್ಟ್ ಮೊಕದ್ದಮೆಯು ಫೇಸ್ಬುಕ್ನ ಏಕಸ್ವಾಮ್ಯವನ್ನು ಕಸಿದುಕೊಳ್ಳುವ ಅಗತ್ಯವಿದೆ ಎಂದು ಹೇಳುತ್ತದೆ.
ಇನ್ನು ಪೇಸ್ಬುಕ್ ಏಕಸ್ವಾಮ್ಯವನ್ನು ಮುರಿಯುವ ಒಂದು ಮಾರ್ಗವೆಂದರೆ ಫೇಸ್ಬುಕ್ ಒಡೆತನದ ಪ್ಲಾಟ್ಫಾರ್ಮ್ಗಳಾದ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಅನ್ನು ಮಾರಾಟ ಮಾಡುವುದು. ಸದ್ಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಮತ್ತು ಫೋಟೋ ಶೇರಿಂಗ್ ಆಪ್ ಇನ್ಸ್ಸ್ಟಾಗ್ರಾಮ್ ಫೇಸ್ಬುಕ್ನ ಅತ್ಯಂತ ಅಮೂಲ್ಯವಾದ ಸ್ವಾಧೀನಗಳಲ್ಲಿ ಒಂದಾಗಿದೆ ಮತ್ತು ಇದು ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಇನ್ನು ಫೇಸ್ಬುಕ್ 2012 ರಲ್ಲಿ ಇನ್ಸ್ಟಾಗ್ರಾಮ್ ಅನ್ನು 1 ಬಿಲಿಯನ್ ಡಾಲರ್ಗೆ ಖರೀದಿಸಿತ್ತು, ಮತ್ತು 2014 ರಲ್ಲಿ 19 ಬಿಲಿಯನ್ ಡಾಲರ್ಗೆ ವಾಟ್ಸಾಪ್ ಅನ್ನು ಖರೀದಿಸಿತು. ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಎರಡೂ ಭಾರಿ ಬಳಕೆದಾರರ ನೆಲೆಯನ್ನು ಗೆಲ್ಲುವಲ್ಲಿ ಪ್ರವರ್ಧಮಾನಕ್ಕೆ ಬಂದಿವೆ. ಎರಡೂ ಪ್ಲಾಟ್ಫಾರ್ಮ್ಗಳಲ್ಲಿ 'ಫ್ರಮ್ ಫೇಸ್ಬುಕ್' ಬ್ರ್ಯಾಂಡಿಂಗ್ ಅನ್ನು ನೋಡಬಹುದಾಗಿದೆ.
ಆದರೆ ಇದೀಗ ಫೇಸ್ಬುಕ್ ವಿರುದ್ದ ಏಕಸ್ವಾಮ್ಯ ಉಲ್ಲಂಘನೆ ಆರೋಪ ಎದುರಾಗಿರುವುದರಿಂದ ಭವಿಷ್ಯದಲ್ಲಿ ಪೇಸ್ಬುಕ್ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಅನ್ನು ಮಾರಾಟಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಈ ಎರಡೂ ಪ್ಲಾಟ್ಫಾರ್ಮ್ಗಳು ಫೇಸ್ಬುಕ್ಗೆ ಭಾರಿ ಆದಾಯವನ್ನು ತಂದುಕೊಡುತ್ತಿರುವುದರಿಂದ ಫೇಸ್ಬುಕ್ ಕುಡ ಕಾನೂನು ಹೋರಾಟಕ್ಕೆ ಇಳಿಯಲಿದೆ. ಸದ್ಯ ಆಂಟಿಟ್ರಸ್ಟ್ ಮೊಕದ್ದಮೆಗೆ ಫೇಸ್ಬುಕ್ ಪ್ರತಿಕ್ರಿಯಿಸಿ, ಎಫ್ಟಿಸಿ ದೂರಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಎಫ್ಟಿಸಿ ಅನುಮೋದನೆ ನೀಡಿದ ಹಲವು ವರ್ಷಗಳ ನಂತರ ಸರ್ಕಾರ ಮರುಪರಿಶೀಲನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
This News Article is a Copy of GIZBOT
29-04-25 04:28 pm
HK News Desk
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 12:40 pm
Mangalore Correspondent
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
Mangalore, Terror Attack, Doctor Post: ಹೈಲ್ಯಾ...
27-04-25 11:09 pm
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm