ಬ್ರೇಕಿಂಗ್ ನ್ಯೂಸ್
10-12-20 04:52 pm Source: GIZBOT ಡಿಜಿಟಲ್ ಟೆಕ್
ದಕ್ಷಿಣ ಕೋರಿಯಾದ ಸ್ಮಾರ್ಟ್ಫೋನ್ ದೈತ್ಯ ಸ್ಯಾಮ್ಸಂಗ್ ಕಂಪೆನಿ ಸ್ಮಾರ್ಟ್ಟಿವಿ ವಲಯದಲ್ಲೂ ತನ್ನ ಪ್ರಾಬಲ್ಯವನ್ನು ಗುರುತಿಸಿಕೊಂಡಿದೆ. ಸದ್ಯ ಇದೀಗ ಫ್ಯೂಚರಿಸ್ಟಿಕ್ ಟಿವಿ, ದಿ ವಾಲ್ ನಿಂದ ಸ್ಫೂರ್ತಿ ಪಡೆದ ಸ್ಯಾಮ್ಸಂಗ್ ತನ್ನ ಮೈಕ್ರೊಲೆಡ್ ತಂತ್ರಜ್ಞಾನವನ್ನು ಬಳಸುವ 110 ಇಂಚಿನ ಸ್ಕ್ರೀನ್ ಟಿವಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಸ್ಯಾಮ್ಸಂಗ್ ಟಿವಿ ಈಗಾಗಲೇ ಕೊರಿಯಾದಲ್ಲಿ ಪ್ರೀ-ಸೇಲ್ಗೆ ಸಿದ್ಧವಾಗಿದೆ. 110 ಇಂಚಿನ ಡಿಸ್ಪ್ಲೇ ಹೊಂದಿರುವ ಸ್ಯಾಮ್ಸಂಗ್ ಟಿವಿ 2021 ರ ಮೊದಲ ತ್ರೈಮಾಸಿಕದಲ್ಲಿ ಇತರ ಮಾರುಕಟ್ಟೆಗಳಿಗೆ ಬರಲಿದೆ ಎಂದು ಕಂಪನಿ ಖಚಿತಪಡಿಸಿದೆ.
ಹೌದು, ಸ್ಯಾಮ್ಸಂಗ್ ಕಂಪೆನಿ ತನ್ನ ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ದೂರದರ್ಶನವನ್ನು ಜಗತ್ತಿಗೆ ತರಲು ಸ್ಯಾಮ್ಸಂಗ್ ಶ್ರಮಿಸುತ್ತಿದೆ. ಇದು 11 ಇಂಚಿನ ಮೈಕ್ರೊಲೆಡ್ ಟಿವಿ ಗುರಿಯ ಒಂದು ಭಾಗವಾಗಿದೆ. ಮೈಕ್ರೊಲೆಡ್ ತಂತ್ರಜ್ಞಾನವು ಅತ್ಯುತ್ತಮವಾದ ಒಎಲ್ಇಡಿ ಪರದೆಗಳನ್ನು ಬಳಸುತ್ತದೆ ಎನ್ನಲಾಗಿದೆ.
ಸದ್ಯ ಸ್ಯಾಮ್ಸಂಗ್ ಕಂಪೆನಿ 110 ಇಂಚಿನ ಮೈಕ್ರೊಲೆಡ್ ಟಿವಿಯನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇದು 99.99 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ ಎನ್ನಲಾಗಿದೆ. ಜೊತೆಗೆ ಸ್ಯಾಮ್ಸಂಗ್ ಕಂಪೆನಿ "ಎಂಬೆಡೆಡ್ ಮೆಜೆಸ್ಟಿಕ್ ಸೌಂಡ್ ಸಿಸ್ಟಮ್" ಅನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಇದು "ಬಾಹ್ಯ ಸ್ಪೀಕರ್ ಇಲ್ಲದ 5.1 ಚಾನೆಲ್ ಧ್ವನಿಯನ್ನು ನೀಡುತ್ತದೆ" ಎಂದು ಹೇಳಲಾಗಿದೆ. ಇನ್ನು ಚಿತ್ರದ ಗುಣಮಟ್ಟ ಹೆಚ್ಚಿಸುವುದಕ್ಕಾಗಿ 110 ಇಂಚಿನ ಮೈಕ್ರೊಲೆಡ್ ಟಿವಿಯಲ್ಲಿ ಬ್ಯಾಕ್ಲೈಟ್ ಮತ್ತು ಬಣ್ಣ ಫಿಲ್ಟರ್ಗಳನ್ನು ತೆಗೆದುಹಾಕಲು ಮೈಕ್ರೊಮೀಟರ್ ಗಾತ್ರದ ಎಲ್ಇಡಿ ದೀಪಗಳನ್ನು ಬಳಸಲಾಗಿದೆ.
ಇನ್ನು ಈ ಸ್ಮಾರ್ಟ್ಟಿವಿ ಆಟೋಮ್ಯಾಟಿಕ್ ಬ್ರೈಟ್ನೆಶ್ ಅನ್ನು ಹೊಂದಿದೆ. ತನ್ನದೇ ಆದ ಪಿಕ್ಸೆಲ್ ರಚನೆಗಳಿಂದ ಬೆಳಕು ಮತ್ತು ಬಣ್ಣವನ್ನು ಇದು ಪ್ರೊಡಕ್ಷನ್ ಅನ್ನು ನೀಡಲಿದೆ. ಜೊತೆಗೆ ಇದು ಡಿಸಿಐ ಮತ್ತು ಅಡೋಬ್ ಆರ್ಜಿಬಿ ಬಣ್ಣದ ಹರವುಗಳ 100 ಪ್ರತಿಶತವನ್ನು ವ್ಯಕ್ತಪಡಿಸುತ್ತದೆ. ಅಲ್ಲದೆ ಈ ಸ್ಮಾರ್ಟ್ಟಿವಿ ಉನ್ನತ-ಮಟ್ಟದ ಡಿಎಸ್ಎಲ್ಆರ್ ಕ್ಯಾಮೆರಾಗಳೊಂದಿಗೆ ತೆಗೆದ ವಿಶಾಲ ಬಣ್ಣದ ಹರವು ಚಿತ್ರಗಳನ್ನು ನಿಖರವಾಗಿ ನೀಡುತ್ತದೆ. ಇದು 4K ರೆಸಲ್ಯೂಶನ್ ಮತ್ತು 8 ಮಿಲಿಯನ್ ಪಿಕ್ಸೆಲ್ಗಳಿಂದ ನಿಖರವಾದ ಬ್ರೈಟ್ನೆಶ್ ಅನ್ನು ನೀಡಲಿದೆ.
ಸದ್ಯ 110-ಇಂಚಿನ ಮೈಕ್ರೊಲೆಡ್ ಟಿವಿ ದುಬಾರಿಯಾಗಿದೆ ಎಂದು ತೋರುತ್ತಿದ್ದೆ, ಆದರೂ ಗ್ರಾಹಕರು ಭವಿಷ್ಯದಲ್ಲಿ ಅಗ್ಗದ ಮೈಕ್ರೊಲೆಡ್ ಟಿವಿಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇನ್ನು ಮುಂದಿನ ತಿಂಗಳು, ಸಿಇಎಸ್ 2021 ವರ್ಚುವಲ್ ಈವೆಂಟ್ನಲ್ಲಿ, ಸ್ಯಾಮ್ಸಂಗ್ ಹೆಚ್ಚು ಮುಖ್ಯವಾಹಿನಿಯ ಗ್ರಾಹಕ ಕ್ಯೂಎಲ್ಇಡಿ 4 ಕೆ ಮತ್ತು 8 ಕೆ ಟಿವಿಗಳ ಹೊಸ ಶ್ರೇಣಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇನ್ನು ಈ ಸ್ಮಾರ್ಟ್ಟಿವಿ ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.
This News Article is a Copy of GIZBOT
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm