ಬ್ರೇಕಿಂಗ್ ನ್ಯೂಸ್
03-12-20 05:53 pm Source: GIZBOT ಡಿಜಿಟಲ್ ಟೆಕ್
ನೋಕಿಯಾ ಸಂಸ್ಥೆಯು ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಆ ಪೈಕಿ ಎಂಟ್ರಿ ಲೆವೆಲ್ ಫೋನ್ಗಳಲ್ಲಿ ನೋಕಿಯಾ C3 ಫೋನ್ ಹೆಚ್ಚು ಆಕರ್ಷಕ ಅನಿಸಿದೆ. ಇದೀಗ ಈ ಸ್ಮಾರ್ಟ್ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಈ ಸ್ಮಾರ್ಟ್ಫೋನ್ 3GB RAM +32GB ಸ್ಟೋರೇಜ್ ಆಯ್ಕೆಯನ್ನು ಪಡೆದಿದೆ.
ಹೌದು, ನೋಕಿಯಾ ಸಂಸ್ಥೆಯ ನೋಕಿಯಾ C3 ಸ್ಮಾರ್ಟ್ಫೋನ್ 2GB RAM + 16GB ಬೇಸ್ ವೇರಿಯಂಟ್ ಮಾಡೆಲ್ನಲ್ಲಿ 500ರೂ. ಕಡಿತ ಆಗಿದ್ದು, 3GB RAM +32GB ಸ್ಟೋರೇಜ್ ವೇರಿಯಂಟ್ ಬೆಲೆಯಲ್ಲಿ 1000ರೂ. ಗಳ ಇಳಿಕೆ ಆಗಿದೆ. ಇನ್ನು ಈ ಸ್ಮಾರ್ಟ್ಫೋನ್ ಬ್ಲೂ ಹಾಗೂ ಸ್ಯಾಂಡ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇನ್ನುಳಿದಂತೆ ನೋಕಿಯಾ C3 ಸ್ಮಾರ್ಟ್ಫೋನ್ ಫೀಚರ್ಸ್ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್ಪ್ಲೇ ವಿನ್ಯಾಸ
ನೋಕಿಯಾ C3 ಸ್ಮಾರ್ಟ್ಫೋನ್ 720×1440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥದೊಂದಿಗೆ 5.9 ಇಂಚಿನ ಹೆಚ್ಡಿ ಪ್ಲಸ್ IPS ಡಿಸ್ಪ್ಲೇ ಅನ್ನು ಹೊಂದಿದೆ. ಡಿಸ್ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 269 PPI ಆಗಿದೆ. ಡಿಸ್ಪ್ಲೇಯ ಅನುಪಾತವು 18:9 ಆಗಿದ್ದು, ಸ್ಕ್ರೀನ್ನಿಂದ ಬಾಹ್ಯ ಬಾಡಿಯ ಅಡುವಿನ ಅಂತರ ಶೇ.75.2% ಆಗಿದೆ.

ಪ್ರೊಸೆಸರ್ ಯಾವುದು
ನೋಕಿಯಾ C3 ಸ್ಮಾರ್ಟ್ಫೋನ್ 28nm ಬೇಸ್ಡ್ Unisoc SC9863A ಆಕ್ಟಾ-ಕೋರ್ SoC ಪ್ರೊಸೆಸರ್ ಇದರಲ್ಲಿದೆ. ಈ ಪ್ರೊಸೆಸರ್ಗೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಇದೆ. 3GB RAM + 32GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದ್ದು, ಎಸ್ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶ ನೀಡಲಾಗಿದೆ.

ಬೆಲೆ ಎಷ್ಟು
ನೋಕಿಯಾ ತನ್ನ ಹೊಸ ನೋಕಿಯಾ C3 ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 2GB + 16GB ವೇರಿಯಂಟ್ ಬೆಲೆಯು 6,999ರೂ. ಆಗಿದೆ. ಹಾಗೂ 3GB + 32GB ವೇರಿಯಂಟ್ 7,999ರೂ. ಪ್ರೈಸ್ಟ್ಯಾಗ್ ಹೊಂದಿದೆ.
This News Article is a Copy of GIZBOT
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
26-10-25 04:42 pm
Mangalore Correspondent
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm