ಬ್ರೇಕಿಂಗ್ ನ್ಯೂಸ್
04-08-23 06:40 pm Source: Gizbot Kannada ಡಿಜಿಟಲ್ ಟೆಕ್
ಪ್ರಮುಖ ಇ-ಕಾಮರ್ಸ್ ಸೈಟ್ಗಳಲ್ಲಿ ಅಮೆಜಾನ್ (Amazon) ಒಂದಾಗಿದ್ದು, ಈಗಾಗಲೇ ವಿವಿಧ ರೀತಿಯಲ್ಲಿ ವಿಶೇಷ ಡಿಸ್ಕೌಂಟ್ ಸೇಲ್ಗಳನ್ನು ಆಯೋಜನೆ ಮಾಡಿಕೊಂಡು ಬಂದಿದೆ. ಈ ನಡುವೆ ಅಮೆಜಾನ್ ಫ್ರೀಡಮ್ ಸೇಲ್ ಪ್ರೈಮ್ ಸದಸ್ಯರಿಗೆ ಲೈವ್ (Amazon Freedom Sale live for Prime members) ಆಗಿದ್ದು ಜನಪ್ರಿಯ ಸ್ಮಾರ್ಟ್ಟಿವಿ ಮೇಲೆ ಭಾರೀ ರಿಯಾಯಿತಿ ಸಿಗಲಿದೆ.
ಹೌದು, ಅಮೆಜಾನ್ ಫ್ರೀಡಮ್ ಸೇಲ್ ಈಗ ಪ್ರೈಮ್ ಸದಸ್ಯರಿಗೆ ಲೈವ್ ಆಗಿದೆ. ಈ ಸೇಲ್ನಲ್ಲಿ ಪ್ರೈಮ್ ಸದಸ್ಯರು ಆಗಸ್ಟ್ 8 ರವರೆಗೆ ಖರೀದಿ ಮಾಡುವ ಯಾವುದೇ ಡಿವೈಸ್ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಅದರಲ್ಲೂ ಸ್ಯಾಮ್ಸಂಗ್, ಸೋನಿ, ಏಸರ್, ರೆಡ್ಮಿಸ್ಮಾರ್ಟ್ಟಿವಿಗಳ ಮೇಲೆ ಕನಿಷ್ಠ 40% ರಿಯಾಯಿತಿ ಸಿಗಲಿದೆ. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್ಟಿವಿಗಳಿಗೆ ಏನೆಲ್ಲಾ ಆಫರ್ ಇದೆ ನೋಡೋಣ ಬನ್ನಿ.

ಎಲ್ ಜಿ ಸ್ಮಾರ್ಟ್ಟಿವಿ: ಎಲ್ಜಿ ಕಂಪೆನಿ ಸ್ಮಾರ್ಟ್ಟಿವಿ (Smart TV)ವಿಭಾಗದಲ್ಲಿ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED TV 55UQ7500PSF ಸ್ಮಾರ್ಟ್ಟಿವಿಗೆ 39,000ರೂ.ಗಳ ರಿಯಾಯಿತಿ ಸಿಲಿದ್ದು, ಇದಾದ ನಂತರ ನೀವು 40,990ರೂ.ಗಳನ್ನು (ಕೂಪನ್ನೊಂದಿಗೆ) ನೀಡಿ ಖರೀದಿ ಮಾಡಬಹುದು. ಈ ಟಿವಿ HDR10, ALLM ಮತ್ತು HLG ಬೆಂಬಲದೊಂದಿಗೆ 4K ರೆಸಲ್ಯೂಶನ್ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ವೆಬ್ಓಎಸ್ 2.2 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.
ಸ್ಯಾಮ್ಸಂಗ್ ಸ್ಮಾರ್ಟ್ಟಿವಿ: ಇನ್ನು ಈ ವಿಶೇಷ ಸೇಲ್ನಲ್ಲಿ ಸ್ಯಾಮ್ಸಂಗ್ನ 55 ಇಂಚಿನ ಕ್ರಿಸ್ಟಲ್ 4K ನಿಯೋ ಸರಣಿ 29,000 ಡಿಸ್ಕೌಂಟ್ ಹೊಂದಿದ್ದು, 41,990 ರೂ.ಗಳಿಗೆ ಖರೀದಿ ಮಾಡಬಹುದು. ಈ ಸ್ಮಾರ್ಟ್ಟಿವಿ 4K ಪ್ಯಾನೆಲ್ ಅನ್ನು ಹೊಂದಿದ್ದು, 20W ಸ್ಪೀಕರ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಟಿವಿ ಟೈಜನ್ ಓಎಸ್ ಅನ್ನು ರನ್ ಮಾಡಲಿದ್ದು, ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್ ಸೇರಿದಂತೆ ಎಲ್ಲಾ ಓಟಿಟಿ ಪ್ಲಾಟ್ಫಾರ್ಮ್ಗಳನ್ನು ಬೆಂಬಲಿಸುತ್ತದೆ.

ಸೋನಿ ಟಿವಿ: ಸೋನಿ ಕಂಪೆನಿಯ ಸ್ಮಾರ್ಟ್ಟಿವಿಗಳ ವಿಚಾರಕ್ಕೆ ಬರುವುದಾದರೆ ಸೋನಿ ಬ್ರಾವಿಯಾ 50 ಇಂಚಿನ ಸ್ಮಾರ್ಟ್ಟಿವಿಗೆ 27,000ರೂ.ಗಳ ರಿಯಾಯಿತಿ ನೀಡಲಾಗಿದ್ದು, 37,990ರೂ.ಗಳಿಗೆ ಕೊಂಡುಕೊಳ್ಳಬಹುದು. ಈ ಟಿವಿ HDR ಬೆಂಬಲದೊಂದಿಗೆ 50Hz ರಿಫ್ರೆಶ್ ರೇಟ್ ಮೂಲಕ ಫುಲ್ಹೆಚ್ಡಿ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಇನ್ಬಿಲ್ಟ್ ಸಬ್ ವೂಫರ್ನೊಂದಿಗೆ 20W ಸ್ಪೀಕರ್ ಆಯ್ಕೆ ಇದರಲ್ಲಿದ್ದು, ಗೂಗಲ್ ಟಿವ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದೆ.
ಕೊಡಾಕ್ ಸ್ಮಾರ್ಟ್ಟಿವಿ: ಕೊಡಕ್ನ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED ಟಿವಿ ಈ ಸೇಲ್ನಲ್ಲಿ 20,000ರೂ.ಗಳ ಡಿಸ್ಕೌಂಟ್ ಲಭ್ಯ ಇದ್ದು, ಈ ಮೂಲಕ ನೀವು 29,999ರೂ.ಗಳಿಗೆ ಈ ಸ್ಮಾರ್ಟ್ಟಿವಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಟಿವಿ HDR ಬೆಂಬಲದೊಂದಿಗೆ 4K ಪ್ಯಾನೆಲ್ ಆಯ್ಕೆ ಪಡೆದಿದ್ದು, ಡಾಲ್ಬಿ ಡಿಜಿಟಲ್ ಮತ್ತು ಡಿಟಿಎಸ್ ಬೆಂಬಲದೊಂದಿಗೆ 30W ಸ್ಟಿರಿಯೊ ಸ್ಪೀಕರ್ ಆಯ್ಕೆ ಪಡೆದುಕೊಂಡಿದೆ.
![]()
ರೆಡ್ಮಿ ಸ್ಮಾರ್ಟ್ಟಿವಿ: ರೆಡ್ಮಿ ಸ್ಮಾರ್ಟ್ಟಿವಿಗಳಲ್ಲಿ 55 ಇಂಚಿನ ಸ್ಮಾರ್ಟ್ಟಿವಿಗೆ 22,000ರೂ.ಗಳ ರಿಯಾಯಿತಿ ನೀಡಲಾಗಿದ್ದು, ಇದು 32,999ರೂ.ಗಳಿಗೆ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಈ ಸ್ಮಾರ್ಟ್ಟಿವಿ ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದೆ. ಜೊತೆಗೆ ಕ್ರೋಮಾಕಾಸ್ಟ್, ಗೂಗಲ್ ಅಸಿಸ್ಟೆಂಟ್, ಪ್ಲೇ ಸ್ಟೋರ್ ಇನ್ಬಿಲ್ಟ್ ಆಗಿದೆ. ಇಷ್ಟು ಮಾತ್ರವಲ್ಲದೆ ಪ್ಯಾಚ್ವಾಲ್ ಸೇವೆ ಸಹ ಲಭ್ಯ.
ತೋಷಿಬಾ ಸ್ಮಾರ್ಟ್ಟಿವಿ: ಇನ್ನು ನಿಮಗೆ ತೋಷಿಬಾ ಕಂಪೆನಿಯ ಸ್ಮಾರ್ಟ್ಟಿವಿ ಖರೀದಿ ಮಾಡಬೇಕು ಎಂಬ ಇಚ್ಚೆ ಇದ್ದರೆ 55 ಇಂಚಿನ QLED ಸ್ಮಾರ್ಟ್ ಟಿವಿಗೆ 35,000ರೂ.ಗಳ ಡಿಸ್ಕೌಂಟ್ ನೀಡಲಾಗಿದೆ. ಈ ಮೂಲಕ 44,999ರೂ.ಗಳಿಗೆ ಕೊಂಡುಕೊಳ್ಳಬಹುದು. ಅದರಂತೆ HDR10 ಬೆಂಬಲದೊಂದಿಗೆ 4K QLED ಪ್ಯಾನೆಲ್ ಆಯ್ಕೆ ನೀಡಲಾಗಿದ್ದು, ಗೂಗಲ್ ಟಿವಿ ಓಎಸ್ ಅನ್ನು ರನ್
ಏಸರ್ ಸ್ಮಾರ್ಟ್ಟಿವಿ: ಏಸರ್ನ 55 ಇಂಚಿನ ಸ್ಮಾರ್ಟ್ಟಿವಿಗೆ ಅಮೆಜಾನ್ನ ಈ ಸೇಲ್ನಲ್ಲಿ 17,991ರೂ.ಗಳ ರಿಯಾಯಿತಿ ನೀಡಲಾಗಿದೆ. ಅದರಂತೆ ನೀವು ಇದನ್ನು 29,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಉಳಿದಂತೆ ಈ ಸ್ಮಾರ್ಟ್ಟಿವಿ HDR ಬೆಂಬಲದೊಂದಿಗೆ 4K ರೆಸಲ್ಯೂಶನ್ ಡಿಸ್ಪ್ಲೇ ಆಯ್ಕೆ ಹೊಂದಿದ್ದು, ಜನಪ್ರಿಯ ಓಟಿಟಿ ಪ್ಲಾಟ್ಫಾರ್ಮ್ಗಳನ್ನು ಸಹ ಬೆಂಬಲಿಸುತ್ತದೆ.
Huge Offer for Smart TVS in Amazon Freedom Sale more Details.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm