ಬ್ರೇಕಿಂಗ್ ನ್ಯೂಸ್
03-08-23 08:21 pm Source: Gizbot Kannada ಡಿಜಿಟಲ್ ಟೆಕ್
ಚೀನಾ ಮೂಲದ ಹಾನರ್ ಬ್ರ್ಯಾಂಡ್ ಫೋನ್ ಸೇರಿದಂತೆ ಹಲವು ಟೆಕ್ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಹಾಗೆಯೇ ಹಾನರ್ ಸಂಸ್ಥೆಯು ಭಿನ್ನ ಶ್ರೇಣಿಯ ಲ್ಯಾಪ್ಟಾಪ್ ಡಿವೈಸ್ಗಳ ಆಯ್ಕೆ ಹೊಂದಿದೆ. ಆ ಪೈಕಿ ಇತ್ತೀಚಿಗಷ್ಟೆ ಹೊಸದಾಗಿ ಬಿಡುಗಡೆ ಮಾಡಿರುವ ಹಾನರ್ ಮ್ಯಾಜಿಕ್ X14 2023 ಲ್ಯಾಪ್ಟಾಪ್ ಈಗ ಸಖತ್ ಡಿಸ್ಕೌಂಟ್ ಪಡೆದಿದೆ.
ಹೌದು, ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್ ನಲ್ಲಿ 'ಹಾನರ್ ಮ್ಯಾಜಿಕ್ X14 2023' ಲ್ಯಾಪ್ಟಾಪ್ 35% ರಷ್ಟು ಬೊಂಬಾಟ್ ರಿಯಾಯಿತಿ ಹೊಂದಿದೆ. ಈ ಲ್ಯಾಪ್ಟಾಪ್ (14 ಇಂಚಿನ) 8GB/512GB NVMe SSD ವೇರಿಯಂಟ್ ಡಿವೈಸ್ ಬೆಲೆಯು 74,999ರೂ. ಆಗಿದ್ದು, ಆದರೆ ಅಮೆಜಾನ್ ಆಫರ್ನಲ್ಲಿ 48,990ರೂ. ಗಳಿಗೆ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ಗಳಿಂದ ಡಿಸ್ಕೌಂಟ್ ಸಹ ದೊರೆಲಿದೆ. ಈ ಲ್ಯಾಪ್ಟಾಪ್ ಹಗುರವಾಗಿದ್ದು, 1.4ಕಿ.ಲೋ ತೂಕವನ್ನು ಪಡೆದುಕೊಂಡಿದೆ.
ಹಾಗೆಯೇ ಹಾನರ್ ಸಂಸ್ಥೆಯ 'ಹಾನರ್ ಮ್ಯಾಜಿಕ್ X14 2023' ಲ್ಯಾಪ್ಟಾಪ್ 12ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್ ಮೂಲಕ ಕೆಲಸ ಮಾಡಲಿದೆ. 8GB + 512GB ಹಾಗೂ 16GB + 512GB RAM ಸ್ಟೋರೇಜ್ ವೇರಿಯಂಟ್ ಮಾಡೆಲ್ಗಳನ್ನು ಪಡೆದಿದೆ. ಇದರ ಜೊತೆಗೆ ಸ್ಟಿರಿಯೊ ಸ್ಪೀಕರ್ ಸೌಲಭ್ಯ ಸಹ ಒಳಗೊಂಡಿದೆ. ಹಾಗಾದರೆ ಹಾನರ್ ಮ್ಯಾಜಿಕ್ X14 2023 ಲ್ಯಾಪ್ಟಾಪ್ನ ಇತರೆ ಫೀಚರ್ಸ್ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಹಾನರ್ ಮ್ಯಾಜಿಕ್ X14 2023 ಲ್ಯಾಪ್ಟಾಪ್ 14 ಇಂಚಿನ ಡಿಸ್ಪ್ಲೇ ಅನ್ನು ಪಡೆದುಕೊಂಡಿದ್ದು. ಇನ್ನು ಈ ಲ್ಯಾಪ್ಟಾಪ್ ಡಿಸ್ಪ್ಲೇ 100 ಪ್ರತಿಶತ ಬಣ್ಣದ ಹರವು ಪಡೆದಿದೆ. ಹಾಗೆಯೇ ಇದು 300 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸಾಮರ್ಥ್ಯವನ್ನು ಸಹ ಹೊಂದಿವೆ. ಈ ಲ್ಯಾಪ್ಟಾಪ್ ತೆಳುವಾದ ವಿನ್ಯಾಸ ಹೊಂದಿದ್ದು, ಹಗುರವಾಗಿದೆ. ಜೊತೆಗೆ ಮೆಟಲ್ ಯುನಿಬಾಡಿ ಅನ್ನು ಇದು ಪಡೆದಿದೆ. ಇದರೊಂದಿಗೆ ಪವರ್ ಬಟನ್ನಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಸಹ ಒದಗಿಸಲಾಗಿದೆ.
ಹಾನರ್ ಮ್ಯಾಜಿಕ್ಬುಕ್ X14 ಲ್ಯಾಪ್ಟಾಪ್ ಫುಲ್-ಸೈಜ್ಡ್ ಬ್ಯಾಕ್ಲಿಟ್ ಕೀಬೋರ್ಡ್ ಅನ್ನು ಪಡೆದುಕೊಂಡಿದ್ದು, ಎರಡನೆಯದು ಸ್ವತಂತ್ರ ಸಂಖ್ಯೆಯ ಪ್ಯಾಡ್ ಅನ್ನು ಸಹ ಒಳಗೊಂಡಿವೆ. ಇದರ ಜೊತೆಗೆ ಹಾನರ್ನ ಈ ಲ್ಯಾಪ್ಟಾಪ್ ಸ್ಟಿರಿಯೊ ಸ್ಪೀಕರ್ಗಳನ್ನು ಹೊಂದಿದೆ. ಹೀಗಾಗಿ ಅತ್ಯುತ್ತಮ ಗೇಮಿಂಗ್ ಆಡಿಯೊವನ್ನು ಬಳಕೆದಾರರು ಅನುಭವಿಸಬಹುದು. ಹಾಗೆಯೇ ಲ್ಯಾಪ್ಟಾಪ್ ಸ್ಕ್ರೀನ್ ಸೌಂಡ್ ಎಫೆಕ್ಟ್ಗಳಿಗೆ ಆಟೋಮ್ಯಾಟಿಕ್ ಆಗಿ ಸೆಟ್ ಆಗುತ್ತದೆ.
ಹಾನರ್ ಮ್ಯಾಜಿಕ್ಬುಕ್ X14 2023 ಲ್ಯಾಪ್ಟಾಪ್ 12ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇದು ಸಾಫ್ಟ್ವೇರ್-ವಾರು, ಲ್ಯಾಪ್ಟಾಪ್ ವಿಂಡೋಸ್ 11 ಓಎಸ್ ನಲ್ಲಿ ಹಾನರ್ ಡಿವೈಸ್ ಕ್ಲೋನ್ ಅನ್ನು ಸಪೋರ್ಟ್ ಪಡೆದಿದೆ. ಇದರ ಜೊತೆಗೆ 16GB RAM ಮತ್ತು 512GB ಆಂತರೀಕ ಸ್ಟೊರೇಜ್ ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಅಲ್ಲದೇ ಈ ಎರಡು ಲ್ಯಾಪ್ಟಾಪ್ 65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ 60Whr ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿದೆ.
ಹಾನರ್ ಮ್ಯಾಜಿಕ್ಬುಕ್ X14 2023 ಲ್ಯಾಪ್ಟಾಪ್ 8GB + 512GB ವೇರಿಯಂಟ್ ಮತ್ತು 16GB + 512GB RAM ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಹಾನರ್ ಮ್ಯಾಜಿಕ್ಬುಕ್ X16 2023 ಲ್ಯಾಪ್ಟಾಪ್ ಅನ್ನು ಗ್ರಾಹಕರು ಅಮೆಜಾನ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ಮೂಲಕ ಖರೀದಿ ಮಾಡಬಹುದಾಗಿದೆ.
Honor Magicbook x14 2023 Laptop price drop on Amazon platform.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm