ಬ್ರೇಕಿಂಗ್ ನ್ಯೂಸ್
26-07-23 10:30 pm Source: Gizbot Kannada ಡಿಜಿಟಲ್ ಟೆಕ್
ಲಾಂಚ್ ಆಗುವ ಮುನ್ನವೇ ಟೆಕ್ ವಲಯದಲ್ಲಿ ಸುನಾಮಿ ಎಬ್ಬಿಸಿದ್ದ ಸ್ಯಾಮ್ಸಂಗ್ನ (Samsung) ಹೊಸ ಡಿವೈಸ್ಗಳು ಕೊನೆಗೂ ಲಾಂಚ್ ಆಗಿವೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ 2023 ( Samsung Galaxy Unpacked 2023) ಕಾರ್ಯಕ್ರಮದಲ್ಲಿ ಹಲವಾರು ಸ್ಮಾರ್ಟ್ ಡಿವೈಸ್ಗಳನ್ನು ಅನಾವರಣ ಮಾಡಲಾಗಿದ್ದು, ಗ್ಯಾಲಕ್ಸಿ Z ಫ್ಲಿಪ್ 5 ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ.
ಹೌದು, ಈ ವಿಶೇಷ ಕಾರ್ಯಕ್ರಮದಲ್ಲಿ ಸ್ಯಾಮ್ಸಂಗ್ ಸಂಸ್ಥೆಯು ಗ್ಯಾಲಕ್ಸಿ Z ಫ್ಲಿಪ್ 5 ಫೋನ್, ಗ್ಯಾಲಕ್ಸಿ ವಾಚ್ 6, ಗ್ಯಾಲಕ್ಸಿ ಟ್ಯಾಬ್ 9 ಸರಣಿ ಅನಾವರಣ ಮಾಡಿದ್ದು, ಇದರೊಂದಿಗೆ ಬಹಳ ಕುತೂಹಲ ಉಂಟು ಮಾಡಿದ್ದ ಗ್ಯಾಲಕ್ಸಿ Z ಫ್ಲಿಪ್ 5 ಅನ್ನು ಲಾಂಚ್ ಮಾಡಿದೆ. ಐದನೇ ತಲೆಮಾರಿನ ಗ್ಯಾಲಕ್ಸಿ ಫೋಲ್ಡಬಲ್ ಫೋನ್ಗಳು ನಯವಾದ ವಿನ್ಯಾಸ, ಶಕ್ತಿಯುತ ಕಾರ್ಯಕ್ಷಮತೆ ಮತ್ತು ಗ್ರಾಹಕೀಯಗೊಳಿಸಬಹುದಾದ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಫೋನ್ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯೋಣ

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಡಿಸ್ಪ್ಲೇ ವಿವರ:
ಗ್ಯಾಲಕ್ಸಿ Z ಫ್ಲಿಪ್ 5 ಮಡಚಬಹುದಾದ ಸ್ಮಾರ್ಟ್ಫೋನ್ (Smartphone) ವಿಭಾಗದಲ್ಲಿ ಸ್ಯಾಮ್ಸಂಗ್ನ ಇತ್ತೀಚಿನ ಕೊಡುಗೆಯಾಗಿದೆ. ಅನನ್ಯ ಮತ್ತು ಪಾಕೆಟ್ ಸ್ನೇಹಿಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, 2640 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ನೊಂದಿಗೆ 6.7 ಇಂಚಿನ ಡೈನಾಮಿಕ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ.
ಇದರೊಂದಿಗೆ 60Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 720 x 748 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಹಾಗೂ 306 PPI ನೊಂದಿಗೆ 3.4 ಇಂಚಿನ ಸೂಪರ್ ಅಮೋಲೆಡ್ ಕವರ್ ಡಿಸ್ಪ್ಲೇ ಆಯ್ಕೆ ಇದೆ. ಹಾಗೆಯೇ ಈ ಫ್ಲೆಕ್ಸ್ ವಿಂಡೋ ಪ್ರತ್ಯೇಕವಾಗಿದ್ದು, ಇದು ಹಿಂದಿನ ಮಾದರಿಗಳಿಗಿಂತ ಹಲವು ಪಟ್ಟು ದೊಡ್ಡದಾಗಿದ್ದು, ಇದರಲ್ಲಿ ಗ್ರಾಹಕೀಯಗೊಳಿಸಬಹುದಾದ ಸೌಲಭ್ಯ ಇರಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಪ್ರೊಸೆಸರ್ ಮಾಹಿತಿ: ಇದರ ಪ್ರೊಸೆಸರ್ ವಿಚಾರಕ್ಕೆ ಬರುವುದಾದರೆ ಸ್ನಾಪ್ಡ್ರಾಗನ್ 8 ಜನ್ 2 (Snapdragon 8 Gen 2)ನಿಂದ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ವಿವಿಧ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಮಾಡಬಹುದಾಗಿದೆ. ಅಂದರೆ ಅತ್ಯುತ್ತಮ ಕಾರ್ಯಕ್ಷಮತೆ ಇದರಲ್ಲಿದೆ. ಉಳಿದಂತೆ ಅಡ್ರಿನೋ GPU ನೊಂದಿಗೆ ಈ ಫೋನ್ ಪ್ಯಾಕ್ ಆಗಿದ್ದು, 8GB RAM ಮತ್ತು 512GB ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಕ್ಯಾಮೆರಾ ವಿನ್ಯಾಸ: ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ(Triple rear camera) ಆಯ್ಕೆ ಪಡೆದುಕೊಂಡಿದೆ. ಅಂದರೆ 12M ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಆಯ್ಕೆ ಇದ್ದು, ಸೆಲ್ಫಿಗಾಗಿ ಮುಂಭಾಗದಲ್ಲಿ 10 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಬ್ಯಾಟರಿ ಸಾಮರ್ಥ್ಯ: ಇನ್ನು ಈ ಫೋನ್ 3,700mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 25W ವೇಗದ ಚಾರ್ಜಿಂಗ್ ಹಾಗೂ ವಾಯರ್ಲೆಸ್ ಚಾರ್ಜಿಂಗ್ಗೆ ಬೆಂಬಲ ನೀಡಲಿದೆ. ಉಳಿದಂತೆ 5G, 4G LTE, ವೈ-ಫೈ 6E, ಬ್ಲೂಟೂತ್ ಆವೃತ್ತಿ v5.3, ಜಿಪಿಎಸ್, ಮತ್ತು ಚಾರ್ಜಿಂಗ್ ಮತ್ತು ಡೇಟಾ ಸಿಂಕ್ಗಾಗಿ ಯುಎಸ್ಬಿ ಟೈಪ್-ಸಿ ಪೋರ್ಟ್ನ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಬೆಲೆ ಹಾಗೂ ಲಭ್ಯತೆ: ಇನ್ನು ಬೆಲೆಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ ಈ ಫೋನ್ನ 256GB ಸ್ಟೋರೇಜ್ ಆವೃತ್ತಿ $999 (ಅಂದಾಜು 82,000ರೂ.ಗಳು) ನಿಂದ ಪ್ರಾರಂಭ ಆಗಲಿದ್ದು, 512GB ಆವೃತ್ತಿಗೆ $1,119 (ಅಂದಾಜು 92,000ರೂ.ಗಳು) ಬೆಲೆ ಇರಲಿದೆ ಎಂದು ತಿಳಿದುಬಂದಿದೆ. ಈ ಫೋನ್ ಬೆಲೆಗಳನ್ನು ಭಾರತದಲ್ಲಿ ನಾಳೆ ಪ್ರಕಟಿಸಲಾಗುತ್ತದೆ.
ಈ ಫೋನ್ನೊಂದಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ ಫೋನ್(Samsung Galaxy Z Flip Phone) ಅನ್ನೂ ಸಹ ಲಾಂಚ್ ಮಾಡಲಾಗಿದ್ದು, ಇದು 5 7.6 ಇಂಚಿನ QXGA+ ಡೈನಾಮಿಕ್ ಅಮೋಲೆಡ್ 2X ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಜೊತೆಗೆ 2,176x1,812 ಪಿಕ್ಸೆಲ್ಗಳ ರೆಸಲ್ಯೂಶನ್, 21.6:18 ಆಕಾರ ಅನುಪಾತ, 374ppi ಮತ್ತು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಮತ್ತೊಂದು ಬದಿಯ ಡಿಸ್ಪ್ಲೇ 6.2 ಇಂಚಿನಿಂದ ಕೂಡಿದ್ದು, ಇದು HD+ ಡೈನಾಮಿಕ್ ಅಮೋಲೆಡ್ ಡಿಸ್ಪ್ಲೇ ಆಗಿದೆ.
Samsung Galaxy z flip 5 with 120hz amoled display launched know specs price details.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm