ಬ್ರೇಕಿಂಗ್ ನ್ಯೂಸ್
24-07-23 10:09 pm Source: Gizbot Kannada ಡಿಜಿಟಲ್ ಟೆಕ್
ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಇದೇ ಕಾರಣಕ್ಕೆ ಹಲವು ಬ್ರ್ಯಾಂಡ್ಗಳು ಭಾರತದಲ್ಲಿ ತಮ್ಮ ವಿಭಿನ್ನ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಲೇ ಬಂದಿವೆ. ಆಕರ್ಷಕ ಸ್ಮಾರ್ಟ್ಫೋನ್ಗಳ ಮೂಲಕ ಸ್ಮಾರ್ಟ್ಫೋನ್ ಪ್ರಿಯರನ್ನು ಸೆಳೆಯುವ ಪ್ರಯತ್ನ ನಡೆಸುತ್ತಲೇ ಬಂದಿವೆ.
ಹೌದು, ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿನಿತ್ಯವೂ ಹೊಸ ಸ್ಮಾರ್ಟ್ಫೋನ್ಗಳ ಭರಾಟೆ ಜೋರಾಗಿಯೇ ಇದೆ. ಇವುಗಳಲ್ಲಿ ಸ್ಯಾಮ್ಸಂಗ್, ಶಿಯೋಮಿ, ಒಪ್ಪೋ, ವಿವೋ, ರಿಯಲ್ಮಿ ಬ್ರ್ಯಾಂಡ್ ಸ್ಮಾರ್ಟ್ಫೋನ್ಗಳು ಸಾಕಷ್ಟು ಡಿಮ್ಯಾಂಡ್ ಪಡೆದುಕೊಂಡಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅನೇಕ ಸ್ಮಾರ್ಟ್ಫೋನ್ಗಳು ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿವೆ. ಹಾಗಾದ್ರೆ ಜುಲೈ 2023ರಲ್ಲಿ ಸೌಂಡ್ ಮಾಡ್ತಿರೋ ಸ್ಮಾರ್ಟ್ಫೋನ್ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ರಿಯಲ್ಮಿ C53
ಪ್ರಸ್ತುತ ಭಾರತದ ಟೆಕ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಫೋನ್ಗಳಲ್ಲಿ ರಿಯಲ್ಮಿ C53 ಕೂಡ ಒಂದಾಗಿದೆ. ಈ ಸ್ಮಾರ್ಟ್ಫೋನ್ 6.74 ಇಂಚಿನ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು ಯುನಿಸೋಕ್ T612 SoC ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಸೆಟ್ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯ ಬ್ಯಾಟರಿಯನ್ನು ಒಳಗೊಂಡಿದೆ. ಇದರ ಬೇಸ್ ಮಾಡೆಲ್ 9,999ರೂ. ಬೆಲೆಯನ್ನು ಹೊಂದಿದೆ. ಇದೇ ಜುಲೈ 26 ರಂದು ರಿಯಲ್ಮಿ.ಕಾಮ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದೆ.
ಒನ್ಪ್ಲಸ್ ನಾರ್ಡ್ 3 5G
ಒನ್ಪ್ಲಸ್ ನಾರ್ಡ್ 3 ಸ್ಮಾರ್ಟ್ಫೋನ್ 6.74 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇನ್ನು ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ Sony IMX890 ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ 8GB+128GB RAM ಸ್ಟೋರೇಜ್ ಆಯ್ಕೆಗೆ 33,999ರೂ.ಬೆಲೆಯನ್ನು ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M34
ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್ಫೋನ್ 6.5 ಇಂಚಿನ ಹೆಚ್ಡಿ ಪ್ಲಸ್ ಅಮೊಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ Exynos 1280 SoC ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದ್ದು, ಜೊತೆಗೆ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಹೊಂದಿದೆ. ಈ ಸ್ಮಾರ್ಟ್ಫೋನ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಆಗಿದೆ. ಜೊತೆಗೆ 13 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಅನ್ನು ಹೊಂದಿದೆ. ಇದರ ಬೇಸ್ ಮಾಡೆಲ್ 18,999ರೂ.ಬೆಲೆಯಲ್ಲಿ ಲಭ್ಯವಿದೆ.
ರಿಯಲ್ಮಿ ನಾರ್ಜೋ 60 5G
ರಿಯಲ್ಮಿ ನಾರ್ಜೋ 60 5G ಸ್ಮಾರ್ಟ್ಫೋನ್ 6.43 ಇಂಚಿನ ಫುಲ್ HD+ AMOLED ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್ಫೋನ್ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಮೇನ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W SuperVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ಫೋನ್ನ 8GB + 256GB ಸ್ಟೋರೇಜ್ ವೇರಿಯಂಟ್ ಬೆಲೆಯು 19,999ರೂ. ಆಗಿದೆ.
These smartphones have created a huge trend in india.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm