ಬ್ರೇಕಿಂಗ್ ನ್ಯೂಸ್
14-07-23 07:43 pm Source: Gizbot Kannada ಡಿಜಿಟಲ್ ಟೆಕ್
ಟೆಕ್ ಮಾರುಕಟ್ಟೆಯಲ್ಲಿ ಸದ್ಯ ಸ್ಮಾರ್ಟ್ಫೋನ್ ನಂತೆ ಇತರೆ ಡಿವೈಸ್ಗಳಿಗೂ ಬೇಡಿಕೆ ಇದೆ. ಆ ಪೈಕಿ ಟ್ಯಾಬ್ಲೆಟ್ ಸಾಧನವು ಒಂದಾಗಿದ್ದು, ಭಿನ್ನ ಫೀಚರ್ಸ್ಗಳ ಟ್ಯಾಬ್ಗಳು ಮಾರುಕಟ್ಟೆಯಲ್ಲಿ ಇವೆ. ಈ ನಿಟ್ಟಿನಲ್ಲಿ ಲೆನೊವೊ ಸಂಸ್ಥೆಯ ಸಹ ಹೊಸದೊಂದು ಟ್ಯಾಬ್ ಬಿಡುಗಡೆ ಮಾಡಿದ್ದು, ಈ ಟ್ಯಾಬ್ 7700mAh ಬ್ಯಾಟರಿ ಬ್ಯಾಕ್ಅಪ್ ಬಲದೊಂದಿಗೆ ಗ್ರಾಹಕರ ಗಮನ ಸೆಳೆದಿದೆ.
ಹೌದು, ಜನಪ್ರಿಯ ಲೆನೊವೊ ಸಂಸ್ಥೆಯು ನೂತನವಾಗಿ ಲೆನೊವೊ ಟ್ಯಾಬ್ M10 5G (Lenovo Tab M10 5G) ಡಿವೈಸ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಟ್ಯಾಬ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 695 SoC ಪ್ರೊಸೆಸರ್ ಪಡೆದಿದ್ದು, 128GB ಆಂತರೀಕ ಸ್ಟೋರೇಜ್ ಆಯ್ಕೆ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಸಾಧನವು 5G ಬೆಂಬಲ ಪಡೆದಿರುವುದು ಮತ್ತೊಂದು ಪ್ರಮುಖ ಹೈಲೈಟ್ ಆಗಿದೆ.
ಹಾಗೆಯೇ ಲೆನೊವೊ ಸಂಸ್ಥೆಯ ಈ ಹೊಸ ಟ್ಯಾಬ್ ಡಿಸ್ಪ್ಲೇಯು 1200 x 2000 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, ಡ್ಯುಯಲ್ ಸ್ಪೀಕರ್ ಸೌಲಭ್ಯ ಸಹ ಒಳಗೊಂಡಿದೆ. ಇನ್ನು ಬಾಹ್ಯ ಮೆಮೊರಿಯನ್ನು ಸುಮಾರು 1TB ವರೆಗೂ ವಿಸ್ತರಿಸುವ ಅವಕಾಶ ಪಡೆದಿದೆ. ಹಾಗಾದರೇ ಲೆನೊವೊ ಟ್ಯಾಬ್ M10 5G ಸಾಧನದ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಲೆನೊವೊ ಸಂಸ್ಥೆಯ ಹೊಸ M10 5G ಟ್ಯಾಬ್ 1200 x 2000 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 10.61 ಇಂಚಿನ ಡಿಸ್ಪ್ಲೇ ಹೊಂದಿದ್ದು, ಈ ಡಿಸ್ಪ್ಲೇಯು ಐಪಿಎಸ್ ಎಲ್ಸಿಡಿ ಸ್ಕ್ರೀನ್ ಆಗಿದೆ. ಹಾಗೆಯೇ 60Hz ರಿಫ್ರೆಶ್ ರೇಟ್ ಹೊಂದಿದ್ದು, 400 nits ಬ್ರೈಟ್ನೆಸ್ ಸಪೋರ್ಟ್ ಸಹ ಪಡೆದಿದೆ.
ಇನ್ನು ಈ ಟ್ಯಾಬ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 695 SoC ಪ್ರೊಸೆಸರ್ ಪಡೆದಿದ್ದು, 4GB + 128GB ಮತ್ತು 6GB + 128GB ಆಂತರೀಕ ಸ್ಟೋರೇಜ್ ಆಯ್ಕೆ ಅನ್ನು ಒಳಗೊಂಡಿದೆ. ಅಲ್ಲದೇ ಈ ಡಿವೈಸ್ ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ.
ಲೆನೊವೊ ಕಂಪೆನಿಯ ಹೊಸ M10 5G ಟ್ಯಾಬ್ ಹಿಂಭಾಗದಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಆ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಸೆನ್ಸಾರ್ನ ಕ್ಯಾಮೆರಾ ಒದಗಿಸಲಾಗಿದೆ.
ಈ ಟ್ಯಾಬ್ನ ಪ್ರಮುಖ ಹೈಲೈಟ್ ಎಂದರೆ ಅದು ಬ್ಯಾಟರಿ ಆಗಿದ್ದು, ಇದು 7700mAh ಬ್ಯಾಟರಿ ಬ್ಯಾಕ್ಅಪ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, ಸುಮಾರು 12 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್ ಟೈಮ್ ಸಿಗಲಿದೆ. ಹಾಗೆಯೇ 11 ಗಂಟೆಗಳ ಬ್ರೌಸಿಂಗ್ ಟೈಮ್ ಸಹ ದೊರೆಯಲಿದೆ ಎಂದು ಕಂಪನಿ ಹೇಳಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಬ್ಲೂಟೂತ್ 5.1, ಆಂಡ್ರಾಯ್ಡ್ 13, ನ್ಯಾನೋ ಸಿಮ್ ಕಾರ್ಡ್ ಸ್ಲಾಟ್ ಇದೆ.
ಮೆಮೊರಿ ಆಯ್ಕೆ ಮತ್ತು ಬೆಲೆ ಮಾಹಿತಿ :
ಲೆನೊವೊ ತನ್ನ ನೂತನ ಟ್ಯಾಬ್ M10 5G ಅನ್ನು ಎರಡು ವೇರಿಯಂಟ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. 4GB RAM ಮತ್ತು 128GB ವೇರಿಯಂಟ್ ಬೆಲೆಯು 24,999 ರೂ. ಆಗಿದೆ. ಹಾಗೆಯೇ 128GB ವೇರಿಯಂಟ್ ಆಯ್ಕೆಯಲ್ಲಿಯೂ ಖರೀದಿಸಬಹುದಾಗಿದೆ. 6GB RAM ವೇರಿಯಂಟ್ ಡಿವೈಸ್ನ ಬೆಲೆಯು ಜುಲೈ 15 ರಂದು ಲಭ್ಯವಿರುತ್ತದೆ.
Lenovo Tab m10 5g with 7700mah Battery Launched Price Specifications.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm