ಬ್ರೇಕಿಂಗ್ ನ್ಯೂಸ್
30-05-23 06:43 pm Source: Gizbot ಡಿಜಿಟಲ್ ಟೆಕ್
ಟಿವಿ ಅನ್ನೊದು ಇಂದು ಕೇವಲ ಮನರಂಜನಾ ಸಾಧನವಾಗಿ ಉಳಿದಿಲ್ಲ. ಇಂದಿನ ತಾಂತ್ರಿಕ ಯುಗದಲ್ಲಿ ಟಿವಿಗಳ ವಿನ್ಯಾಸ ಬದಲಾಗಿದೆ. ಸ್ಮಾರ್ಟ್ಟಿವಿಗಳ ಅಬ್ಬರ ಜೋರಾಗಿದ್ದು, ಮಲ್ಟಿ ಟಾಸ್ಕ್ ನಿರ್ವಹಿಸಬಲ್ಲ ಟಿವಿಗಳು ಹೆಚ್ಚಿನ ಪ್ರಮಾಣದಲ್ಲಿ ಗಮನಸೆಳೆದಿವೆ. ಈ ಸಾಲಿನಲ್ಲಿ ಥಾಮ್ಸನ್ ಬ್ರ್ಯಾಂಡ್ನ ಸ್ಮಾರ್ಟ್ಟಿವಿಗಳು ಕೂಡ ಸೇರಿವೆ.
ಹೌದು, ಥಾಮ್ಸನ್ ಸ್ಮಾರ್ಟ್ಟಿವಿಗಳು ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಮಿಡ್ರೇಂಜ್ ಪ್ರೈಸ್ಟ್ಯಾಗ್ನಲ್ಲಿ ಸ್ಮಾರ್ಟ್ಟಿವಿ ಖರೀದಿಸಲು ಬಯಸೋರಿಗೆ ಥಾಮ್ಸನ್ ಬ್ರ್ಯಾಂಡ್ ನೆಚ್ಚಿನ ಆಯ್ಕೆ ಎನಿಸಿಕೊಂಡಿದೆ. ಇದಕ್ಕೆ ಅನುಗುಣವಾಗಿ ಹಲವು ಸ್ಮಾರ್ಟ್ಟಿವಿಗಳನ್ನು ಥಾಮ್ಸನ್ ಭಾರತದಲ್ಲಿ ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ 50 ಇಂಚಿನ 4K LED ಟಿವಿ ಹಾಗೂ 43 ಇಂಚಿನ 4K LED ಸ್ಮಾರ್ಟ್ಟಿವಿಗಳನ್ನು ಲಾಂಚ್ ಮಾಡಿದೆ. ಹಾಗಾದ್ರೆ ಈ ಹೊಸ ಸ್ಮಾರ್ಟ್ಟಿವಿಗಳು ಯಾವೆಲ್ಲಾ ಫೀಚರ್ಸ್ ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಥಾಮ್ಸನ್ 50 ಇಂಚಿನ ಮತ್ತು 43 ಇಂಚಿನ 4K LED TV ವಿಶೇಷತೆ ಏನು?
ಥಾಮ್ಸನ್ ಬಿಡುಗಡೆ ಮಾಡಿರುವ ಈ ಎರಡು ಸ್ಮಾರ್ಟ್ಟಿವಿಗಳು ಕೂಡ ಗೂಗಲ್ ಟಿವಿ OS ನಲ್ಲಿ ರನ್ ಆಗಲಿವೆ. ಈ ಸ್ಮಾರ್ಟ್ಟಿವಿಗಳು ಸ್ಲಿಮ್ ಬೆಜೆಲ್ಗಳನ್ನು ಹೊಂದಿವೆ. ಅಲ್ಲದೆ ವೀಕ್ಷಣೆ ಮತ್ತು ಆಡಿಯೊ ಆಲಿಸುವ ಅನುಭವವನ್ನು ಹೆಚ್ಚಿಸಲು ಡಾಲ್ಬಿ ವಿಷನ್ HDR 10+, ಡಾಲ್ಬಿ ಅಟ್ಮಾಸ್, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು ಡಿಟಿಎಸ್ ಟ್ರೂಸರೌಂಡ್ ಬೆಂಬಲವನ್ನು ಪಡೆದಿವೆ. ಜೊತೆಗೆ ಸ್ಮಾರ್ಟ್ಟಿವಿಗಳು 2GB RAM ಮತ್ತು 16GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿವೆ.
![]()
ಇನ್ನು ಸ್ಮಾರ್ಟ್ಟಿವಿಗಳಲ್ಲಿ 40W ಸ್ಪೀಕರ್ಗಳನ್ನು ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ (2.4GHz + 5GHz) ವೈ-ಫೈ ಮತ್ತು ಬ್ಲೂಟೂತ್ ಬೆಂಬಲವನ್ನು ಸಹ ಹೊಂದಿದೆ. ಇದರಲ್ಲಿ ಕ್ರೋಮ್ಕಾಸ್ಟ್ ಬೆಂಬಲವನ್ನು ಕೂಡ ನೀಡಲಾಗಿದ್ದು, ಸ್ಮಾರ್ಟ್ಟಿವಿಗೆ ಲ್ಯಾಪ್ಟಾಪ್ ಅಥವಾ ಮೊಬೈಲ್ ಅನ್ನು ಕನೆಕ್ಟ್ ಮಾಡಲು ಸಾದ್ಯವಾಗಲಿದೆ. ಅಲ್ಲದೆ ಮೊಬೈಲ್ನಲ್ಲಿರುವ ವೀಡಿಯೊಗಳನ್ನು ಟಿವಿಯಲ್ಲಿ ಪ್ಲೇ ಮಾಡುವುದಕ್ಕೆ ಅವಕಾಶ ಸಿಗಲಿದೆ.
ಥಾಮ್ಸನ್ 4K ಟಿವಿಗಳು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ಗಳನ್ನು ಒಳಗೊಂಡಿವೆ. ಇದಕ್ಕಾಗಿ ಸ್ಮಾರ್ಟ್ಟಿವಿಯೊಂದಿಗೆ ಬರುವ ಬ್ಲೂಟೂತ್ ರಿಮೋಟ್ನಲ್ಲಿ ಹಾಟ್ಕೀಗಳನ್ನು ನೀಡಲಾಗಿದೆ. ಇದರ ಮೂಲಕ ನೀವು ನೆಟ್ಫ್ಲಿಕ್ಸ್, ಯೂಟ್ಯೂಬ್, ಗೂಗಲ್ ಪ್ಲೇ ಮತ್ತು ಅಮೆಜಾನ್ ಪ್ರೈಮ್ ವೀಡಿಯೊ ಅಪ್ಲಿಕೇಶನ್ಗಳಿಗೆ ಪ್ರವೇಶಿಸಬಹುದು. ಜೊತೆಗೆ ಅಪ್ಲಿಕೇಶನ್ಗಳು ಮತ್ತು ವೀಡಿಯೊಗಳನ್ನು ವಾಯ್ಸ್ ಕಂಟ್ರೋಲ್ ಮೂಲಕ ಆಕ್ಟಿವ್ ಮಾಡುವುದಕ್ಕೆ ಗೂಗಲ್ ಅಸಿಸ್ಟೆಂಟ್ ಅನ್ನು ಸಹ ಬೆಂಬಲಿಸಲಿದೆ.
ಇನ್ನು ಥಾಮ್ಸನ್ ಸಂಸ್ಥೆ ಪರಿಚಯಿಸಿರುವ ಈ ಹೊಸ ಸ್ಮಾರ್ಟ್ಟಿವಿಗಳು ಕಸ್ಟಮೈಸ್ಡ್ ಮಾಡಿದ ಹೋಮ್ ಸ್ಕ್ರೀನ್ಗಳನ್ನು ನೀಡುತ್ತವೆ. ಅಲ್ಲದೆ ಪ್ರತಿ ಬಳಕೆದಾರರಿಗೆ ಹೊಸ ನೋಟಿಫಿಕೇಶನ್ಗಳನ್ನು ಸಹ ನೀಡಲಿವೆ. ಜೊತೆಗೆ ಮಕ್ಕಳು ಪ್ರವೇಶಿಸಬಾರದಂತಹ ಚಾನಲ್ಗಳಿಗೆ ನಿರ್ಬಂಧ ಹೇರುವುದಕ್ಕೆ ಅವಕಾಶ ನೀಡಿದ್ದು, ಇದಕ್ಕಾಗಿ ಮಕ್ಕಳ ಪ್ರೊಫೈಲ್ಗಳನ್ನು ಸಹ ಕ್ರಿಯೆಟ್ ಮಾಡಬಹುದಾಗಿದೆ.

ಥಾಮ್ಸನ್ 4K ಟಿವಿಗಳ ಬೆಲೆ ಎಷ್ಟಿದೆ?
ಭಾರತದಲ್ಲಿ ಬಿಡುಗಡೆಯಾಗಿರುವ ಥಾಮ್ಸನ್ 4K ಟಿವಿಗಳು ಫ್ಲಿಪ್ಕಾರ್ಟ್ನಲ್ಲಿ ಬ್ಯಾಂಕ್ ಆಫರ್ ಮೂಲಕ ಲಭ್ಯವಿದೆ. ಇದರಲ್ಲಿ ಥಾಮ್ಸನ್ 50 ಇಂಚಿನ 4K LED ಟಿವಿ 27,999 ರೂ. ಬೆಲೆಯಲ್ಲಿ ಬರಲಿದೆ. ಇನ್ನು ಥಾಮ್ಸನ್ 43 ಇಂಚಿನ ಟಿವಿಯು 22,999ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್ಟಿವಿಗಳನ್ನು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ಡಿಸ್ಕೌಂಟ್ ದೊರೆಯಲಿದೆ. ಅಲ್ಲದೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟಿನ ಮೇಲೆ ಫ್ಲಾಟ್ 1,250ರೂ. ರಿಯಾಯಿತಿ ಕೂಡ ಲಭ್ಯವಿದೆ.
thomson 50 inch 4k smart tv with google tv os launched price details in india.
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
26-10-25 04:42 pm
Mangalore Correspondent
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm