ಬ್ರೇಕಿಂಗ್ ನ್ಯೂಸ್
01-05-23 08:22 pm Source: Vijayakarnataka ಡಿಜಿಟಲ್ ಟೆಕ್
WhatsApp ಬಳಕೆದಾರರು ತಮ್ಮ ಫಿಂಗರ್ಪ್ರಿಂಟ್ ಅಥವಾ ಪಾಸ್ಕೋಡ್ ಬಳಸಿಕೊಂಡು ನಿರ್ದಿಷ್ಟ ಚಾಟ್ಗಳನ್ನು ಲಾಕ್ ಮಾಡುವ ಬಹುನಿರೀಕ್ಷಿತ ವೈಶಿಷ್ಟ್ಯವು ಇದೀಗ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ.! WhatsApp "ಲಾಕ್ ಚಾಟ್"(Lock Chat) ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದ್ದು, ಇದು ಗೌಪ್ಯತೆಯನ್ನು ಹೆಚ್ಚಿಸಲು ಬಳಕೆದಾರರಿಗೆ ನಿರ್ದಿಷ್ಟ ಚಾಟ್ ಅನ್ನು ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಪ್ರಮುಖ ಟೆಕ್ ಮಾಧ್ಯಮ ವರದಿಗಳ ಪ್ರಕಾರ, ಕೆಲ WhatsApp ಬೀಟಾ ಪರೀಕ್ಷಕರು ಈಗಾಗಲೇ ಈ ಹೊಸ ಲಾಕ್ ಚಾಟ್ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುತ್ತಿದ್ದು, ಇದರ ಸಹಾಯದಿಂದ ಸಂಪೂರ್ಣ ಅಪ್ಲಿಕೇಶನ್ ಲಾಕ್ ಮಾಡದೆಯೇ ನಿರ್ದಿಷ್ಟ ಚಾಟ್ ಲಾಕ್ ಮಾಡಲು ಅನುಮತಿ ದೊರೆತಿದೆ ಎಂದು ತಿಳಿದುಬಂದಿದೆ.
WhatsApp ಬಳಕೆದಾರರು "ಚಾಟ್ ಲಾಕ್" ವೈಶಿಷ್ಟ್ಯವನ್ನು ಬಳಸಿಕೊಂಡು ನಿರ್ದಿಷ್ಟ ಚಾಟ್ಗಳನ್ನು ಲಾಕ್ ಮಾಡಲು WhatsApp ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗವನ್ನು ತೆರೆಯಬೇಕು. ಇಲ್ಲಿ ಕೆಳಗೆ ಸ್ಕ್ರಾಲ್ ಮಾಡಿದಾಗ "ಚಾಟ್ ಲಾಕ್" ವೈಶಿಷ್ಟ್ಯವು ಕಾಣಿಸುತ್ತದೆ. ಇದನ್ನು ಟ್ಯಾಪ್ ಮಾಡಿದರೆ "ಲಾಕ್ ದಿಸ್ ಚಾಟ್ ವಿತ್ ಫಿಂಗರ್ಪ್ರಿಂಟ್" ಆಯ್ಕೆಯನ್ನು ಸಕ್ರಿಯಗೊಳಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ. ಮುಂಬರುವ ವಾರಗಳಲ್ಲಿ ಎಲ್ಲಾ WhatsApp ಬಳಕೆದಾರಿಗೆ ಲಭ್ಯವಾಗಲಿರುವ ಈ ಹೊಸ ಅಪ್ಡೇಟ್ ಪರೀಕ್ಷೆಯ ಹಂತದಲ್ಲಿದ್ದು, ಬಳಕೆದಾರರು ಮುಂಚಿತವಾಗಿ ಈ ವೈಶಿಷ್ಟ್ಯವನ್ನು ಪ್ರಯತ್ನಿಸಲು Play Store ನಲ್ಲಿ WhatsApp ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಬಹುದು, ಆದರೆ ಪ್ರೋಗ್ರಾಂನಲ್ಲಿ ಭಾಗವಹಿಸುವಿಕೆಯು ಸೀಮಿತವಾಗಿದೆ.
ಇತ್ತೀಚಿಗಷ್ಟೇ ಜನಪ್ರಿಯ ವಾಟ್ಸಾಪ್ ಬೀಟಾ ಟ್ರ್ಯಾಕರ್ WABetaInfo ವೆಬ್ಸೈಟ್ ಲಾಕ್ ಚಾಟ್ ವೈಶಿಷ್ಟ್ಯದ ಕುರಿತು ವರದಿ ಮಾಡಿತ್ತು. WhatsApp ಬಳಕೆದಾರರು ತಮ್ಮ ಫಿಂಗರ್ಪ್ರಿಂಟ್ ಅಥವಾ ಪಾಸ್ಕೋಡ್ ಬಳಸಿಕೊಂಡು ನಿರ್ದಿಷ್ಟ ಚಾಟ್ಗಳನ್ನು ಲಾಕ್ ಮಾಡುವ ವೈಶಿಷ್ಟ್ಯವೊಂದನ್ನು ಗುರುತಿಸಿರುವುದಾಗಿ ಹೇಳಿತ್ತು. ಆಂಡ್ರಾಯ್ಡ್ 2.23.8.2 ಅಪ್ಡೇಟ್ನಲ್ಲಿ ಈ ಹೊಸ ವೈಶಿಷ್ಟ್ಯವು ಕಂಡುಬಂದಿದ್ದು, "ಈ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಸೂಕ್ಷ್ಮ ಸಂಭಾಷಣೆಗಳನ್ನು ಗೂಢಾಚಾರಿಕೆಯ ಕಣ್ಣುಗಳಿಂದ ಸುರಕ್ಷಿತವಾಗಿರಿಸುವ ಮೂಲಕ ಹೆಚ್ಚುವರಿ ಭದ್ರತೆಯನ್ನು ಹೊಂದಬಹುದು ಎಂದು ನಮಗೆ ಖಚಿತವಾಗಿದೆ" ಎಂದು ಹೇಳಿತ್ತು. ಇದೀಗ ಈ ವೈಶಿಷ್ಟ್ಯವು WhatsApp ಬೀಟಾ ಬಳಕೆದಾರರಿಗೆ ದೊರೆತಿರುವುದು ಸಂತಸದ ವಿಷಯವಾಗಿದೆ.
ನಾಲ್ಕು ಫೋನ್ಗಳಲ್ಲಿ ಒಂದೇ WhatsApp ಖಾತೆ!
ಒಂದು WhatsApp ಖಾತೆಯನ್ನು ಒಂದೇ ಸಮಯದಲ್ಲಿ ನಾಲ್ಕು ಫೋನ್ಗಳಲ್ಲಿ ಬಳಸಬಹುದಾದ ಬಹುನಿರೀಕ್ಷಿತ ವೈಶಿಷ್ಟ್ಯವು ಇದೀಗ WhatsApp ಅಪ್ಲಿಕೇಶನ್ನಲ್ಲಿ ಮೊನ್ನೆಮೊನ್ನೆಯಷ್ಟೇ ಲೈವ್ ಆಗಿದೆ. ಈ ಹಿಂದೆ ಒಂದು WhatsApp ಖಾತೆಯನ್ನು ಒಂದು ಫೋನ್ ಜೊತೆಗೆ ಕಂಪ್ಯೂಟರ್ನಲ್ಲಿ ಮಾತ್ರ ಲಾಗಿನ್ ಮಾಡಬಹುದಾಗಿತ್ತು. ಎರಡು ಫೋನ್ಗಳನ್ನು ಹೊಂದಿರುವ WhatsApp ಗ್ರಾಹಕರು ಏಕಕಾಲದಲ್ಲಿ ಒಂದೇ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ 'ಒಂದು WhatsApp ಖಾತೆ ಈಗ ಮಲ್ಟಿಪಲ್ ಫೋನ್ಗಳಲ್ಲಿ' ಎಂದು ವಿರಿಸಲಾಗಿರುವ ವೈಶಿಷ್ಟ್ಯದಲ್ಲಿ WhatsApp ನಲ್ಲಿ ಕಾಣಿಸಿಕೊಂಡಿದೆ. ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಎರಡು ಫೋನ್ಗಳಲ್ಲಿ ಏಕಕಾಲದಲ್ಲಿ ಒಂದೇ ಅಕೌಂಟ್ ಬಳಸಲು ಸಾಧ್ಯವಾಗಲಿದೆ.
ಈ ಹೊಸ ಫೀಚರ್ ಬಳಸಲು ನಿಮ್ಮ ಎಲ್ಲಾ ಫೋನ್ಗಳಲ್ಲಿ ಇತ್ತೀಚಿನ WhatsApp ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ನಿಮ್ಮ ಎರಡನೇ ಪೋನ್ನಲ್ಲಿ ವಾಟ್ಸಾಪ್ ಖಾತೆಗೆ ಲಾಗಿನ್ ಆಗುವ ಈ ಹೊಸ ವಿಧಾನದಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗುವ ಅವಶ್ಯಕತೆ ಇಲ್ಲ. ಬದಲಾಗಿ ನಿಮ್ಮ ಪ್ರೈಮರಿ ಪೋನ್ WhatsApp ಖಾತೆಯನ್ನು ತೆರೆದು ಅಪ್ಲಿಕೇಶನ್ ಮೇಲ್ ಬಲಭಾಗದಲ್ಲಿರುವ ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿದರೆ , ಅಲ್ಲಿ 'ಅಸ್ತಿತ್ವದಲ್ಲಿರುವ ಖಾತೆಗೆ ಲಿಂಕ್' ಎಂಬ ಲಿಂಕ್ ಕಾಣಿಸುತ್ತದೆ. ಇದನ್ನು ಟ್ಯಾಪ್ ಮಾಡಿದರೆ QR ಕೋಡ್ ತೆರೆಯುತ್ತದೆ. ಇದನ್ನು ನಿಮ್ಮ ಪ್ರೈಮರಿ ಫೋನ್ನಲ್ಲಿ ಒಮ್ಮೆ ಸ್ಕ್ಯಾನ್ ಮಾಡಿದರೆ ನಿಮ್ಮ ಎರಡನೇ ಫೋನ್ನಲ್ಲಿ ನಿಮ್ಮ ಪ್ರಸ್ತುತ WhatsApp ಖಾತೆಯು ಲಾಗಿನ್ ಆಗಲಿದೆ.
whatsapp launches chat lock to increase privacy check all details.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
29-04-25 12:40 pm
Mangalore Correspondent
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
Mangalore, Terror Attack, Doctor Post: ಹೈಲ್ಯಾ...
27-04-25 11:09 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm