ಬ್ರೇಕಿಂಗ್ ನ್ಯೂಸ್
29-04-23 08:14 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ 5G ಸ್ಮಾರ್ಟ್ಫೋನ್ಗಳಿಂದ ಭಾರೀ ಸದ್ದು ಮಾಡುತ್ತಿರುವ ದೇಶೀಯ ಮೊಬೈಲ್ ಬ್ರ್ಯಾಂಡ್ ಲಾವಾ (Lava) ಇದೀಗ Lava Blaze 1X 5G ಹೆಸರಿನ ಮತ್ತೊಂದು ಬಜೆಟ್ 5G ಸ್ಮಾರ್ಟ್ಫೋನ್ ಬಿಡುಗಡೆಗೆ ಸಜ್ಜಾಗಿದೆ. ಲಾವಾ ಕಂಪೆನಿಯ ಅಧಿಕೃತ ವೆಬ್ಸೈಟ್ನಲ್ಲಿ ಲಾವಾ ಬ್ಲೇಜ್ ಸರಣಿ ಪಟ್ಟಿಯಲ್ಲಿ ಹೊಸದಾಗಿ ಈ Lava Blaze 1X 5G ಸ್ಮಾರ್ಟ್ಫೋನ್ ಕಾಣಿಸಿಕೊಂಡಿದ್ದು, ಈ ಸ್ಮಾರ್ಟ್ಫೋನ್ ಹೊಂದಿರಲಿರುವ ಎಲ್ಲಾ ವಿವರವಾದ ವೈಶಿಷ್ಟ್ಯಗಳು ಮತ್ತು ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ. ಹಾಗಾದರೆ, ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಹೊಸ Lava Blaze 1X 5G ಸ್ಮಾರ್ಟ್ಫೋನ್ ಹೇಗಿದೆ ಮತ್ತು ಬೆಲೆ ಎಷ್ಟಿರಬಹುದು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
ಹೇಗಿದೆ Lava Blaze 1X 5G ಸ್ಮಾರ್ಟ್ಫೋನ್?
ಲಾವಾ ಕಂಪೆನಿಯ ಅಧಿಕೃತ ವೆಬ್ಸೈಟ್ನಲ್ಲಿ ಪಟ್ಟಿ ಮಾಡಿರುವ ಹೊಸ Lava Blaze 1X 5G ಸ್ಮಾರ್ಟ್ಫೋನ್ ಇತ್ತೀಚಿಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ Lava Blaze 5G ಸ್ಮಾರ್ಟ್ಫೋನಿನ ವಿನ್ಯಾಸವನ್ನೇ ಹೊಂದಿರುವಂತೆ ಕಾಣಿಸುತ್ತಿದೆ. ಆದರೆ, ಈ ಡಿವೈಸ್ ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಗ್ರೀನ್ ಬಣ್ಣಗಳಲ್ಲಿ ಬರಲಿದೆ ಎಂದು ಸೂಚಿಸಲಾಗಿದೆ. ಇನ್ನು ಈ Lava Blaze 1X 5G ಸ್ಮಾರ್ಟ್ಪೋನ್ 90Hz ರಿಫ್ರೆಶ್ ರೇಟ್ ಮತ್ತು 2.5D ಕರ್ವ್ಡ್ ಗ್ಲಾಸ್ ಜೊತೆಗೆ Widevine L1 ಬೆಂಬಲವಿರುವ 6.5 ಇಂಚಿನ HD+ IPS ಡಿಸ್ಪ್ಲೇ ಹೊಂದಿದೆ. ಮತ್ತು Lava Blaze 5G ಸ್ಮಾರ್ಟ್ಫೋನಿನಂತೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ನಿಂದ ಚಾಲಿತವಾಗಿದೆ ಎಂದು ತಿಳಿಸಲಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ Lava Blaze 1X 5G ಸ್ಮಾರ್ಟ್ಫೋನ್ ಫ್ಲಾಶ್ ಲೈಟ್ ಜೊತೆಗೆ 50 MP ಸಾಮರ್ಥ್ಯದ AI ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 2MP ಡೆಪ್ತ್ ಸೆನ್ಸಾರ್ ಮತ್ತು ಒಂದು VGA ಸಂವೇದಕಗಳಿಂದ ಶಕ್ತವಾಗದೆ. ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ, ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ. ಸ್ಮಾರ್ಟ್ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ 5.1, GPS, 3.5mm ಹೆಡ್ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್ಗಾಗಿ USB-C ಪೋರ್ಟ್ ವೈಶಿಷ್ಟ್ಯಗಳಿವೆ. ಬ್ಯಾಟರಿ ವಿಭಾಗದಲ್ಲಿ, 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಗ್ರಾಹಕರು ಬಾಕ್ಸ್ ಒಳಗೆ 12W ಚಾರ್ಜರ್ ಪಡೆಯಲಿದ್ದಾರೆ.
ವಿಶೇಷವೆಂದರೆ, Lava Blaze 1X 5G ಸ್ಮಾರ್ಟ್ಫೋನ್ ಕಳೆದ Lava Blaze 5G ಗಿಂತ 4GB ಹೆಚ್ಚುವರಿ RAM ನೊಂದಿಗೆ ಬರಲಿದೆ.! ಕಳೆದ Lava Blaze 5G ಸ್ಮಾರ್ಟ್ಫೋನಿನಲ್ಲಿ 3GB ವರ್ಚುವಲ್ RAM ಬೆಂಬಲದೊಂದಿಗೆ 4GB RAM ನೀಡಲಾಗಿತ್ತು. ಆದರೆ, ಈ ಹೊಸ Blaze 1X 5G ಸ್ಮಾರ್ಟ್ಫೋನಿನಲ್ಲಿ 5GB ವರ್ಚುವಲ್ RAM ಬೆಂಬಲದೊಂದಿಗೆ 6GB RAM ಇರಲಿದೆ. ಇದಲ್ಲದೆ, 128GB UFS 2.2 ಆನ್ಬೋರ್ಡ್ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್ಫೋನಿನ ಮೆಮೊರಿಯನ್ನು ಮೈಕ್ರೋ SD ಕಾರ್ಡ್ನೊಂದಿಗೆ 1TB ವರೆಗೆ ವಿಸ್ತರಿಸಬಹುದು. ಇನ್ನು ಹೊಸ Lava ಸ್ಮಾರ್ಟ್ಫೋನ್ ಅನ್ನೌನ್ ಕರೆ ರೆಕಾರ್ಡಿಂಗ್ ವೈಶಿಷ್ಟ್ಯದೊಂದಿಗೆ Android 12 OS ನಲ್ಲಿ ಕಾರ್ಯನಿರ್ವಹಿಸುತ್ತದೆ.
Lava Blaze 1X 5G ಸ್ಮಾರ್ಟ್ಫೋನ್ ಬೆಲೆ ಎಷ್ಟು?
ಲಾವಾ ಕಂಪೆನಿಯ ಅಧಿಕೃತ ವೆಬ್ಸೈಟ್ನಲ್ಲಿ ಈ ಹೊಸ Lava Blaze 1X 5G ಸ್ಮಾರ್ಟ್ಫೋನ್ ವಿನ್ಯಾಸ ಮತ್ತು ಈ ಹೊಂದಿರುವ ವೈಶಿಷ್ಟ್ಯಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿದೆ. ಆದರೆ, ಸ್ಮಾರ್ಟ್ಫೋನ್ ಬೆಲೆ ಎಷ್ಟು ಎಂಬ ಬಗ್ಗೆ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಕೆಲವು ವರದಿಗಳಂತೆ, ಈ Lava Blaze 1X 5G ಸ್ಮಾರ್ಟ್ಫೋನ್ 10 ರಿಂದ 12 ಸಾವಿರ ರೂ. ಬೆಲೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿವೆ.
lava blaze 1x 5g specs, design officially revealed check details.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm