ಬ್ರೇಕಿಂಗ್ ನ್ಯೂಸ್
26-04-23 07:35 pm Source: Vijayakarnataka ಡಿಜಿಟಲ್ ಟೆಕ್
ಒಪ್ಪೊ ಕಂಪೆನಿಯ ಜನಪ್ರಿಯ Reno ಸರಣಿಗೆ ಸೇರಲಿರುವ ಮುಂಬರುವ Reno 10 ಸರಣಿ ಫೋನ್ಗಳು ಇದೇ ಮೊದಲ ಬಾರಿಗೆ ಆನ್ಲೈನಿನಲ್ಲಿ ಕಾಣಿಸಿಕೊಂಡಿವೆ. ಕಳೆದ ನವೆಂಬರ್ 2022ರಲ್ಲಿ ಒಪ್ಪೊ ಪರಿಚಯಿಸಿದ್ದ Reno 9 ಸರಣಿಯು ಯಶಸ್ವಿಯಾದ ಬೆನ್ನಲ್ಲೇ ಇದೀಗ ಇದರ ಉತ್ತರಾಧಿಕಾರಿಯಾಗಿ Reno 10 ಸರಣಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಈಗಾಗಲೇ 3C ಪ್ರಮಾಣೀಕರಣ ವೆಬ್ಸೈಟ್ನಲ್ಲಿ ಮಾಡೆಲ್ ಸಂಖ್ಯೆ PHU110 ಹೆಸರಿನಲ್ಲಿ Oppo Reno 10 ಸರಣಿ ಫೋನ್ಗಳನ್ನು ಗುರುತಿಸಲಾಗಿದೆ. ಮುಂಬರುವ ಈ Reno 10 ಸರಣಿ ಫೋನ್ಗಳು 100W SuperVOOC ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.!
ಹೌದು, ಇದೀಗ ಆನ್ಲೈನಿನಲ್ಲಿ ಸೋರಿಕೆಯಾದ ಚಿತ್ರಗಳ ಮಾಹಿತಿಯಂತೆ, ಮುಂಬರುವ Reno 10 Pro+ ಫೋನ್ ಟೆಕ್ಸ್ಚರ್ಡ್ ಬ್ಯಾಕ್ ಪ್ಯಾನೆಲ್ನಲ್ಲಿ ಎಲಿಪ್ಟಿಕಲ್ ಕ್ಯಾಮೆರಾ ಮಾಡ್ಯೂಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಮೇಲಿನ ಎಡಭಾಗದಲ್ಲಿ ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಸೆಲ್ಫಿ ಕ್ಯಾಮೆರಾಕ್ಕಾಗಿ ಡಿಸ್ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ಹೋಲ್-ಪಂಚ್ ಸ್ಲಾಟ್ ಹೊಂದಿರುವ ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವಂತೆ ಕಾಣುತ್ತಿದೆ. ಇದೀಗ ಸೋರಿಯಾಗಿರುವ Reno 10 Pro+ ಫೋನಿನ ಚಿತ್ರವು ಕಪ್ಪು ಬಣ್ಣದ ಏಕೈಕ ಮಾದರಿಯಲ್ಲಿ ಫೋನ್ ಬಿಡುಗಡೆಯಾಗುವುದನ್ನು ಮಾಧ್ಯಮ ವರದಿಗಳು ಸೂಚಿಸಿದೆ. ಆದರೆ, ಈ ಕುರಿತಂತೆ ಕಂಪೆನಿಯು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಪ್ರಮುಖ ಟೆಕ್ ಮಾಧ್ಯಮ ವರದಿಗಳು ಹೇಳಿರುವಂತೆ, ಮುಂಬರುವ Reno 10 ಸರಣಿಯು ಈ ಬಾರಿ Oppo Reno 10, Reno 10 Pro ಮತ್ತು Reno 10 Pro+ ಮೂರು ಮಾದರಿಯ ಫೋನ್ಗಳನ್ನು ಹೊತ್ತು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. Oppo Reno 9 Pro+ ಫೋನಿನ ಉತ್ತರಾಧಿಕಾರಿಯಾಗಿರುವ ಈ Reno 10 Pro+ ಫೋನಿನಲ್ಲಿ 120Hz ನ ರಿಫ್ರೆಶ್ ರೇಟ್ ಹೊಂದಿರುವ 6.74-ಇಂಚಿನ 1.5K AMOLED ಡಿಸ್ಪ್ಲೇ ಪ್ಯಾನೆಲ್ ಇರಬಹುದು. ಕಾರ್ಯನಿರ್ವಹಣೆ ವಿಭಾಗದಲ್ಲಿ, ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್ನಿಂದ ಚಾಲಿತವಾಗಿರಲಿರುವ ಈ ಉದ್ದೇಶಿತ ಸ್ಮಾರ್ಟ್ಫೋನ್ 12GB RAM ಮತ್ತು 512GB ವರೆಗಿನ ಸ್ಟೋರೇಜ್ ಹೊಂದಿರಬಹುದು ಎನ್ನಲಾಗಿದೆ.

ಕ್ಯಾಮರಾ ವಿಭಾಗದಲ್ಲಿ, Oppo Reno 10 Pro+ 50-ಮೆಗಾಪಿಕ್ಸೆಲ್ ಪ್ರಾಥಮಿಕ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು ಮತ್ತೊಂದು 64-ಮೆಗಾಪಿಕ್ಸೆಲ್ ಲೆನ್ಸ್ಗಳನ್ನು ಒಳಗೊಂಡಿರುವ ಎಲಿಪ್ಟಿಕಲ್ ಕ್ಯಾಮೆರಾ ಮಾಡ್ಯೂಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುವ ನಿರೀಕ್ಷೆಯಿದೆ. ಎಲ್ಲದಕ್ಕಿಂತ ವಿಶೇಷವಾಗಿ, ಮುಂಬರುವ Oppo Reno 10 Pro+ ಫೋನ್ 4,800mAh ಸಾಮರ್ಥ್ಯದ ಡ್ಯುಯಲ್-ಸೆಲ್ ಬ್ಯಾಟರಿ ಘಟಕವನ್ನು ಬೆಂಬಲಿಸಬಹುದೆಂದು ಹೇಳಲಾಗಿದೆ ಊಹಿಸುತ್ತದೆ. ಇದು ಯುಎಸ್ಬಿ ಟೈಪ್-ಸಿ ಪೋರ್ಟ್ನೊಂದಿಗೆ ಬರುವ ನಿರೀಕ್ಷೆಯಿದೆ.
oppo reno 10 pro+ features leaked in online.
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm