ಬ್ರೇಕಿಂಗ್ ನ್ಯೂಸ್
22-04-23 07:08 pm Source: Vijayakarnataka ಡಿಜಿಟಲ್ ಟೆಕ್
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಜನಪ್ರಿಯ ಟೆಕ್ ಬ್ರ್ಯಾಂಡ್ 'ಹಾನರ್' Honor ಇದೀಗ ಮತ್ತೊಂದು ಬಜೆಟ್ ಬೆಲೆಯ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಹಾನರ್ ಕಂಪೆನಿ ಕಳೆದ ವರ್ಷ ಪರಿಚಯಿಸಿದ್ದ Honor X40i ಉತ್ತರಾಧಿಕಾರಿಯಾಗಿ ಈ ಹೊಸ Honor X50i ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಸಾಧನವು 6.7-ಇಂಚಿನ ಫುಲ್-HD+ LTPS LCD ಡಿಸ್ಪ್ಲೇ, ಮಿಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್, 12GB RAM ಮತ್ತು 256GB ಸ್ಟೋರೇಜ್ ಹಾಗೂ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ನಂತಹ ವೈಶಿಷ್ಟ್ಯಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ಹೊಸ Honor X50i ಸ್ಮಾರ್ಟ್ಫೋನ್ ಹೇಗಿದೆ? ಮತ್ತು ಸ್ಮಾರ್ಟ್ಫೋನ್ ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
ನೂತನ Honor X50i ಸ್ಮಾರ್ಟ್ಫೋನ್ ಹೋಲ್-ಪಂಚ್ ಕಟೌಟ್ ವಿನ್ಯಾಸದಲ್ಲಿರುವ 6.7-ಇಂಚಿನ ಫುಲ್-HD+ LTPS LCD (1,080x2,388 ಪಿಕ್ಸೆಲ್ಸ್) ಡಿಸ್ಪ್ಲೇ ಹೊಂದಿದೆ. 19.9:9 ಆಕಾರ ಅನುಪಾತದಲ್ಲಿರುವ ಈ ಡಿಸ್ಪ್ಲೇಯು 90Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ ಎಂದು ಕಂಪೆನಿ ತಿಳಿಸಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, ಈ Honor X50i ಸ್ಮಾರ್ಟ್ಫೋನ್ 12GB RAM ಮತ್ತು 256GB ಸ್ಟೋರೇಜ್ ಜೊತೆಗೆ ಸಂಯೋಜಿಸಲಾದ ಅಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಹೊಂದಿದೆ ಮತ್ತು ಆಂಡ್ರಾಯ್ಡ್ 13 ಆಧಾರಿತ MagicOS 7.1 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 7GB ವರೆಗೆ ವರ್ಚುವಲ್ RAM ಬೆಂಬಲ ಕೂಡ ಇದೆ ಎಂದು ಕಂಪೆನಿ ಹೇಳಿದೆ.
ಕ್ಯಾಮೆರಾ ವಿಭಾಗದಲ್ಲಿ, Honor X50i ಸ್ಮಾರ್ಟ್ಫೋನ್ ಎಲ್ಇಡಿ ಫ್ಲ್ಯಾಶ್ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 100 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಲೆನ್ಸ್ಗಳಿಂದ ಶಕ್ತವಾಗಿದೆ. ಸೆಲ್ಫಿಗಳಿಗಾಗಿ, 8 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರುವ ಈ ಸ್ಮಾರ್ಟ್ಫೋನ್ ಇದು 35W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11a/b/g/n/ac, ಬ್ಲೂಟೂತ್ 5, GPS, AGPS, Beidou, Glonass ಮತ್ತು USB Type-C ಪೋರ್ಟ್ ವೈಶಿಷ್ಟ್ಯಗಳ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.
Honor X50i ಸ್ಮಾರ್ಟ್ಫೋನ್ ಬೆಲೆ ಎಷ್ಟು?
Honor X40i ಉತ್ತರಾಧಿಕಾರಿಯಾಗಿ ಬಂದಿರುವ ಈ ಹೊಸ Honor X50i ಸ್ಮಾರ್ಟ್ಫೋನ್ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಚೀನಾದಲ್ಲಿ 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ಮಾದರಿಗಳಲ್ಲಿ ಕ್ರಮವಾಗಿ CNY 1,399 (ಅಂದಾಜು 16,600 ರೂ) ಮತ್ತು CNY 1,699 (ಅಂದಾಜು 20,000 ರೂ) ಬೆಲೆಗಳಲ್ಲಿ ಈ Honor X50i ಸ್ಮಾರ್ಟ್ಫೋನನ್ನು ಪರಿಚಯಿಸಲಾಗಿದ್ದು, ಏಪ್ರಿಕಾಟ್ ಫ್ಲವರ್ ಫೆದರ್, ಮ್ಯಾಜಿಕ್ ನೈಟ್ ಬ್ಲ್ಯಾಕ್, ಮೊ ಯುಕ್ವಿಂಗ್ ಮತ್ತು ವಿಲೋ ವಿಂಡ್ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣ ಆಯ್ಕೆಗಳಲ್ಲಿ ಮಾರಾಟಕ್ಕೆ ಬರಲಿದೆ. ಇನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ Honor X50i ಸ್ಮಾರ್ಟ್ಫೋನ್ ಬಿಡುಗಡೆ ಕುರಿತಂತೆ ಕಂಪನಿಯು ಇನ್ನೂ ಘೋಷಿಸಬೇಕಾಗಿದೆ.
honor x50i with 100 megapixel dual rear cameras launched price, specifications.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm