ಬ್ರೇಕಿಂಗ್ ನ್ಯೂಸ್
17-02-23 08:53 pm Source: Vijayakarnataka ಡಿಜಿಟಲ್ ಟೆಕ್
ಚೀನಾದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ 240W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ Realme GT Neo 5 ಸ್ಮಾರ್ಟ್ಫೋನನ್ನು ಖರೀದಿಸಲು ನೀವು ಬಯಸುತ್ತೀದ್ದೀರಾ?. ಹಾಗಾದರೆ, ಶೀಘ್ರದಲ್ಲೇ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಬಹುದು.! ಹೌದು, ಈ ವರ್ಷದ MWC 2023 (ಮೊಬೈಲ್ ವರ್ಲ್ಡ್ ಕಾಂಗ್ರೆಸ್) ಈವೆಂಟ್ನಲ್ಲಿ 240W ಫಾಸ್ಟ್ ಚಾರ್ಜಿಂಗ್ ಬೆಂಬಲದ ರಿಯಲ್ಮಿ ಸ್ಮಾರ್ಟ್ಫೋನ್ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. Realme ಕಂಪೆನಿ ಈ ಬಗ್ಗೆ ಅಧಿಕೃತ ಮಾಹಿತಿ ಒದಗಿಸಿದ್ದು, ಫೆಬ್ರವರಿ 28, 2023 ರಂದು ಆಯೋಜನೆಯಾಗಿರುವ MWC 2023 ಈವೆಂಟ್ನಲ್ಲಿ 240W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿರುವ Realme GT3 ಸ್ಮಾರ್ಟ್ಫೋನನ್ನು ಪರಿಚಯಿಸುವುದಾಗಿ ತಿಳಿಸಿದೆ. Realme ಕಂಪೆನಿ ಈ ಬಗ್ಗೆ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಇದರ ಮೂಲಕ ತಿಳಿದುಬಂದಂತೆ,ಚೀನಾದಲ್ಲಿ ಬಿಡುಗಡೆಯಾಗಿರುವ Realme GT Neo 5 ಸ್ಮಾರ್ಟ್ಫೋನನ್ನು ಜಾಗತಿಕ ಮಾರುಕಟ್ಟೆಯಲ್ಲಿ Realme GT3 ಹೆಸರಿನಲ್ಲಿ ಪರಿಚಯಿಸಲಾಗುತ್ತಿದೆ.!
ವಿಶ್ವ ಸ್ಮಾರ್ಟ್ಫೋನ್ ಲೋಕದಲ್ಲೇ ಮೊಟ್ಟಮೊದಲ ಬಾರಿಗೆ 240W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ Realme GT Neo 5 ಸ್ಮಾರ್ಟ್ಫೋನನ್ನು ಚೀನಾದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಗೊಳಿಸಲಾಗಿತ್ತು. 240W ಫಾಸ್ಟ್ ಚಾರ್ಜಿಂಗ್ ಬ್ಯಾಟರಿ, 144Hz ಅಡಾಪ್ಟಿವ್ ರಿಫ್ರೆಶ್ ರೇಟ್ ಬೆಂಬಲ, 50-ಮೆಗಾಪಿಕ್ಸೆಲ್ ಸೋನಿ IMX890 ಲೆನ್ಸ್ ಮತ್ತು Snapdragon 8+ Gen 1 ಪ್ರೊಸೆಸರ್ ಹೊಂದಿರುವ ಕಾರ್ಯಕ್ಷಮತೆ ಕೇಂದ್ರಿತ ಪ್ರೀಮಿಯಂ ವೈಶಿಷ್ಟ್ಯಗಳಲ್ಲಿ Realme GT Neo 5 ಸ್ಮಾರ್ಟ್ಫೋನ್ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿತ್ತು. ಇದೀಗ ಇದೇ ಸ್ಮಾರ್ಟ್ಫೋನ್ Realme GT3 ಹೆಸರಿನಲ್ಲಿ ಭಾರತದಲ್ಲಿ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಹಾಗಾದರೆ, ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ನೂತನ Realme GT Neo 5 ಸ್ಮಾರ್ಟ್ಫೋನ್ ಹೇಗಿದೆ?, ಈ ಸ್ಮಾರ್ಟ್ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ವಿವರಗಳನ್ನು ನೋಡೋಣ ಬನ್ನಿ.
Realme GT Neo 5 ಸ್ಮಾರ್ಟ್ಫೋನ್ ಹೇಗಿದೆ?
ನೂತನ Realme GT Neo 5 ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ವಿಶಿಷ್ಟವಾದ ಹೊಳೆಯುವ ಆಯತಾಕಾರದ ಫ್ರೇಮ್ ಜೊತೆಗೆ ದೊಡ್ಡದಾದ ಕ್ಯಾಮೆರಾ ಸೆನ್ಸಾರ್ಗಳನ್ನು ಹೊಂದಿರುವ ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ 6.74-ಇಂಚಿನ 1.5K ರೆಸಲ್ಯೂಶನ್ AMOLED ಡಿಸ್ಪ್ಲೇ ಹೊಂದಿದ್ದು, ಇದು ಬರೋಬ್ಬರಿ 144Hz ಅಡಾಪ್ಟಿವ್ ರಿಫ್ರೆಶ್ ರೇಟ್ ಬೆಂಬಲ, 1400 ನಿಟ್ಸ್ ಗರಿಷ್ಠ ಬ್ರೈಟ್ನೆಸ್, 2160Hz UHF PWM ಡಿಮ್ಮಿಂಗ್ ಮತ್ತು 5000000:1 ಡೈನಾಮಿಕ್ ಕಾಂಟ್ರಾಸ್ಟ್ ಅನುಪಾತದಂತಹ ಇತ್ತೀಚಿನ ವೈಶಿಷ್ಟ್ಯಗಳಲ್ಲಿ ಬಂದಿದೆ. ಹುಡ್ ಅಡಿಯಲ್ಲಿ, 16GB RAM ಮತ್ತು 1TB ಸ್ಟೋರೇಜ್ ಜೊತೆಗೆ ಜೋಡಿಸಲಾಗಿರುವ Snapdragon 8+ Gen 1 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್ಫೋನ್ Android 13 ಆಧಾರಿತ Realme UI4.0 ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ವಿಭಾಗದಲ್ಲಿ, ಹೊಸ Realme GT Neo 5 ಸ್ಮಾರ್ಟ್ಫೋನಿನಲ್ಲಿ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ತರಲಾಗಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಶನ್) ಜೊತೆಗೆ 50-ಮೆಗಾಪಿಕ್ಸೆಲ್ ಸೋನಿ IMX890 ಲೆನ್ಸ್, ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ಗಳಿಂದ ಶಕ್ತವಾಗಿದೆ. ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ, 16-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, Realme GT Neo 5 ಸ್ಮಾರ್ಟ್ಫೋನ್, 240W ಚಾರ್ಜಿಂಗ್ ಬೆಂಬಲಿತ 4600mAh ಸಾಮರ್ಥ್ಯದ ಬ್ಯಾಟರಿ ಮತ್ತು 150W ಚಾರ್ಜಿಂಗ್ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯ ಎರಡು ಆಯ್ಕೆಗಳಲ್ಲಿ ಬಂದಿದ್ದು, ಕೇವಲ 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ ಸಾಮರ್ಥವನ್ನು ಹೊಂದಿರಲಿದೆ.
Realme GT Neo 5 ಸ್ಮಾರ್ಟ್ಫೋನ್ ಬೆಲೆ ಎಷ್ಟು?
ಇದೀಗ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿರುವ Realme GT Neo 5 ಸ್ಮಾರ್ಟ್ಫೋನ್ 150W ಮತ್ತು 240W ಚಾರ್ಜಿಂಗ್ ಬೆಂಬಲವಿರುವ ಎರಡು ಮಾದರಿಗಳಲ್ಲಿ ಮತ್ತು ವಿಭಿನ್ನ ಬೆಲೆಗಳಲ್ಲಿ ಮಾರಾಟಕ್ಕೆ ಬಂದಿದೆ. 240W ಸಾಮರ್ಥ್ಯದ Realme GT Neo 5 ಸ್ಮಾರ್ಟ್ಫೋನ್ 16GB + 256GB ಮಾದರಿಯು $470 (ಸುಮಾರು 38,000 ರೂ.) ಆರಂಭಿಕ ಬೆಲೆಯಲ್ಲಿ ಪ್ರಾರಂಭವಾಗಿದ್ದರೆ, ಇದರ 16GB + 1TB ಹೈ- ಎಂಡ್ ಮಾದರಿಯು $515 (ಅಂದಾಜು ರೂ. 41,700) ಬೆಲೆಯಲ್ಲಿ ಬಿಡುಗಡೆಯಾಗಿದೆ. 150Wಸಾಮರ್ಥ್ಯದ Realme GT Neo 5 ಸ್ಮಾರ್ಟ್ಫೋನ್ 8GB + 256GB, 12GB + 256GB ಮತ್ತು 16GB + 256GB ಮೂರು ಮಾದರಿಗಳಲ್ಲಿ ಕ್ರಮವಾಗಿ $368 (ರೂ. 29,800 ಅಂದಾಜು), $400 (ಅಂದಾಜು ರೂ. 32,100) ಮತ್ತು $427 (ರೂ. 34,500) ಬೆಲೆಗಳಲ್ಲಿ ಬಂದಿದೆ.
Realme gt3 with 240w charging is arriving on february 28.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm