ಬ್ರೇಕಿಂಗ್ ನ್ಯೂಸ್
17-05-22 03:27 pm Bangalore Correspondent ಕ್ರೈಂ
ಬೆಂಗಳೂರು, ಮೇ 17 : ಪ್ರಿಯಕರನಿಗಾಗಿ ಮನೆಯಲ್ಲಿದ್ದ ಚಿನ್ನವನ್ನೇ ಕದ್ದೊಯ್ದ ಮಗಳ ವಿರುದ್ಧ ತಾಯಿಯೇ ಪೊಲೀಸ್ ದೂರು ನೀಡಿದ್ದು ಚಿನ್ನ ಕದ್ದ ಆರೋಪದಲ್ಲಿ ಕತರ್ನಾಕ್ ಜೋಡಿ ಪೊಲೀಸರ ಬಲೆಗೆ ಬಿದ್ದಿದೆ. ಈ ವಿಲಕ್ಷಣ ಘಟನೆ ಅಮೃತಹಳ್ಳಿಯ ಜಕ್ಕೂರು ಲೇಔಟ್ನಲ್ಲಿ ನಡೆದಿದೆ. ದೀಪ್ತಿ (24) ಹಾಗೂ ಮದನ್(27) ಬಂಧಿತ ಜೋಡಿ.
ದೀಪ್ತಿ ತನ್ನ ಮನೆಯಲ್ಲಿದ್ದ ತಾಯಿಗೆ ಸೇರಿದ ಚಿನ್ನಾಭರಣವನ್ನು ಒಂದರ ನಂತರ ಮತ್ತೊಂದರಂತೆ ಕದ್ದು ಬರೋಬ್ಬರಿ ಒಂದು ಕೆಜಿ ಚಿನ್ನವನ್ನು ಪ್ರಿಯಕರನಿಗೆ ನೀಡಿದ್ದಳು. ಕದ್ದ ಚಿನ್ನವನ್ನು ಪ್ರಿಯಕರನ ಜೊತೆ ಸೇರಿ ಅಡವಿಟ್ಟು ಹಣ ಪಡೆದು ಮೋಜು ಮಾಡುತ್ತಿದ್ದರು. ದೂರು ಪಡೆದು ತನಿಖೆ ನಡೆಸಿದ ಅಮೃತಹಳ್ಳಿ ಪೊಲೀಸರು ಪ್ರೇಮಿಗಳ ಜೋಡಿಯನ್ನು ಬಂಧಿಸಿದ್ದಾರೆ.
ಆರೋಪಿ ದೀಪ್ತಿಗೆ ಮದುವೆಯಾಗಿ ಡೈವೋರ್ಸ್ ಆಗಿತ್ತು. ಮನೆಯಲ್ಲಿ ಅಮ್ಮ ಮತ್ತು ಮಗಳು ಮಾತ್ರ ವಾಸಿಸುತ್ತಿದ್ದಾರೆ. ಆರೋಪಿ ಮದನ್ ಕೂಡ ಮದುವೆಯಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಡ್ರೈವಿಂಗ್ ಸ್ಕೂಲ್ ಒಂದರಲ್ಲಿ ಟ್ರೈನರ್ ಆಗಿದ್ದು ಅದೇ ಶಾಲೆಗೆ ದೀಪ್ತಿ ಡ್ರೈವಿಂಗ್ ಕಲಿಯಲು ಹೋಗುತ್ತಿದ್ದಳು. ಈ ವೇಳೆ ಮದನ್ ಮತ್ತು ದೀಪ್ತಿ ನಡುವೆ ಪ್ರೇಮಾಂಕುರವಾಗಿತ್ತು.
ಆನಂತರ ಇಬ್ಬರೂ ಶೋಕಿ ಜೀವನ ಆರಂಭಿಸಿದ್ದು ಪ್ರಿಯತಮನಿಗಾಗಿ ಮನೆಯಲ್ಲಿದ್ದ ತಾಯಿಯ ಒಡವೆಯನ್ನೇ ಕದ್ದು ದೀಪ್ತಿ ನೀಡುತ್ತಿದ್ದಳು. ಅದರ ಬದಲಿಗೆ ತಾಯಿ ಕಪಾಟಿಗೆ ರೋಲ್ಡ್ ಗೋಲ್ಡ್ ಚಿನ್ನವನ್ನು ತಂದು ಇಟ್ಟಿದ್ದಳು. ಆದರೆ ಚಿನ್ನದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ತಾಯಿ ಮಗಳನ್ನು ಪ್ರಶ್ನಿಸಿದ್ದಳು. ಮಗಳ ಮೇಲೆಯೇ ಅನುಮಾನಗೊಂಡಿದ್ದ ತಾಯಿ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ವಿಚಾರಣೆ ವೇಳೆ ದೀಪ್ತಿಯ ಪ್ರೇಮದ ವಿಚಾರ ತಿಳಿಯುತ್ತಲೇ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್ನಲ್ಲಿ ಅಡಮಾನ ಇಟ್ಟಿದ್ದರು. ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಸದ್ಯ ಕಳವಾಗಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Bangalore Girl robs gold of her mother for the sake of her boyfriend, arrested. Both who pledged the gold were enjoying a lavish life. The arrested have been identified as Deepthi and Madan.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm