ಬ್ರೇಕಿಂಗ್ ನ್ಯೂಸ್
04-05-22 09:29 pm HK Desk News ಕ್ರೈಂ
ಲಕ್ನೋ, ಮೇ 4: ಅತ್ಯಾಚಾರ ಘಟನೆ ಬಗ್ಗೆ ದೂರು ನೀಡಲು ಹೋಗಿದ್ದ 13 ವರ್ಷದ ಬಾಲಕಿಯನ್ನು ಪೊಲೀಸ್ ಠಾಣಾಧಿಕಾರಿಯೇ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಲಲಿತಪುರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಸಂಬಂಧಿಸಿ ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಆರೋಪಿ ಠಾಣಾಧಿಕಾರಿ ತಿಲಕ್ ಧಾರಿ ಸರೋಜ್ ಎಂಬಾತನನ್ನು ಪ್ರಯಾಗ್ ರಾಜ್ ನಲ್ಲಿ ಬಂಧಿಸಲಾಗಿದೆ. ಎಪ್ರಿಲ್ 22ರಂದು ನಾಲ್ಕು ಮಂದಿ ಯುವಕರು ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದಾರೆ. ಪಾಲಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃತ್ಯದ ಬಳಿಕ ಆರೋಪಿಗಳ ಕೈಯಿಂದ ಬಾಲಕಿ ತಪ್ಪಿಸಿಕೊಂಡು ಬಂದಿದ್ದಳು.
ಆನಂತರ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾಗ, ತಿಲಕಧಾರ್ ಸರೋಜ್ ಎನ್ನುವಾತ ಮತ್ತೊಮ್ಮೆ ಆಕೆಯ ಮೇಲೆರಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಆನಂತರ ಲಲಿತಪುರ್ ಎಸ್ಪಿ ನಿಖಿಲ್ ಪಾಠಕ್ ಬಳಿಗೆ ದೂರು ಹೋಗಿದ್ದು, ಬಾಲಕಿಯೇ ಎಸ್ಪಿ ಮುಂದೆ ತನಗಾದ ಅನ್ಯಾಯದ ಬಗ್ಗೆ ದೂರು ಹೇಳಿಕೊಂಡಿದ್ದಾಳೆ. ಇದರಂತೆ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿ, ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ರಚಿಸಿದ್ದಾರೆ. ಆರೋಪಿ ಠಾಣಾಧಿಕಾರಿಯನ್ನೂ ಸೇವೆಯಿಂದ ಅಮಾನತು ಮಾಡಿದ್ದಾರೆ. ಮೂವರು ಬಂಧಿತರಲ್ಲಿ ರಾಜ್ ಭನ್, ಮಹೇಂದ್ರ ಮತ್ತು ಬಾಲಕಿಯ ಆಂಟಿ ಗುಲಾಬಿ ಬಾಯಿ ಆಗಿದ್ದಾರೆ.
A 13-year-old rape survivor was allegedly raped by the Station House Officer (SHO) when she went to report the incident at a police station in Lalitpur district of Uttar Pradesh. The SHO is on the run, and three of the five accused, including a woman, have been arrested so far. The SHO, Tilak Dhari Saroj, has been arrested from Prayagraj.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm